ನವದೆಹಲಿ, ಜುಲೈ 1: ದೇಶದ ಆರ್ಥಿಕ ಚಟುವಟಿಕೆಗಳ ವೇಗ ಹಾಗೂ ಆಮದು ವಹಿವಾಟಿನಲ್ಲಿನ ಭಾರಿ ಪ್ರಗತಿಯಿಂದಾಗಿ 2026ರ ಜೂನ್ ತಿಂಗಳ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆಯು ₹1,94,812 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದ (ಜೂನ್ 2025) ₹1.71 lakh ಕೋಟಿಗೆ ಹೋಲಿಸಿದರೆ ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಶೇ. 13.9 ರಷ್ಟು ಭರ್ಜರಿ ಬೆಳವಣಿಗೆ ಕಂಡುಬಂದಿದೆ. ಕೇಂದ್ರ ಹಣಕಾಸು ಸಚಿವಾಲಯದ ತಾತ್ಕಾಲಿಕ ಅಂಕಿ-ಅಂಶಗಳ ಪ್ರಕಾರ, ಆಮದು ಸುಂಕದ ಆದಾಯವು ಶೇ. 34.6 ರಷ್ಟು ಹೆಚ್ಚಾಗಿ ₹60,038 ಕೋಟಿಗೆ ತಲುಪಿರುವುದು ಈ ದಾಖಲೆಯ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ.
ಇನ್ನು, ರೀಫಂಡ್ಗಳೂ ಕೂಡ ಜೂನ್ನಲ್ಲಿ ಸಖತ್ ಹೆಚ್ಚಿವೆ. ₹32,436 ಕೋಟಿ ಮೊತ್ತದಷ್ಟು ರೀಫಂಡ್ಗಳನ್ನು ಸರ್ಕಾರ ನೀಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ರೀಫಂಡ್ 29.1% ಹೆಚ್ಚಿದೆ. ಇದರಿಂದಾಗಿ ನಿವ್ವಳ ಜಿಎಸ್‌ಟಿ ಸಂಗ್ರಹದ ಹೆಚ್ಚಳವು ಒಟ್ಟಾರೆ ಜಿಎಸ್‌ಟಿ ಏರಿಕೆಗಿಂತ ತುಸು ಕಡಿಮೆ ಇದೆ. ದತ್ತಾಂಶದ ಪ್ರಕಾರ, ಜೂನ್ ತಿಂಗಳಲ್ಲಿ ಸರ್ಕಾರದ ನಿವ್ವಳ ಜಿಎಸ್‌ಟಿ 11.2% ಏರಿಕೆಯಾಗಿ ₹1.62 ಲಕ್ಷ ಕೋಟಿ ತಲುಪಿದೆ.
ಇದನ್ನೂ ಓದಿ: ಹಳೆಯ ಸ್ಮಾರ್ಟ್ಫೋನ್ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ
ಕರ್ನಾಟಕ ಮತ್ತು ಇತರ ಪ್ರಮುಖ ರಾಜ್ಯಗಳ ಜಿಎಸ್‌ಟಿ ಸಂಗ್ರಹ
ದೇಶದ ಪ್ರಮುಖ ಕೈಗಾರಿಕಾ ಮತ್ತು ವಾಣಿಜ್ಯ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹವು ಅತ್ಯಂತ ಆಶಾದಾಯಕವಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಆರ್ಥಿಕ ಶಕ್ತಿ ಕೇಂದ್ರವಾದ ಕರ್ನಾಟಕವು ಮತ್ತೊಮ್ಮೆ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.
- ಕರ್ನಾಟಕ: ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹಣೆಯು ಭಾರಿ ಸದ್ದು ಮಾಡಿದ್ದು, ಜೂನ್ ತಿಂಗಳಿನಲ್ಲಿ ₹12,937 ಕೋಟಿ ಆದಾಯ ಗಳಿಸಿದೆ. ಕರ್ನಾಟಕವು ಎರಡಂಕಿ (Double-digit) ಪ್ರಗತಿ ದರವನ್ನು ಕಾಯ್ದುಕೊಳ್ಳುವ ಮೂಲಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಎರಡನೇ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ.
- ಮಹಾರಾಷ್ಟ್ರ: ದೇಶದಲ್ಲೇ ಎಂದಿನಂತೆ ಮೊದಲ ಸ್ಥಾನ ಕಾಯ್ದುಕೊಂಡಿರುವ ಮಹಾರಾಷ್ಟ್ರ, ಶೇ. 9 ರಷ್ಟು ಪ್ರಗತಿಯೊಂದಿಗೆ ₹30,714 ಕೋಟಿ ಜಿಎಸ್‌ಟಿ ಸಂಗ್ರಹಿಸಿದೆ. ಇದಕ್ಕೆ ಬೇಕಾಗಿರುವ
- ಗುಜರಾತ್: ಮೂರನೇ ಸ್ಥಾನದಲ್ಲಿರುವ ಗುಜರಾತ್ ರಾಜ್ಯವು ಭರ್ಜರಿ ಆರ್ಥಿಕ ಪ್ರಗತಿ ದಾಖಲಿಸಿ ₹11,743 ಕೋಟಿ ತೆರಿಗೆ ಗಳಿಸಿದೆ.
- ಉತ್ತರ ಪ್ರದೇಶ (UP): ಉತ್ತರ ಪ್ರದೇಶವು ಪ್ರಮುಖ ದೊಡ್ಡ ರಾಜ್ಯಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ದಾಖಲಿಸಿದೆ. ಯುಪಿ ಶೇ. 19 ರಷ್ಟು ಭಾರಿ ಜಿಗಿತದೊಂದಿಗೆ ಒಟ್ಟು ₹9,165 ಕೋಟಿ ಜಿಎಸ್‌ಟಿ ಸಂಗ್ರಹಿಸಿದೆ.
- ತಮಿಳುನಾಡು: ಆದರೆ, ತಮಿಳುನಾಡಿನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 2 ರಷ್ಟು ಸಣ್ಣ ಕುಸಿತ ಕಂಡುಬಂದಿದ್ದು, ಗಳಿಕೆ ₹9,776 ಕೋಟಿಗೆ ಸೀಮಿತವಾಗಿದೆ.
ಜೂನ್ 2026 ರ ಜಿಎಸ್‌ಟಿ ಗಳಿಕೆಯ ವಿವರಗಳು
ಒಟ್ಟು ಜಿಎಸ್‌ಟಿ ಸಂಗ್ರಹ: ₹1,94,812 ಕೋಟಿ (13.9% ಏರಿಕೆ)
- ಮಹಾರಾಷ್ಟ್ರ: ₹30,714 ಕೋಟಿ (9% ಏರಿಕೆ)
- ಕರ್ನಾಟಕ: ₹12,937 ಕೋಟಿ
- ಗುಜರಾತ್: ₹11,743 ಕೋಟಿ
- ತಮಿಳುನಾಡು: ₹9,776 ಕೋಟಿ (2% ಇಳಿಕೆ)
- ಉತ್ತರ ಪ್ರದೇಶ: ₹9,165 ಕೋಟಿ (19% ಏರಿಕೆ)
ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ
ಹಿನ್ನಡೆ ಅನುಭವಿಸಿದ ರಾಜ್ಯಗಳು: ದೇಶದ ಒಟ್ಟಾರೆ ಆರ್ಥಿಕತೆ ಮುನ್ನಡೆ ಸಾಧಿಸಿದ್ದರೂ, ಕೆಲವು ರಾಜ್ಯಗಳು ತೀವ್ರ ಹಿನ್ನಡೆ ಅನುಭವಿಸಿವೆ. ಸಿಕ್ಕಿಂ ರಾಜ್ಯದ ತೆರಿಗೆ ಸಂಗ್ರಹ ಶೇ. 53 ರಷ್ಟು ಕುಸಿದು ₹170 ಕೋಟಿಗೆ ತಲುಪಿದ್ದರೆ, ಪುದುಚೇರಿ ಶೇ. 28 ರಷ್ಟು ಹಾಗೂ ಹಿಮಾಚಲ ಪ್ರದೇಶ ಶೇ. 26 ರಷ್ಟು ನಷ್ಟ ಅನುಭವಿಸಿವೆ.
ಹಣಕಾಸು ತಜ್ಞರ ಪ್ರಕಾರ, ಜಾಗತಿಕ ಮಟ್ಟದ ಏರಿಳಿತಗಳು ಹಾಗೂ ಪಶ್ಚಿಮ ಏಷ್ಯಾದ ಆರ್ಥಿಕ ಸಂಕಷ್ಟಗಳ ನಡುವೆಯೂ ಭಾರತದ ಆಂತರಿಕ ಮಾರುಕಟ್ಟೆ ಮತ್ತು ಗ್ರಾಹಕರ ಬೇಡಿಕೆ ಅತ್ಯಂತ ಸದೃಢವಾಗಿದೆ ಎಂಬುದಕ್ಕೆ ಈ ಜಿಎಸ್‌ಟಿ ದಾಖಲೆಯೇ ಸಾಕ್ಷಿಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಮಾಸಿಕ ₹2 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗುವುದು ಸಾಮಾನ್ಯವಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
