ರಸ್ತೆ ಮಧ್ಯೆ ಮಾತ್ರ ಡಾಂಬರ್, ಸೈಡಲ್ಲಿ ಬರೀ ಮಣ್ಣು!; ಬೆಂಗಳೂರಿನ ಈ ವಿಲಕ್ಷಣ ರೋಡ್ ಕಾಮಗಾರಿ ನೋಡಿದ್ರೆ ತಲೆ ತಿರುಗುತ್ತೆ – Kannada News | Brand Bengaluru at Risk: Viral Photo Exposes Shoddy Road Construction Quality

ಬೆಂಗಳೂರು ಜು.1: ಟ್ರಾಫಿಕ್ ಜಾಮ್, ಗುಂಡಿ ಬಿದ್ದ ರಸ್ತೆಗಳು ಹಾಗೂ ಮುರಿದು ಬಿದ್ದ ಫುಟ್‌ಪಾತ್‌ಗಳಿಂದಲೇ ಸದಾ ಸುದ್ದಿಯಲ್ಲಿರುವ ರಾಜಧಾನಿ ಬೆಂಗಳೂರಿನ ರಸ್ತೆ ಕಾಮಗಾರಿಯ ಮತ್ತೊಂದು ವಿಚಿತ್ರ ಚಿತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ರಸ್ತೆಯೊಂದರ ಮಧ್ಯಭಾಗದಲ್ಲಿ ಮಾತ್ರ ಕಿರಿದಾದ ಪಟ್ಟಿಯಂತೆ ಡಾಂಬರು (Tar) ಹಾಕಿ, ರಸ್ತೆಯ ಎರಡೂ ಬದಿಗಳನ್ನು ಹಾಗೆಯೇ ಬಿಟ್ಟು ಧೂಳು ಮಯವಾಗಿಸಿರುವ ಫೋಟೋ ನೆಟ್ಟಿಗರ ಆಕ್ರೋಶ ಹಾಗೂ ಹಾಸ್ಯಕ್ಕೆ ಕಾರಣವಾಗಿದೆ.

ರೆಡ್ಡಿಟ್​​​ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, “ಬೆಂಗಳೂರಿನಲ್ಲಿ ಆಯ್ದ ಅಭಿವೃದ್ಧಿ” ಎಂದು ಬರೆದುಕೊಂಡು ಬಿಬಿಎಂಪಿ ಮತ್ತು ರಸ್ತೆ ಕಾಮಗಾರಿ ಗುತ್ತಿಗೆದಾರರ ವಿರುದ್ಧ ತೀವ್ರ ಸಾರ್ವಜನಿಕವಾಗಿ ವ್ಯಂಗ್ಯವಾಡಿದ್ದಾರೆ. ಚಿತ್ರದಲ್ಲಿ ರಸ್ತೆಯ ಮಧ್ಯಭಾಗದಲ್ಲಿ ಮಾತ್ರ ನಯವಾದ ಡಾಂಬರು ರಸ್ತೆ ಕಂಗೊಳಿಸುತ್ತಿದ್ದರೆ, ಅದರ ಎಡ ಮತ್ತು ಬಲ ಬದಿಗಳು ಕಲ್ಲು-ಮಣ್ಣುಗಳಿಂದ ಕೂಡಿದ್ದು ಸಂಪೂರ್ಣ ಧೂಳಿನಿಂದ ಆವೃತವಾಗಿವೆ. ಕಾಮಗಾರಿ ಪ್ರಗತಿಯಲ್ಲಿದ್ದಾಗ ಈ ಫೋಟೋ ತೆಗೆಯಲಾಗಿದೆಯೇ ಅಥವಾ ಕಾರ್ಮಿಕರು ಹಾಗೂ ಗುತ್ತಿಗೆದಾರರು ಅರ್ಧಕ್ಕೆ ಕೆಲಸ ನಿಲ್ಲಿಸಿ ಹೋಗಿರುವ ಕಳಪೆ ಕಾಮಗಾರಿ ಇದಾಗಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಐಟಿ ಸಿಟಿಯ ಈ ಚಿತ್ರ ಮಾತ್ರ ಸದ್ಯ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿದೆ.

ಇಲ್ಲಿದೆ ನೋಡಿ ಪೋಸ್ಟ್​​:

Selected development in Bengaluru 🤣 Imagine the amount of corruption, ignorance it takes to build such monumental roads.
by
u/No-Shopping-1103 in
bangalore

ಈ ವಿಲಕ್ಷಣ ಡಾಂಬರು ರಸ್ತೆಯ ಪೋಸ್ಟ್ ವೈರಲ್ ಆಗುವುದಕ್ಕೂ ಕೆಲವೇ ದಿನಗಳ ಮುನ್ನ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸದಾಗಿ ನಿರ್ಮಿಸಿದ್ದ ಪ್ರಮುಖ ರಸ್ತೆಯಲ್ಲಿ ಭಾರಿ ಬಿರುಕು ಹಾಗೂ ಕುಸಿತ ಉಂಟಾಗಿದೆ ಎಂಬ ವಿಡಿಯೋವೊಂದು ಹರಿದಾಡಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ಕಮಿಷನರ್ ಅವರು ಸ್ಪಷ್ಟನೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಸವಾರರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ನೈಸ್ ರಸ್ತೆ, ಇ-ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಏರಿಕೆ

ಆದರೆ, ಬ್ಯಾಕ್-ಟು-ಬ್ಯಾಕ್ ಇಂತಹ ಕಳಪೆ ಮೂಲಸೌಕರ್ಯದ ದೃಶ್ಯಗಳು ಮುನ್ನೆಲೆಗೆ ಬರುತ್ತಿರುವುದು ರಾಜ್ಯ ಸರ್ಕಾರ ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೆ ತರಲು ಬಯಸಿರುವ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ತೀವ್ರ ಹಿನ್ನಡೆ ಉಂಟುಮಾಡಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. “ನಾವು ಕಟ್ಟುವ ಭಾರಿ ತೆರಿಗೆಗೆ ಜಿಬಿಎ ಮತ್ತು ಬಿಬಿಎಂಪಿ ನೀಡುತ್ತಿರುವ ಕೊಡುಗೆ ಇದೇನಾ?” ಎಂದು ನಾಗರಿಕರು ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *