ಜೈಲಿಗೆ ತೆರಳಿ ಫ್ಯಾನ್ಸ್ ವಾರ್ ಬಗ್ಗೆ ದರ್ಶನ್​​ಗೆ ಮಾಹಿತಿ ನೀಡಿದ ವಿಜಯಲಕ್ಷ್ಮಿ: ದಾಸನ ರಿಯಾಕ್ಷನ್ ಏನು? – Kannada News | Vijayalakshmi Darshan talks with husband about fans war after Kichcha Sudeep Hubballi statement

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ವಿಜಯಲಕ್ಷ್ಮಿ (Vijayalakshmi Darshan) ಭೇಟಿ ಮಾಡಿ ಬಂದಿದ್ದಾರೆ. ಹುಬ್ಬಳಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ನೀಡಿದ ಹೇಳಿಕೆ ಬಳಿಕ ಶುರು ಆಗಿರುವ ಫ್ಯಾನ್ಸ್ ವಾರ್ ಕುರಿತು ದರ್ಶನ್ ಅವರಿಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸಹೋದರ ದಿನಕರ್ ತೂಗುದೀಪ ಕೂಡ ಜೊತೆಗಿದ್ದರು. ಜೈಲಿಗೆ ಭೇಟಿ ನೀಡಿ ಬಂದ ಬಳಿಕ ವಿಜಯಲಕ್ಷ್ಮಿ ದರ್ಶನ್ ಅವರು ಇನ್​ಸ್ಟಾಗ್ರಾಮ್​​ನಲ್ಲಿ ಖುಷಿಯಿಂದ ಪೋಸ್ಟ್ ಮಾಡಿದ್ದಾರೆ. ದಚ್ಚು-ಕಿಚ್ಚ ಫ್ಯಾನ್ಸ್ ವಾರ್ ನಡುವೆ ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ.

ಮಂಗಳವಾರ (ಡಿಸೆಂಬರ್ 23) ಮಧ್ಯಾಹ್ನ 3.50ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ ಮತ್ತು ದಿನಕರ್ ತೂಗುದೀಪ ಅವರು ದರ್ಶನ್ ಭೇಟಿ ಮಾಡಿ ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ವಾರ್ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಸಿನಿಮಾ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ‘ಯುದ್ದಕ್ಕೆ ಸಿದ್ಧ’ ಎಂಬ ಹೇಳಿಕೆ ನೀಡಿದ ನಂತರ ಶುರುವಾದ ಫ್ಯಾನ್ಸ್ ವಾರ್ ಸೇರಿದಂತೆ ಹೊರಗಡೆ ಸದ್ಯಕ್ಕೆ ಇರುವ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ. ಆದರೆ ನಟ ದರ್ಶನ್ ಅವರು, ‘ಯಾವುದಕ್ಕೂ ಹೆಚ್ಚು ತಲೆ ಕೆಸಿಕೊಳ್ಳಬೇಡಿ. ನಮಗೂ ಒಳ್ಳೆಯ ಸಮಯ ಬರುತ್ತದೆ. ಅಲ್ಲಿಯವರೆಗೆ ಕಾಯಬೇಕು’ ಎಂದು ಶಾಂತವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.

‘ದಿ ಡೆವಿಲ್’ ಸಿನಿಮಾದ ಬಗ್ಗೆ ದರ್ಶನ್ ಅವರು ಅಪ್ಡೇಟ್ ಕೇಳಿದ್ದಾರೆ. ಸಿನಿಮಾ ಕಲೆಕ್ಷನ್‌ ಸೇರಿದಂತೆ ಫ್ಯಾನ್ಸ್ ಸಪೋರ್ಟ್ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ತೂಗುದೀಪ ತಿಳಿಸಿದ್ದಾರೆ ಎನ್ನಲಾಗಿದೆ. ಪತಿ ಭೇಟಿ ಮಾಡಿ ಕೆಲ ಹೊತ್ತಿನಲ್ಲಿಯೇ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ ಭೇಟಿ ಬಳಿಕ ಮನಸ್ಸಿನ ದುಗುಡ ದೂರವಾಗಿ ಸಂತೋಷವಾಗಿರುವ ರೀತಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್

ಒಟ್ಟಿನಲ್ಲಿ ಹುಬ್ಬಳ್ಳಿಯ ಯುದ್ದಕ್ಕೆ ಸಿದ್ದ ಎಂಬ ಸಂದೇಶಕ್ಕೆ ಕಿಚ್ಚ ಸುದೀಪ್ ಸ್ಪಷ್ಟನೆ ನಡುವೆ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ದಚ್ಚು-ಕಿಚ್ಚನ ಫ್ಯಾನ್ಸ್ ವಾರ್​ಗೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದುನೋಡಬೇಕಿದೆ. ಡಿಸೆಂಬರ್ 25ರಂದು ಸುದೀಪ್ ಅವರ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗಲಿದೆ. ಎಂದು ಫ್ಯಾನ್ಸ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಕೂಡ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:33 pm, Tue, 23 December 25

Source link

Leave a Reply

Your email address will not be published. Required fields are marked *