‘ಟಾಕ್ಸಿಕ್’ ಸಿನಿಮಾದಲ್ಲೇ ‘ರಾಮಾಯಣ’ ಪ್ರಚಾರ; ಯಶ್ ಮಾಸ್ಟರ್ ಪ್ಲ್ಯಾನ್ – Kannada News | Yash’s Master Plan: Ramayana Teaser with Toxic Release! Double Dhamaka for Fans

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ (Toxic) ಆಗಸ್ಟ್ 26 ರಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಗೆ ಬರುತ್ತಿದೆ. ಈ ಚಿತ್ರದ ಬಿಡುಗಡೆಯ ಜೊತೆಗೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಯಶ್ ನಟನೆಯ ಮತ್ತೊಂದು ಬಿಗ್ ಬಜೆಟ್ ಚಿತ್ರ ‘ರಾಮಾಯಣ’ದ ಟೀಸರ್ ಅಥವಾ ಟ್ರೇಲರ್ ಅನ್ನು ‘ಟಾಕ್ಸಿಕ್’ ಸಿನಿಮಾದೊಂದಿಗೆ ಅಟ್ಯಾಚ್ ಮಾಡಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ

‘ಟಾಕ್ಸಿಕ್’ ಚಿತ್ರವನ್ನು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಲಿದ್ದಾರೆ. ಹೀಗಾಗಿ, ಈ ಸಿನಿಮಾದ ಥಿಯೇಟರ್ ರನ್ ಬಳಸಿಕೊಂಡೇ ‘ರಾಮಾಯಣ’ ಚಿತ್ರದ ಪ್ರಚಾರವನ್ನು ಮಾಡಲು ಯಶ್ ಮುಂದಾಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮೇಲೆ ಈಗಾಗಲೇ ದೇಶಾದ್ಯಂತ ಭಾರಿ ಕುತೂಹಲವಿದೆ. ಎರಡೂ ಸಿನಿಮಾಗೆ ಯಶ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿರುವುದರಿಂದ ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಹೀಗಾಗಿ, ಈ ನಿರ್ಧಾರ ಮಾಡಿದ್ದಾರೆ.

ಆಗಸ್ಟ್ 26ಕ್ಕೆ ಡಬಲ್ ಧಮಾಕಾ

ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿರುವುದು ಈಗಾಗಲೇ ಅಧಿಕೃತವಾಗಿದೆ. ಅದೇ ದಿನವೇ ‘ರಾಮಾಯಣ’ದ ಅಪ್‌ಡೇಟ್ ಕೂಡ ಸಿಕ್ಕರೆ ಯಶ್ ಅಭಿಮಾನಿಗಳ ಸಭ್ರಮ ಡಬಲ್ ಆಗುವುದರಲ್ಲಿ ಸಂಶಯವಿಲ್ಲ. ಒಂದೇ ಸಮಯದಲ್ಲಿ ತಮ್ಮ ಎರಡು ದೊಡ್ಡ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುತ್ತಿರುವ ಯಶ್ ಅವರ ಈ ಮಾಸ್ಟರ್ ಪ್ಲಾನ್ ಸದ್ಯ ಸಿನಿಮಾ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರವನ್ನು ತುಳಿಯಲು ಬಾಲಿವುಡ್​​ನಲ್ಲಿ ನಡೀತಿದೆ ಸೀಕ್ರೆಟ್ ಪ್ಲ್ಯಾನ್?

‘ಟಾಕ್ಸಿಕ್’ ಬಗ್ಗೆ

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಐವರು ನಾಯಕಿಯರು ಇದ್ದಾರೆ. ಈ ಸಿನಿಮಾ ತುಂಬಾನೇ ಪವರ್​​ಫುಲ್ ಆಗಿದೆ ಎಂದು ಊಹಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *