ದಾಖಲೆ ಬಜೆಟ್ ಮಂಡಿಸಲು ಸಜ್ಜಾಗುತ್ತಿರುವ ಸಿಎಂ: ಸಿದ್ದರಾಮಯ್ಯ 17ನೇ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ – Kannada News | CM Siddaramaiah Set to Present Record 17th Karnataka Budget on March 6; Huge Expectations from State Budget Session 2026

ಸಿದ್ದರಾಮಯ್ಯ ಬಜೆಟ್ (ಸಂಗ್ರಹ ಚಿತ್ರ)

ಬೆಂಗಳೂರು, ಮಾರ್ಚ್ 1: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 2026-27ನೇ ಸಾಲಿನ ಬಜೆಟ್‌ನಲ್ಲಿ (Karnataka Budget 2026) ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಲಿದ್ದು, ಜೊತೆಗೆ ಆರ್ಥಿಕ ಹೊರೆ ತಗ್ಗಿಸಲು ಯೋಜನೆಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಮೂಲಸೌಕರ್ಯ ಅಭಿವೃದ್ಧಿ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಒತ್ತು ನೀಡುವ ಸಾಧ್ಯತೆಯಿದೆ. ಇದು ಅವರ 17ನೇ ದಾಖಲೆಯ ಬಜೆಟ್ ಆಗಿರಲಿದೆ.

ಸಿದ್ದರಾಮಯ್ಯ ಬಜೆಟ್‌ ಮೇಲಿನ ಪ್ರಮುಖ ನಿರೀಕ್ಷೆಗಳು

  • ಗ್ಯಾರಂಟಿ ಯೋಜನೆಗಳಿಗೆ ಮಣೆ: ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯುವನಿಧಿ) ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ.
  • ಬಜೆಟ್ ಗಾತ್ರ ಮತ್ತು ಅಭಿವೃದ್ಧಿ: ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡಲು ಬಜೆಟ್ ಗಾತ್ರ ಹೆಚ್ಚಳವಾಗಬಹುದು.
  • ಕಳೆದ ವರ್ಷದ 55,877 ಕೋಟಿ ರೂ. ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಯೋಜನೆ.
  • ಆರ್ಥಿಕ ಶಿಸ್ತು: ಗ್ಯಾರಂಟಿ ಯೋಜನೆಗಳ ಭಾರವನ್ನು ನಿರ್ವಹಿಸಲು ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಆರ್ಥಿಕ ಸಮತೋಲನ ಸಾಧಿಸುವ ಸವಾಲು.
  • ಕೃಷಿ ಮತ್ತು ನೀರಾವರಿ: ನೀರಾವರಿ ಯೋಜನೆಗಳು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು.
  • ಪ್ರಾದೇಶಿಕ ಸಮತೋಲನ: ಕಲ್ಯಾಣ ಕರ್ನಾಟಕ ಸೇರಿದಂತೆ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಅನುದಾನ ನೀಡುವ ಸಾಧ್ಯತೆ.
  • ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಹೈನುಗಾರಿಕೆ, ಆರೋಗ್ಯ, ಸಾರಿಗೆ ಸೇರಿದಂತೆ ಹಲ ವಲಯಗಳಿಗೆ ಆದ್ಯತೆ.
  • ನೀರಾವರಿ ಯೋಜನೆಗಳಿಗೆ ಯಾವ ಪ್ರಮಾಣದಲ್ಲಿ ಹಣ ಮೀಸಲಿಡಬಹುದೆಂಬ ನಿರೀಕ್ಷೆ.
  • ಅದರಲ್ಲೂ ಬೆಂಗಳೂರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚು ಆದ್ಯತೆಯ ನಿರೀಕ್ಷೆ.
  • ಬೆಂಗಳೂರಿನ ಮೆಟ್ರೋ, ಡಬಲ್ ಡೆಕ್ಕರ್‌ಗೆ ಗಮನ.
  • ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗೆ ಹೊಸ ಕಾಲೇಜ್ ಗಳ ಘೋಷಣೆ.
  • ಹಿಂದುಳಿದ ವರ್ಗದ ಮಕ್ಕಳಿಗೆ ಯುಪಿಎಸ್ಸಿ ತಯಾರಿಗೆ ಆಶ್ರಯ.
  • ಮತ್ತಷ್ಟು ಕರ್ನಾಟಕ ಪಬ್ಲಿಕ್ ಶಾಲೆ ಘೋಷಣೆ ಮೂಲಕ ಬಲವರ್ಧನೆ.
  • ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ.
  • ಪ್ರವಾಸೋದ್ಯಮಕ್ಕೆ ಪಿಪಿಪಿ ಮಾದರಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು.
  • ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳು/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣ, ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ನಿರೀಕ್ಷೆ.
  • ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗಾಗಿ ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ ನಿರೀಕ್ಷೆ.
  • ವಿದ್ಯುತ್ ಮೇಲಿನ‌ತೆರಿಗೆಯನ್ನು ಇಳಿಸುವ ಸಾಧ್ಯತೆ.
  • 100 ಶೇಕಡಾ ನವೀಕರಿಸಬಹುದಾದ ಇಂಧನ ಬಳಸುವ ಕೈಗಾರಿಕೋದ್ಯಮಿಗಳಿಗೆ ಸಬ್ಸಿಡಿ.

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಿಂದ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಅದರ ಅಂಕಿ ಅಂಶಗಳನ್ನು ಗಮನಿಸುವುದಾದರೆ;

ನಗರ ಪಾಲಿಕೆ (ಕೋಟಿ ರೂ.ಗಳಲ್ಲಿ)

  • ಪೂರ್ವ 1,685
  • ಪಶ್ಚಿಮ 1,725
  • ಉತ್ತರ 1,205
  • ದಕ್ಷಿಣ 1,675
  • ಕೇಂದ್ರ 2,047

ರಾಜಧಾನಿ ಬೆಂಗಳೂರಿನ ಆಡಳಿತವನ್ನು ನಾಗರಿಕರ ಬಾಗಿಲಿಗೆ ಕೊಂಡೊಯ್ದು, ಸ್ಥಳೀಯ ಅಭಿವೃದ್ಧಿಗೆ ಒತ್ತು ನೀಡಲೆಂದೇ ರಚನೆಯಾಗಿರುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಂದ ರಾಜ್ಯ ಬಜೆಟ್‌ ಮೇಲೆ ಭಾರೀ ನಿರೀಕ್ಷೆ ಇದೆ. ಐದು ನಗರ ಪಾಲಿಕೆಗಳು ರಚನೆಯಾಗಿ ಐದು ತಿಂಗಳಾಗಿದ್ದು, ರಾಜ್ಯದ ಬಜೆಟ್‌ ಮಂಡನೆ ನಂತರ ಮಾರ್ಚ್‌ ಎರಡನೇ ವಾರದಲ್ಲಿ ಮೊದಲ ಆಯವ್ಯಯ ಮಂಡಿಸಲು ಈಗಾಗಲೇ ಸಿದ್ಧತೆ ನಡೆಸಿವೆ. ಬೃಹತ್‌ ಯೋಜನೆಗಳಿಗೆ ನಗರ ಪಾಲಿಕೆಯೊಳಗೆ ಹೆಚ್ಚಿನ ಅವಕಾಶವಿಲ್ಲ. ಹೀಗಾಗಿ, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಶೌಚಾಲಯ, ಕೆರೆ, ತೋಟಗಾರಿಕೆ, ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಗರ ಪಾಲಿಕೆಗಳು ಸಂಪನ್ಮೂಲ ಕ್ರೋಡೀಕರಣದಲ್ಲಿ ಇನ್ನೂ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಪ್ರತಿಯೊಂದು ವಿಭಾಗದ ಹಣವೂ ಜಿಬಿಎ ಖಾತೆಗೇ ಹೋಗುತ್ತಿದ್ದು, ಅಲ್ಲಿಂದ ಹಣ ವರ್ಗಾವಣೆಯಾಗಬೇಕಿದೆ. ಹೀಗಾಗಿ, ಆರ್ಥಿಕ ಸ್ವಾವಲಂಬನೆ ದೂರದ ಮಾತಾಗಿದೆ.

ಇದನ್ನೂ ಓದಿ: Iran Israel War: ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಯೇ ಆದ್ಯತೆ; ಸಿಎಂ ಸಿದ್ದರಾಮಯ್ಯ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿರುವುದರಿಂದ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಸ್ವಂತ ಸಂಪನ್ಮೂಲಗಳ ಕ್ರೋಢೀಕರಣದ ಮೇಲೆ ಗಮನ ಹರಿಸಬಹುದು. ಕಳೆದ ಬಾರಿಯ ಬಜೆಟ್ ಗಾತ್ರ 4,09,549 ರೂ. ಆಗಿದ್ದೂ, 17ನೇ ಬಜೆಟ್ ಗಾತ್ರವೂ ಸಾಮಾನ್ಯವಾಗಿ ಮತ್ತಷ್ಟು ಹಿಗ್ಗುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *