World Civil Defence Day 2026: ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು? – Kannada News | World Civil Defence Day 2026: What is the purpose behind celebrating World Civil Defence Day?

ವಿಶ್ವ ನಾಗರಿಕ ರಕ್ಷಣಾ ದಿನImage Credit source: vecteezy

ಈ ಪ್ರಪಂಚದಲ್ಲಿ ಹಲವಾರು ಅನಿಶ್ಚಿತ ಘಟನೆಗಳು ಸಂಭವಿಸುತ್ತಿರುತ್ತವೆ. ಕೆಲವೊಮ್ಮೆ ಪ್ರಕೃತಿ ವಿಕೋಪಗಳು ಸಂಭವಿಸಿದರೆ, ಇನ್ನೂ ಕೆಲವೊಮ್ಮೆ ಭಯಾನಕ ಅಪಘಾತ, ಯುದ್ಧಗಳು ಸಂಭವಿಸುತ್ತವೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿವಿಲ್‌ ಡಿಫೆನ್ಸ್‌ (Civil Defence) ಸಿಬ್ಬಂದಿಗಳು ತಮ್ಮ ಜೀವದ ಬಗ್ಗೆ ಕಿಂಚಿತ್ತೂ ಚಿಂತಿಸದೆ ನಾಗರಿಕ ರಕ್ಷಣೆಗಾಗಿ ಧಾವಿಸುತ್ತಾರೆ. ಇಂತಹ ಧೈರ್ಯಶಾಲಿ ಹಿರೋಗಳ ತ್ಯಾಗ, ಸೇವೆಯನ್ನು ಗೌರವಿಸಲು, ಮತ್ತು ಜನಸಾಮಾನ್ಯರಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸಲು, ವಿಪತ್ತುಗಳ ಸಂದರ್ಭದಲ್ಲಿ ಆತ್ಮರಕ್ಷಣೆ ಮತ್ತು ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್‌  1 ರಂದು ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವ ನಾಗರಿಕ ರಕ್ಷಣಾ ದಿನದ ಇತಿಹಾಸವೇನು?

ವಿಶ್ವ ನಾಗರಿಕ ರಕ್ಷಣಾ ದಿನವನ್ನು 1990 ರಲ್ಲಿ ಅಂತರರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ (ICDO) ಪ್ರಾರಂಭಿಸಿತು. ಮಾರ್ಚ್ 1, 1972 ರಂದು ಅಂತರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆಯಾಗಿ ICDO ಸ್ಥಾಪನೆಯಾದ ದಿನದ ಸ್ಮರಣಾರ್ಥ ಈ ದಿನವನ್ನು ಆಯ್ಕೆ ಮಾಡಲಾಗಿದೆ. ಅಂದಿನಿಂದ ಪ್ರತಿವರ್ಷ ಮಾರ್ಚ್‌ 1 ರಂದು ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ನಾಗರಿಕ ರಕ್ಷಣೆ ಎಂದರೆ ಯುದ್ಧಕಾಲದಲ್ಲಿ ನೆರವು ನೀಡುವುದು ಮಾತ್ರವಲ್ಲ, ಭೂಕಂಪಗಳು, ಪ್ರವಾಹಗಳು, ಬೆಂಕಿ ಅಥವಾ ಸಾಂಕ್ರಾಮಿಕ ರೋಗಗಳು (COVID-19 ನಂತಹ) ನಂತಹ ಬಿಕ್ಕಟ್ಟಿನ ಪರಿಸ್ಥಿತಿಯ ಸಮಯದಲ್ಲಿ ಜನರನ್ನು ರಕ್ಷಿಸುವುದಾಗಿದೆ.

ವಿಶ್ವ ನಾಗರಿಕ ರಕ್ಷಣಾ ದಿನದ ಮಹತ್ವವೇನು?

  • ಈ ದಿನವು ತುರ್ತು ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುತ್ತದೆ.
  • ತುರ್ತು ಸಂದರ್ಭಗಳಲ್ಲಿ ನಾಗರಿಕರನ್ನು ರಕ್ಷಿಸುವ ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿಗಳ ಕಾರ್ಯ, ತ್ಯಾಗವನ್ನು ಹೆಚ್ಚಾಗಿ ಗುರುತಿಸಲಾಗುವುದಿಲ್ಲ, ಆದ್ದರಿಂದ ಅವರ ಕೆಲಸಕ್ಕೆ ಧನ್ಯವಾದ ಹೇಳಲು ಈ ದಿನವನ್ನು ಆಚರಿಸಲಾಗುತ್ತದೆ.
  • ನಾವು ತರಬೇತಿ ಪಡೆದರೆ, ನಮ್ಮ ಸ್ವಂತ ಜೀವಗಳನ್ನು ಮತ್ತು ನಮ್ಮ ನೆರೆಹೊರೆಯವರ ಜೀವಗಳನ್ನು ಉಳಿಸಬಹುದು ಎಂದು ವಿಶ್ವ ನಾಗರಿಕ ರಕ್ಷಣಾ ದಿನವು ನಮಗೆ ಕಲಿಸುತ್ತದೆ.

ಇದನ್ನೂ ಓದಿ: ಫೆಬ್ರವರಿ 28 ರಂದೇ ಏಕೆ ವಿಜ್ಞಾನ ದಿನವನ್ನು ಆಚರಿಸುವುದು? ಇದರ ಹಿನ್ನೆಲೆಯನ್ನು ತಿಳಿಯಿರಿ

ಸಮಾಜಕ್ಕೆ ನಾಗರಿಕ ರಕ್ಷಣಾ ಪಡೆಯ ಕೊಡುಗೆ:

ನಾಗರಿಕ ರಕ್ಷಣಾ ಪಡೆ ಸ್ವಯಂಸೇವಕರು ಪ್ರಪಂಚದಾದ್ಯಂತ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ಪ್ರವಾಹವಾಗಲಿ, ಭೂಕುಸಿತ ಸಂಭವಿಸಲಿ ಅಥವಾ ಯಾವುದೇ ತುರ್ತು ಪರಿಸ್ಥಿತಿ ಸಂಭವಿಸಲಿ, ಈ ಸ್ವಯಂಸೇವಕರು ಸರ್ಕಾರಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ವಿಪತ್ತು ಸಂಭವಿಸಿದಾಗ, ಸರ್ಕಾರಿ ಸಹಾಯ ಬರುವ ಮೊದಲು ಸ್ಥಳೀಯ ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿಗಳು ನಾಗರಿಕರ ರಕ್ಷಣೆಗೆ ಪ್ರತಿಕ್ರಿಯಿಸುತ್ತಾರೆ. ಕೊರೊನಾ ಅವಧಿಯಲ್ಲಿ, ಇಡೀ ಜಗತ್ತೇ ಲಾಕ್‌ಡೌನ್ ಆದಾಗ, ನಾಗರಿಕ ರಕ್ಷಣಾ ಪಡೆ ಸಿಬ್ಬಂದಿ ಬೀದಿಗಿಳಿದು ಆಹಾರ ವಿತರಣೆ, ನೈರ್ಮಲ್ಯೀಕರಣ ಮತ್ತು ರೋಗಿಗಳಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂದು ಇಂತಹ ಸ್ವಯಂ ಸೇವಕರನಿಸ್ವಾರ್ಥ ಸೇವೆಗೆ ನಮನ ಸಲ್ಲಿಸುವ ದಿನ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *