ಹುಬ್ಬಳ್ಳಿ, (ಫೆಬ್ರವರಿ 16): ದಾರಿ ಬಿಡುವ ವಿಚಾರಕ್ಕೆ ಬಸ್ ಚಾಲಕ ಹಾಗೂ ಆಟೋ ಚಾಲಕನ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನೂರಾಣಿ ರಸ್ತೆಯ ಆಶ್ರಯ ಲಾಡ್ಜ್ ಬಳಿ ನಡೆದಿದೆ. ಬಸ್ ಹಾಗೂ ಆಟೋ ಹುಬ್ಬಳ್ಳಿಯ ನೂರಾಣಿ ರಸ್ತೆಯ ಆಶ್ರಯ ಲಾಡ್ಜ್ ಬಳಿ ಎದುರು ಬದುರಾಗಿ ಬಂದು ನಿಂತಿದ್ದು, ದಾರಿ ಬಿಡುವ ವಿಚಾರಕ್ಕೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ತನಕ ಹೋಗಿದ್ದು, ಬಸ್ ಚಾಲಕ, ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಟ್ರಾಪಿಕ್ ಜಾಮ್ ಉಂಟಾಗಿದ್ದರೂ ಸಹ ಸ್ಥಳಕ್ಕೆ ಪೊಲೀಸರ ಬರಲೇ ಇಲ್ಲ. ಇನ್ನು ಸ್ಥಳೀಯರು ಜಗಳ ಬಿಡಿಸಲು ಹರಸಾಹಸಪಟ್ಟಿದ್ದಾರೆ.
