ಮೇಷ ರಾಶಿ:
ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ಇಂದು ನಿಮ್ಮ ವಿರೋಧಿಗಳು ಏನಾದರೂ ತೊಂದರೆಯನ್ನು ಕೊಡಬಹುದು. ಆತುರದಲ್ಲಿ ಎಡವಿ ಬೀಳುವ ಸಾಧ್ಯತೆ ಇದೆ. ಸಣ್ಣ ಮನಸ್ತಾಪಗಳು ನಿಮಗೆ ಬೇಸರ ತರಿಸೀತು. ಬಂಧುಗಳ ಜೊತೆ ಹೆಚ್ಚು ಸಲುಗೆ ಇರಲಿದೆ. ಮಾತಿನ ವೇಗದಲ್ಲಿ ಗೌಪ್ಯತೆಯನ್ನು ಬಿಟ್ಟುಕೊಡುವಿರಿ. ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಬೇಡವೆಂದರೂ ಕೆಲವು ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳಬಹುದು.
ವೃಷಭ ರಾಶಿ:
ವ್ಯಕ್ತಿಗತವಾದ ದ್ವೇಷವನ್ನು ಸಂಸ್ಥೆಯ ಮೇಲೆ ತೋರಿಸುವಿರಿ. ನಿಮ್ಮ ಎಲ್ಲ ನಿರ್ಧಾರವೂ ಸರಿಯಾಗಿ ಇರುವುದು ಎಂಬ ಭ್ರಮಯಲ್ಲಿ ಇರುವುದು ಬೇಡ. ನೀವು ಕೊಟ್ಟ ಗೌರವಕ್ಕೆ ಗೌರವವೇ ಸಿಗುವುದು. ದುರಭಿಮಾನಕ್ಕೆ ಯಾವುದೇ ಮದ್ದು ಸಿಗದು. ಹೊಸದಾಗಿ ಬಂದ ಸಂಗಾತಿಯನ್ನು ನೀವು ಗೌರವಿಸುವಿರಿ. ನಿಮ್ಮ ಬುತ್ತಿಯನ್ನು ನೀವೇ ಉಣಬೇಕಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ಅಪಜಯವಾಗಬಹುದು.
ಮಿಥುನ ರಾಶಿ:
ನಂಬಿಕೆಯ ಆಧಾರದ ಮೇಲೆ ಹೂಡಿಕೆಗಳನ್ನು ಮಾಡಬೇಡಿ. ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಿರಿ. ನಿಮಗೆ ಲೆಕ್ಕಾಚಾರ ತಿಳಿದಿರಲಿ. ಗೊತ್ತಾಗದಂತೆ ಒತ್ತಡಕ್ಕೆ ಸಿಲುಕಿಕೊಳ್ಳುವಿರಿ. ವಿದ್ಯುತ್ ನಿಂದ ಅಪಾಯವಾಗಬಹುದು. ಇಂದು ಸಮಯವನ್ನು ಕಳೆಯುವ ಬಗ್ಗೆ ಚಿಂತೆಯಾದೀತು. ಯಾರದೋ ತಪ್ಪು ನಿಮ್ಮ ಮೇಲೆ ಬರಬಹುದು. ನಿಮ್ಮನ್ನು ಸಮಾಧಾನಪಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ.
ಕರ್ಕಾಟಕ ರಾಶಿ:
ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಆಸಕ್ತಿ ಇರುವುದು. ಕಾರ್ಯಸಾಧನೆಗೆ ಮೊದಲು ವಿಶ್ವಾಸವನ್ನು ಕಳಿಸಿಕೊಳ್ಳುವಿರಿ. ಬಡ್ಡಿ ಇಲ್ಲದೇ ನಿಮಗೆ ಸಾಲ ಸಿಗಲಿದೆ. ಹಿತಶತ್ರುಗಳನ್ನು ಹಿಮ್ಮೆಟ್ಟಿಸಲಾಗದು. ನಿಮಗೆ ಸಿಕ್ಕ ಸಮಯವನ್ನು ಅಂದುಕೊಂಡ ಕಾರ್ಯಕ್ಕೆ ಬಳಸುವಿರಿ. ಸಮಾಧಾನ ಚಿತ್ತದಿಂದ ಕುಳಿತು ಯೋಚಿಸಿ. ಆಪ್ತ ಸ್ನೇಹಿತರು ಪ್ರೀತಿಯ ಹಂಚಿಕೆಯಲ್ಲಿ ಬಹಳ ಉತ್ಸಾಹವನ್ನು ತೋರಿಸಬಹುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು.
ಸಿಂಹ ರಾಶಿ:
ಯಾರದೋ ಮಾತಿನಿಂದ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುವಿರಿ. ಪ್ರತ್ಯೇಕವಾಗಿ ಕಂಡಿದ್ದರ ಆಧಾರದ ಮೇಲೆ ಏನನ್ನಾದರೂ ಊಹಿಸಬೇಡಿ. ಇನ್ನೊಬ್ಬರ ಬಗ್ಗೆ ಮಾತಡುವ ಮೊದಲು ಯೊಚಿಸುವುದು ಒಳ್ಳೆಯದು. ಜನರನ್ನು ಮಾತಿನಿಂದ ಆಕರ್ಷಿಸುವಿರಿ. ನಿಮ್ಮ ಉದ್ಯೋಗಕ್ಕೆ ಬಲ ತಂದುಕೊಳ್ಳುವಿರಿ. ಆರ್ಥಿಕ ವಹಿವಾಟು ಅಧಿಕವಾಗಿದ್ದು, ಕಛೇರಿಯ ಕೆಲಸವೂ ಹೆಚ್ಚಾಗುವುದು. ಕಾನೂನಿನ ಹಾದಿಯು ನಿಮ್ಮನ್ನು ರಕ್ಷಿಸಬಹುದು.
ಕನ್ಯಾ ರಾಶಿ:
ದುರಭ್ಯಾಸವನ್ನು ಸ್ನೇಹಿತರು ನಿಮಗೆ ಹಿಡಿಸಬಹುದು. ವಿಶ್ವಾಸಘಾತಕರು ನಿಮ್ಮ ಬಳಿ ಸಾಲವನ್ನು ಕೇಳಲು ಬರಬಹುದು. ಕೊಡುವುದಕ್ಕೆ ಹೋಗಬೇಡಿ. ಮನೆಯಲ್ಲಿ ನಿಮ್ಮಿಂದ ಹಣವನ್ನು ಕೇಳಬಹುದು. ಸಂಗಾತಿಯ ಮಾತುಗಳು ನಿಮ್ಮ ಪ್ರೀತಿಯನ್ನು ಹೆಚ್ಚಿಸೀತು. ಮೇಲಧಿಕಾರಿಗಳ ಜೊತೆ ಸಂವಹನವು ಸಂತೋಷವಾಗುವಂತೆ ಇರುವುದು. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ನಿಮ್ಮವರನ್ಮು ನಿಮ್ಮವರೆನ್ನಲು ಹಿಂಜರಿಯುವಿರಿ.
ತುಲಾ ರಾಶಿ:
ಸೋಮಾರಿತನದಿಂದ ಆಗುವ ನಷ್ಟವು ಇಂದು ನಿಮಗೆ ಗೊತ್ತಾಗುವುದು. ಯಾವುದಕ್ಕೂ ಕೂಡಲೇ ಫಲವು ಸಿಗದು. ಅದು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ನಿಮಗೆ ಆಕರ್ಷಿತರಾಗಿ ನಿಮ್ಮ ಮಿತ್ರತ್ವವನ್ನು ಬಯಸಬಹುದು. ಹಣವನ್ನು ಅತಿಮುಖ್ಯವಾದ ಸಾಧನ ಎನ್ನಿಸದೇ ಇರಬಹುದು. ಮಾತಿನಿಂದ ನೀವು ಸಂಪತ್ತನ್ನು ಗಳಿಸುವಿರಿ. ಸಮಸ್ಯೆಗಳು ಬರುವಂತಹ ಮಾತುಗಳನ್ನು ಆಡಬೇಡಿ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ.
ವೃಶ್ಚಿಕ ರಾಶಿ:
ದೇಹಕ್ಕೆ ಸಂಬಂಧಪಟ್ಟಂತೆ ಅದರ ಆರೈಕೆಯನ್ನು ಹೆಚ್ಚು ಮಾಡುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಉಂಟಾಗುವುದು. ಅಧಿಕ ಹಣವನ್ನು ಸಂಪಾದಿಸಲು ನೀವು ಹೊಸ ಯೋಚನೆಯನ್ನು ಮಾಡುವಿರಿ. ವ್ಯವಹಾರ ಕುದುರದೇ ಬಂದ ದಾರಿಗೆ ಪ್ರಯೋಜನ ಆಗದು. ನಾಚಿಕೆಯ ಸ್ವಭಾವವು ಪಡೆದುಕೊಳ್ಳುವ ವಿಚಾರದಲ್ಲಿ ಹಿಂದೆ ಇರುವಂತೆ ಮಾಡೀತು. ಸಿಕ್ಕ ಅಧಿಕಾರವು ಅಲ್ಪ ಕಾಲದ್ದು ಎಂಬ ಭಾವ ಇರಲಿ. ಚಿಕ್ಕ ಕೆಲಸವಾದರೂ ಬಹಳ ಅಚ್ಚುಕಟ್ಟಿನಿಂದ ಮಾಡುವಿರಿ.
ಧನು ರಾಶಿ:
ನಿಮಗೆ ಸಂಬಂಧಿಸದ ಇನ್ನೊಬ್ಬರ ವಿಚಾರದಲ್ಲಿ ಮಧ್ಯಪ್ರವೇಶ ಬೇಡ. ಬೇಕಾದರೆ ಅವರೇ ಕರೆಯುತ್ತಾರೆ. ಯಾರನ್ನೋ ಮೆಚ್ಚಿಸಲು ಹೋಗಿ ಸಮಯವನ್ನು ಶ್ರಮವನ್ನೂ ವ್ಯಯಮಾಡಿಕೊಳ್ಳಬಹುದು. ಸ್ನೇಹಿತರ ಸತ್ಯವನ್ನು ಗುಟ್ಟು ಮಾಡಲು ಹೋಗಿ ಅದನ್ನೇ ಹೇಳಬೇಕಾದೀತು. ನಿಮ್ಮವರ ಮಾತು ಕೇವಲ ಭರವಸೆಯಾಗಿ ಇರುವುದೆಂದು ಅನ್ನಿಸಬಹುದು. ಅದನ್ನು ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ.
ಮಕರ ರಾಶಿ:
ನಿಮ್ಮ ಮಕ್ಕಳು ನಿರೀಕ್ಷೆಗಳನ್ನು ಹುಸಿಗೊಳಿಸದೇ ಸಮಾಧಾನ ಮಾಡಿ. ಕಾನೂನಿಗೆ ಸಮ್ಮತವಾಗಿರುವ ದಾಖಲೆಗಳು ಇರುವಾಗ ಭಯಪಡಬೇಕಾದ ಅವಶ್ಯಕತೆ ಇಲ್ಲ. ನಿಮಗಿಂದು ವಿಶ್ರಾಂತಿ ಬೇಕೆನಿಸಬಹುದು. ಒಮ್ಮೆಲೆ ಎಲ್ಲ ಕೆಲಸವನ್ನು ನಿಭಾಯಿಸುವುದು ಕಷ್ಟದ ಕೆಲಸ. ನಿಮ್ಮ ಕೆಲಸದಿಂದ ಅದ್ಭುತವನ್ನು ಸಾಧಿಸುವ ನಿರೀಕ್ಷಿಸುವಿರಿ. ಅಕಾಲದಲ್ಲಿ ಆಗುವ ಮಳೆಯಿಂದ ನಿಮಗೆ ಕಷ್ಟವೆನಿಸೀತು. ಅಕಾಲದಲ್ಲಿ ನಿಮ್ಮ ಪ್ರತಿಷ್ಠೆಯನ್ನು ತೋರಿಸುವುದು ಬೇಡ.
ಕುಂಭ ರಾಶಿ:
ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಹಳೆಯ ಖಾಯಿಲೆಗಳು ಪುನಃ ಬಂದೀತು. ವೈದ್ಯರ ಚಿಕಿತ್ಸೆಯನ್ನು ಒಡೆಯಿರಿ. ಅನಿರೀಕ್ಷಿತ ಹಣ ಬಂದರೂ ಕೂಡಲೇ ಖರ್ಚಾಗುವುದು. ಚೂರಾದ ಕನ್ನಡಿಯಲ್ಲಿ ಜೋಡಿಸಲಾಗದು. ಜೋಡಿಸದರೂ ಮೊದಲಿನಂತೆ ಸುಂದರವಾಗಿ ಕಾಣಿಸದು. ಹಿತಶತ್ರುಗಳನ್ನು ಸ್ವಂತ ಬುದ್ಧಿಯಿಂದ ಪ್ರಯತ್ನ ದೂರಮಾಡಬೇಕು. ಆಪತ್ತಿಗಾಗಿ ನೀವು ಹಣವನ್ನು ಸಂಗ್ರಹಿಸುವಿರಿ. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು.
ಮೀನ ರಾಶಿ:
ತಾಯಿಯ ಪ್ರೀತಿಯಿಂದ ನಿಮಗೆ ನೆಮ್ಮದಿ ಸಿಗಲಿದೆ. ಎಷ್ಟೇ ಪ್ರಯತ್ನಿಸಿದರೂ ಮನಸ್ಸು ನಕಾರಾತ್ಮಕ ಚಿಂತನೆಯನ್ನು ಬಿಡದು. ಸಂಗಾತಿಯ ಕೋಪವನ್ನು ಸಮಾಧಾನ ಮಾಡುವಿರಿ. ನಿಮ್ಮವರು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಹೇಳಿದರೂ ಅಂತರಂಗದಲ್ಲಿ ಬೇರೆಯದನ್ನೇ ಆಲೋಚಿಸುವರು. ನಿಮ್ಮ ನುಡಿಗಳು ಸಂಗಾತಿಗೆ ಹಿತವೆನಿಸಬಹುದು. ಬೇಡ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಗುರು, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಬ್ರಹ್ಮ, ಕರಣ : ಬಾಲವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:02 – 15:37, ಯಮಗಂಡ ಕಾಲ 06:04 – 07:40, ಗುಳಿಕ ಕಾಲ 09:15 – 10:51
-ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
