ಪುಣೆಯಲ್ಲಿ ಕಾರಿನ ಮೇಲೆ ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ – Kannada News | Pune 3 murder accused paraded on police vehicle bonnet woman attacked in slipper

ಪುಣೆ, ಜುಲೈ 22: ಮಹಾರಾಷ್ಟ್ರದ ಪುಣೆಯಲ್ಲಿ (Pune News) 17 ವರ್ಷದ ಬಾಲಕನನ್ನು ಅತ್ಯಂತ ಅಮಾನವೀಯವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಪೊಲೀಸರು ಭಾರಿ ಮಳೆಯ ನಡುವೆಯೇ ಪೊಲೀಸ್ ವಾಹನದ ಬಾನೆಟ್‌ಗೆ ಕಟ್ಟಿ, ಅಪರಾಧ ನಡೆದ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಆಕ್ರೋಶದಿಂದ ಆ ಮೂವರು ಕೊಲೆ ಆರೋಪಿಗಳಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ತಕ್ಷಣ ಪೊಲೀಸರು ಆಕೆಯನ್ನು ದೂರಕ್ಕೆ ಎಳೆದುಕೊಂಡು ಹೋಗಿದ್ದಾರೆ.

ಪುಣೆಯ ಕಾತ್ರಾಜ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಬಾಲಕನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಬಾಲಕ ತನ್ನ ಸ್ನೇಹಿತನೊಂದಿಗೆ ಮೊಬೈಲ್ ಫೋನ್ ತರಲು ಹೋಗಿದ್ದಾಗ, ಮೂರು ಬೈಕ್‌ಗಳಲ್ಲಿ ಬಂದ 7 ಮಂದಿ ಆತನನ್ನು ಬೆನ್ನಟ್ಟಿದ್ದರು. ಬಾಲಕ ತಪ್ಪಿಸಿಕೊಂಡು ಓಡಲು ಯತ್ನಿಸಿದನಾದರೂ, ದಾಳಿಕೋರರು ಆತನನ್ನು ಹಿಡಿದು ಚೂಪಾದ ಆಯುಧಗಳಿಂದ ಹಲ್ಲೆ ನಡೆಸಿದ್ದರು. ಆ ಬಾಲಕ ನೆಲಕ್ಕೆ ಕುಸಿದುಬಿದ್ದ ನಂತರವೂ ಆತನ ಮೇಲೆ ದಾಳಿ ಮುಂದುವರಿಸಿದ್ದರು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಹಳೇ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *