ಮೇಷ ರಾಶಿ:
ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ನೀವು ಇಂದು ವಾಹನಕ್ಕೆ ಸಂಬಂಧಿಸಿದಂತೆ ಹಣವನ್ನು ವ್ಯಯಿಸಬೇಕಾಗಬಹುದು. ಯಾರನ್ನಾದರೂ ಒಪ್ಪಿಸುವ ಜವಾಬ್ದಾರಿಯನ್ನು ನಿಮಗೆ ಕೊಡುವರು. ಯಾರಾದರೂ ನಿಮಗೆ ಇಂದು ಪ್ರೇರಣೆ ಆಗಬಹುದು. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ಸಂಗಾತಿಯ ಸಂಪೂರ್ಣ ಬೆಂಬಲವು ನಿಮಗೆ ಇರಲಿದೆ. ಫಲ ಸಿಗವವರೆಗೂ ನಿಮ್ಮ ಛಲವನ್ನು ಬಿಡಲಾರಿರಿ.
ವೃಷಭ ರಾಶಿ:
ಬರಬೇಕಾದ ಹಳೆಯ ಬಾಕಿಗಳು ಇಂದು ಬಂದು ಸೇರಲಿದೆ. ಸಂತೋಷ ಪಡಲು ನೀವು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ. ನೋವನ್ನು ಸ್ವಲ್ಪ ಕಾಲ ಮರೆಯುವಿರಿ. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ. ತಂದೆಯಿಂದ ಬೈಗುಳ ಪಡೆಯಬಹುದು. ಪಾಪದ ಪರಿಹಾರಕ್ಕಾಗಿ ಸಂಕಲ್ಪದಿಂದ ದಾನ ಮಾಡುವಿರಿ. ವ್ಯಾಪಾರ ವಲಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು.
ಮಿಥುನ ರಾಶಿ:
ಇಂದು ಇನ್ನೊಬ್ಬರ ಮಾತನ್ನೇ ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಇಂದು ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಮನಸ್ಸಿನ ತೊಳಲಾಟದಿಂದ ನಿಮಗೆ ಕಷ್ಟವಾಗಬಹುದು. ಏಕಾಗ್ರವಾಗಿ ಕೆಲಸ ಮಾಡಲಾಗದು. ನಿಮ್ಮ ಗಮನಸೆಳೆದು ವಂಚಿಸುವ ಕೆಲಸವು ನಡೆಯಬಹುದು. ಸಣ್ಣ ಆದಾಯವನ್ನು ನೀವು ಇಂದು ಪಡೆಯಬಹುದು. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿಕೊಳ್ಳಿ.
ಕರ್ಕಾಟಕ ರಾಶಿ:
ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಆಹಾರದ ವ್ಯತ್ಯಾಸದಿಂದ ಅನಾರೋಗ್ಯ ಹೆಚ್ಚಾಗುವುದು. ಚಾಡಿಯಿಂದ ಯಾರನ್ನಾದರೂ ಹಾಳು ಮಾಡುವ ಕೆಲಸವು ಇಂದು ನಿಮ್ಮಿಂದ ಆದೀತು. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.
ಸಿಂಹ ರಾಶಿ:
ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ ಸೂಚನೆ ಬರಬಹುದು. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ಕಟ್ಟಡದ ಕಾರ್ಯವು ಅಪೂರ್ಣವಾಗಿ ಮಾಲಿಕರಿಂದ ಹೇಳಿಸಿಕೊಳ್ಳಬೇಕಾಗುವುದು. ರಾಜಕೀಯಕ್ಕೆ ಹೋಗಲು ನಿಮಗೆ ಬೆಂಬಲವು ಸಿಗಲಿದೆ. ನೀವೂ ಬಹಳ ಉತ್ಸುಕರಾಗಿರುವಿರಿ. ಕಳೆದ ಸಮಯವನ್ನು ಚಿಂತಿಸುವಿರಿ. ಅನಿವಾರ್ಯವಾಗಿ ಮನೆಯಿಂದ ಹೊರಗೆ ವಾಸಮಾಡಬೇಕಾಗುವುದು.
ಕನ್ಯಾ ರಾಶಿ:
ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮಗಾಗದ ಕಾರ್ಯವನ್ನು ನೇರವಾಗಿ ಹೇಳುವಿರಿ. ನಿಮ್ಮ ಆಲೋಚನೆಗಳ ಬಗ್ಗೆ ಯೋಚಿಸುವುದು ಕೆಲವು ಪರಿಣಾಮಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆಯಬಹುದು.
ತುಲಾ ರಾಶಿ:
ನೀವು ಇಂದು ಏನನ್ನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದಾಂಪತ್ಯದಲ್ಲಿ ಬಿರಕು ಬರುವ ಸಾಧ್ಯತೆ ಇದೆ. ಕಳೆದುಹೋದ ವಸ್ತು ಯಾರದೋ ಮೂಲಕ ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ಅದಕ್ಕೋಸ್ಕರ ಪಶ್ಚಾತ್ತಾಪ ಪಡಬೇಕಾದೀತು. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂದು ಬುದ್ಧಿಯು ಊಹಿಸುತ್ತದೆ.
ವೃಶ್ಚಿಕ ರಾಶಿ :
ಸಂತರಿಗೆ ಸಮಾನವಾದ ವ್ಯಕ್ತಿಗಳಿಂದ ನಿಮಗೆ ಸಾಂತ್ವನ ಸಿಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ಸ್ಥಾನಭ್ರಷ್ಟರಾಗುವ ಭಯವು ನಿಮಗೆ ಕಾಡಬಹುದು. ನಿಮ್ಮ ಹಣವನ್ನು ಬೇರೆ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಸರ್ಕಾರಿ ನೌಕರರು ಹೆಚ್ಚಿನ ಕೆಲಸದ ಕಾರಣದಿಂದ ಇಂದು ಹೆಚ್ಚಿನ ಸಮಯವನ್ನು ಮಾಡಬೇಕಾಗುವುದು.
ಧನು ರಾಶಿ:
ಇಂದು ನಿಮ್ಮ ಮನೆಯ ಒತ್ತಡದದ ಕಾರಣ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದು. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ನಿಮ್ಮ ಮೇಲಿನ ಸಿಟ್ಟಿನಿಂದ ಯಾರೂ ಕೆಲಸವನ್ನು ಮಾಡಿಕೊಡದೇ ಇರಬಹುದು. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ. ವ್ಯಾಪಾರವನ್ನು ಹೆಚ್ಚಿಸಲು ಸೂಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಆದಾಯದ ಬಗ್ಗೆ ಗೌಪ್ಯತೆ ಇರಲಿ.
ಮಕರ ರಾಶಿ:
ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಇಬ್ಬರಿಗೂ ಸಂತೋಷವಾಗಲಿದೆ. ನೀವಂದುಕೊಂಡಿದ್ದೇ ಸತ್ಯ ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಿದ್ದರೆ ಅದರಿಂದ ಹೊರಬರುವುದು ಒಳ್ಳೆಯದು. ಇಂದಿನ ನಿಮ್ಮ ಪ್ರಯಾಣದಿಂದ ಕಷ್ಟವಾಗಬಹುದು. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸಿದೆ.
ಕುಂಭ ರಾಶಿ:
ಇಂದು ನೀವು ಭವಿಷ್ಯಕ್ಕಾಗಿ ಆರ್ಥಿಕತೆಯ ಬಗ್ಗೆ ಅಧಿಕ ಆಲೋಚನೆ ಮಾಡುವ ಸನ್ನಿವೇಶ ಬರಲಿದೆ. ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಮುಂದಾಳುತ್ವ ವಹಿಸದೇ ಕೆಲಸಗಳು ಮುನ್ನಡೆಯದು. ಬಹಳ ದಿನಗಳಿಂದ ನಿಮ್ಮ ಆರೋಗ್ಯವು ಹಳಿ ತಪ್ಪಿದ್ದರೂ ನೀವು ನಿರ್ಲಕ್ಷ್ಯ ತೋರಿಸುತ್ತಿರುವುದು ಒಳ್ಳೆಯದಲ್ಲ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಉತ್ತಮ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ.
ಮೀನ ರಾಶಿ:
ಕುಂಟು ನೆಪವನ್ನು ಹೇಳಿ ಇಂದಿನ ಸುತ್ತಾಟವನ್ನು ತಪ್ಪಿಸಿಕೊಳ್ಳುವಿರಿ. ತಿಳಿವಳಿಕೆ ಇಲ್ಲದವರ ನಿಮ್ಮ ವ್ಯವಹಾರಗಳನ್ನು ಹೇಳಬೇಡಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. ಪ್ರೇಮ ವಿವಾಹದಿಂದ ಸಂಕಷ್ಟ ಎನಿಸುವುದು. ಇಂದು ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ನೀಡಿದರೆ ಒಳ್ಳೆಯದು. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶನಿ ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಹರ್ಷಣ, ಕರಣ : ಬವ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:16 – 10:51, ಯಮಗಂಡ ಕಾಲ 13:59 – 15:34, ಗುಳಿಕ ಕಾಲ 06:08 – 07:42
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:39 am, Sat, 8 August 26
