ದಿನ ಭವಿಷ್ಯ: ಈ ರಾಶಿಯವರು ಇಂದು ತಮ್ಮ ದುರ್ವರ್ತನೆಯಿಂದ ಖ್ಯಾತರಾಗುವರು – Kannada News | Horoscope May 01 Friday 2026; Dina Rashi Bhavishya Today, Checkout the details here

ಮೇಷ ರಾಶಿ:

ಇಂದು ನಿಮಗೆ ಸ್ವಲ್ಪ ಆಯಾಸವು ಬಾಧಿಸಬಹುದು. ತಕ್ಕ ವಿಶ್ರಾಂತಿಯಿಂದ ಪರಿಹಾರವನ್ನು ಮಾಡಿಕೊಳ್ಳಿ. ನಿಮ್ಮ ಬುದ್ಧಿಯನ್ನು ಬೇಕಾದ ಕಡೆ ಉಪಯೋಗಿಸಿ. ಭೂಮಿಯ ವ್ಯವಹಾರದ ಬಗ್ಗೆ ತಾತ್ಸಾರವು ಯಾರದೋ ಕಾರಣಕ್ಕೆ ಬರಬಹುದು. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಕೆಲವನ್ನು ನೀವು ಮನಸ್ಸಿನಿಂದ ತೆಗೆದರಷ್ಟೇ ನೆಮ್ಮದಿ ಸಾಧ್ಯ.

ವೃಷಭ ರಾಶಿ:

ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ಅಧಿಕವಾದ ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗಬೇಡಿ. ಸಾಮರ್ಥ್ಯ ಮತ್ತು ಸಂಪತ್ತಿಗೆ ಅನುಸಾರವಾಗಿ ಯೋಚನೆ ಹಾಗೂ ಯೋಜನೆಗಳು ಇರಲಿ. ಅನಿರೀಕ್ಷಿತ ಬಂಧುಗಳ ಆಗಮನದಿಂದ ನಿಮ್ಮ ಕಾರ್ಯಕ್ಕೆ ತೊಂದರೆಯಾದರೂ ತೋರಿಸಿಕೊಳ್ಳಲು ಹೋಗದೇ ಸಂತೋಷದಿಂದ ಇರುವಿರಿ. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ.

ಮಿಥುನ ರಾಶಿ:

ನಿಮಗೆ ಆಪ್ತರ ಮಾತುಗಳು ಆತ್ಮಸ್ಥೈರ್ಯವನ್ನು ಹೆಚ್ಚಿಸುವುದು.‌ ಏನನ್ನಾದರೂ ಸಾಧಿಸಬೇಕು ಎನ್ನುವ ಛಲವು ನಿಮ್ಮ ನಿತ್ಯಮಂತ್ರವಾಗಲಿ. ವಿದ್ಯುತ್ ಯಂತ್ರದ ದುರಸ್ತಿಗೆ ಖರ್ಚು ಹೆಚ್ಚಾಗುವುದು. ಆರ್ಥಿಕ ವ್ಯವಹಾರ ಶುದ್ಧರಾಗಿರಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.

ಕರ್ಕಾಟಕ ರಾಶಿ:

ಭೂಮಿಯ ವ್ಯವಹಾರದ ಕಾರಣಕ್ಕೆ ಹೆಚ್ಚು ಓಡಾಟವನ್ನು ಮಾಡಬೇಕಾಗಿ ಬರಬಹುದು. ನಿಮ್ಮ ಪ್ರಭಾವವು ಜೊತೆಗಾರರಿಗೆ ಗೊತ್ತಾಗಲಿದೆ. ನಿಮ್ಮ ಸಹಾಯಕ್ಕೆ ಬರುವವರನ್ನು ಗೌರವಿಸಿ. ಸರಿಯಾದ ಸ್ಥಾನವನ್ನೂ ಕೊಡಬೇಕಾಗುವುದು. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ನಿಮ್ಮ‌ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು.

ಸಿಂಹ ರಾಶಿ :

ಇಂದು ನಿಮ್ಮಿಂದಾಗದ ಕಾರ್ಯವನ್ನು ಬೇರೆಯವರು ಮಾಡಿ ತೋರಿಸುವುದು ನಿಮಗೆ ಅಪಮಾನಕರವೆನಿಸವುದು. ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ವಿವಾಹದ ಬಗ್ಗೆ ಎಲ್ಲರೂ ನಿಮ್ಮನ್ನು ಪ್ರಶ್ನಿಸುವರು. ಮುಜುಗರಕ್ಕೆ ಸಿಕ್ಕಿಕೊಳ್ಳಬೇಕಾದೀತು.

ಕನ್ಯಾ ರಾಶಿ:

ಬೇಕಾದುದನ್ನು ಯಾರದೋ ಮೂಲಕ ಪಡೆಯುವುದು ಅನಿವಾರ್ಯವಾಗಬಹುದು. ಕಾಲಾನಂತರ ನಿಮಗೆ ಉತ್ತಮವಾದ ಫಲವನ್ನೇ ನೀಡುವುದು. ತಿಳಿದುಕೊಳ್ಳುವ ಕುತೂಹಲವು ನಿಮ್ಮಲಿಂದು ಅಧಿಕವಾಗಿರುವುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು.

ತುಲಾ ರಾಶಿ:

ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ನಿಮ್ಮನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಮುಂದಿನ ಹೆಜ್ಜೆಯನ್ನು ಇಡುವಾಗ ಜಾಗರೂಕರಾಗಿರಿ. ಕೃಷಿಯಲ್ಲಿ ಹೊಸ ಯೋಜನೆ ಮಾಡಲಿದೆ. ಸೋಲಬಾರದು ಎಂಬ ಛಲವು ಇದ್ದು ಕಾರ್ಯವನ್ನು ಮಾಡುವಿರಿ. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು. ‌

ವೃಶ್ಚಿಕ ರಾಶಿ:

ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ತಂದೆ ಮತ್ತು ತಾಯಿಯರು ನಿಮಗೆ ಹಿತವಚನವನ್ನು ಹೇಳುವರು. ಆಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಿ. ರಕ್ಷಣೆಗೆ ಸಂಬಂಧಿಸಿದ ಯಾವುದಾದರೂ ಉದ್ಯೋಗವು ಸಿಗಬಹುದು. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ನಿಮ್ಮ ನೆಮ್ಮದಿಯನ್ನು ನೀವೇ ಕಂಡುಕೊಳ್ಳಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು.

ಧನು ರಾಶಿ:

ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಖರ್ಚನ್ನು ಕಡಿಮೆಮಾಡಿಕೊಳ್ಳುವ ವಿಚಾರದಲ್ಲಿ ಚಿಂತಿಸುವುದು ಉತ್ತಮ. ಬಂಧುಗಳಿಂದ ನಿಮಗೆ ಬೇಕಾದುದು ಸಿಗದೇಹೋಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು.

ಮಕರ ರಾಶಿ:

ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಮಕ್ಕಳಿಂದ ನಿಮಗೆ ಖುಷಿಯಾಗಲಿದೆ. ಸ್ವಾವಲಂಬಿಯಾಗಲು ನಿಮ್ಮವರೇ ಬಿಡಲಾರರು. ಕುಟುಂಬವು ಯಾವತ್ತೂ ಇರುವಂತೆ ನಿಮ್ಮ ಬೆಂಬಲಕ್ಕೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ಉನ್ನತವಾದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆದಂತೆ ಅನಿಸುವುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ.

ಕುಂಭ ರಾಶಿ:

ಅಶುಭದ ಸೂಚನೆಯನ್ನು ನಿರ್ಲಕ್ಷಿಸುವುದು ಬೇಡ. ಸಂಪಾದನೆಗೆ ನೂರು ದಾರಿಗಳಿದ್ದರೂ ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರುತ್ತದೆ. ದುಡುಕಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ನಿಮಗೆ ಕೊಡುವ ಭರವಸೆಯು ನಿಮ್ಮಲ್ಲಿ ಬಲವನ್ನು ತರುವುದು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು.

ಮೀನ ರಾಶಿ:

ನೀವು ಇಂದು ಇರುವುದರಲ್ಲಿ ಖುಷಿಪಡುವುದು ಉತ್ತಮ. ಭೂಮಿಯ ಕ್ರಯ ಹಾಗೂ ವಿಕ್ರಯದ ವಿಚಾರದಲ್ಲಿ ನಿಮಗೆ ಲಾಭವಂತೂ ಸಿಗಲಿದೆ. ಕೃಷಿ ಭೂಮಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು. ಸಂಗಾತಿಯ ಜೊತೆ ಖುಷಿಯಿಂದ ಇರಲಿದ್ದೀರಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಸ್ವಾತಿ, ಯೋಗ : ಸಿದ್ಧಿ, ಕರಣ : ಬವ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:47 – 12:22, ಯಮಗಂಡ ಕಾಲ 15:31 – 17:05, ಗುಳಿಕ ಕಾಲ 07:38 – 09:13

-ಲೋಹಿತ ಹೆಬ್ಬಾರ್ – 8762924271 (what’s app only)

Source link

Leave a Reply

Your email address will not be published. Required fields are marked *