ವಿಶ್ವಾದ್ಯಂತ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಬೇರೆ ಬೇರೆ ಭಾಷೆಗಳಲ್ಲಿ, ಬೇರೆ ಬೇರೆ ರೀತಿಯ ಆಲೋಚನೆಗಳೊಂದಿಗೆ ಸಿನಿಮಾಗಳು ಮೂಡಿ ಬರುತ್ತವೆ. ಈಗ ಒಟಿಟಿ ಅಂಗೈಯಲ್ಲೇ ಇರುವುದರಿಂದ ಅವುಗಳನ್ನು ಸುಲಭದಲ್ಲಿ ವೀಕ್ಷಿಸಬಹುದು. ಅಮೇಜಾನ್ ಪ್ರೈಮ್ ವಿಡಿಯೋ (Prime Video) ಮೂಲಕ ಪ್ರಸಾರ ಆರಂಭಿಸಿರುವ ‘ದಿ ಶೀಪ್ ಡಿಟೆಕ್ಟಿವ್ಸ್’ ವೀಕೆಂಡ್ ವಾಚ್ಗೆ ಉತ್ತಮ ಆಯ್ಕೆ.
ಒಂದು ಸಾವು ಸಂಭವಿಸುತ್ತದೆ. ಆ ಕೊಲೆಯನ್ನು ಯಾರು ಮಾಡಿದ್ದು ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ಇಳಿಯೋದು ಸಾಮಾನ್ಯ. ಆದರೆ, ‘ದಿ ಶೀಪ್ ಡಿಟೆಕ್ಟಿವ್ಸ್’ ಚಿತ್ರದಲ್ಲಿ ಕುರಿಗಳು ತನಿಖೆಗೆ ಇಳಿಯುತ್ತವೆ. ತನ್ನ ಮಾಲೀಕನನ್ನು ಸಾಯಿಸಿದವರು ಯಾರು ಎಂಬುದನ್ನು ಅವೇ ಪತ್ತೆ ಹಚ್ಚುತ್ತವೆ. ಈ ರೀತಿಯ ಭಿನ್ನ ಆಲೋಚನೆಯೊಂದಿಗೆ ಸಿನಿಮಾ ಮೂಡಿ ಬಂದಿದೆ.
ಕುರಿಗಳಿಗೆ ಮಾತನಾಡಲು ಬರೋದಿಲ್ಲ. ಅವನ್ನು ದಡ್ಡ ಪ್ರಾಣಿಗಳು ಎಂದು ಕೂಡ ಪರಿಗಣಿಸಲಾಗುತ್ತದೆ. ಒಂದೊಮ್ಮೆ ಅವರಿಗೆ ಮಾತನಾಡಲು ಬಂದಿದ್ದರೆ ಅವು ಯಾವ ರೀತಿಯಲ್ಲಿ ತಮ್ಮ ಭಾವನೆಯನ್ನು ಹೊರಕ್ಕೆ ಹಾಕುತ್ತಿದ್ದವು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ‘ದಿ ಶೀಪ್ ಡಿಟೆಕ್ಟಿವ್ಸ್’ ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಭಿನ್ನ ಆಲೋಚನೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಕೈಲೆ ಬಾಲ್ದಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹುಗ್ ಜಾಕ್ಮ್ಯಾನ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಸ್ಪೆನ್ಸ್ ಜೊತೆಗೆ ಒಂದಷ್ಟು ಫನ್ ಹಾಗೂ ಜೀವನದ ಪಾಠಗಳನ್ನು ಹೇಳಿಕೊಡುವ ಪ್ರಯತ್ನ ನಡೆದಿದೆ ಎಂಬುದು ವಿಶೇಷ. ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇದನ್ನೂ ಓದಿ: ಸಾಕಷ್ಟು ಹಣ ಕೊಟ್ಟ ಬಳಿಕವೂ ಜಾಹೀರಾತು; ಅಮೆಜಾನ್ ಪ್ರೈಮ್ ವಿಡಿಯೋಗೆ ಕಾನೂನು ಸಂಕಷ್ಟ
ಡಬ್ಬಿಂಗ್ ಎಂಬುದು ಈಗ ತುಂಬಾನೇ ವಿಸ್ತಾರವಾಗಿ ಬೆಳೆದಿದೆ. ಇದು ಹಾಲಿವುಡ್ ಸಿನಿಮಾ ಆದರೂ ಕನ್ನಡದಲ್ಲೂ ಡಬ್ ಆಗಿ. ತುಂಬಾನೇ ಸುಂದರವಾಗಿ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲಾಗಿದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
