ಆಕ್ಲೆಂಡ್, ಜುಲೈ 11: ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ 3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ನ್ಯೂಜಿಲೆಂಡ್‌ಗೆ ಆಗಮಿಸಿದ್ದಾರೆ. ಸುಮಾರು 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇಂದು (ಶನಿವಾರ) ಆಕ್ಲೆಂಡ್‌ನ ಸ್ಪಾರ್ಕ್ ಅರೆನಾದಲ್ಲಿ ಭಾರತೀಯ ಸಮುದಾಯದಿಂದ “ಕಿಯಾ ಓರಾ ಮೋದಿ” ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಮೋದಿ ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್ ಸೇರಿದಂತೆ ಭಾರತೀಯ ಮೂಲದ ನ್ಯೂಜಿಲೆಂಡ್ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯರು “ಮೋದಿ, ಮೋದಿ!” ಎಂದು ಘೋಷಣೆ ಕೂಗುತ್ತಾ ಜೋರಾಗಿ ಜಯಘೋಷ ಹಾಕಿದರು.
ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಮಾವೋರಿ ಸಂಸ್ಕೃತಿಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಶತಮಾನಗಳಿಂದ ಜನರನ್ನು ಒಗ್ಗೂಡಿಸುತ್ತಿರುವ ‘ವಕಾ’ ಎಂಬ ಪದದ ಮಹತ್ವವನ್ನು ವಿವರಿಸಿದರು. “ವಕಾ ಎಂದರೆ ಅದು ಕೇವಲ ಒಂದು ಸಾಂಪ್ರದಾಯಿಕ ದೋಣಿ ಅಥವಾ ಹಡಗಲ್ಲ, ಅದು ನಮ್ಮ ಹಂಚಿಕೆಯ ಪ್ರಯಾಣದ ಸಂಕೇತವಾಗಿದೆ. ಇಂದು ಭಾರತ ಮತ್ತು ನ್ಯೂಜಿಲೆಂಡ್‌ನ ಜಂಟಿ ‘ವಕಾ’ ಒಂದು ಹೊಸ ಐತಿಹಾಸಿಕ ಪ್ರಯಾಣಕ್ಕೆ ಸಿದ್ಧವಾಗಿದೆ. ನಮ್ಮ ಮುಂದೆ ಅಪಾರ ಅವಕಾಶಗಳಿವೆ. ನಮ್ಮ ಈ ಪ್ರಯಾಣಕ್ಕೆ ಪೂರಕವಾದ ಗಾಳಿಯೂ ನಮ್ಮತ್ತ ಬೀಸುತ್ತಿದೆ” ಎಂದು ಬಣ್ಣಿಸಿದರು.
#WATCH | New Zealand | Amid loud cheers from people, Prime Minister Narendra Modi takes the stage at the community event in Auckland.
(Source: ANI/DD) pic.twitter.com/YrL4TT8sDc
— ANI (@ANI) July 11, 2026
ಇದನ್ನೂ ಓದಿ: 40 ವರ್ಷದ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ; ವಿಮಾನ ನಿಲ್ದಾಣದಲ್ಲೇ ಮೋದಿಯನ್ನು ಸ್ವಾಗತಿಸಿದ ನ್ಯೂಜಿಲೆಂಡ್ ಪಿಎಂ
ಅನಿವಾಸಿ ಭಾರತೀಯರಿಗೆ ಮೆಚ್ಚುಗೆ:
ಈ ಹೊಸ ಜಂಟಿ ಪ್ರಯಾಣದ ಯಶಸ್ಸಿನ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಈ ಪ್ರಯಾಣದ ಯಶಸ್ಸಿನ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ಕಾರಣವೇನೆಂದು ನಿಮಗೆ ಗೊತ್ತೇ? ಮೋದಿ ಇರುವುದರಿಂದಲ್ಲ, ಬದಲಿಗೆ ಈ ಪ್ರಯಾಣದ ನಿಜವಾದ ನಾವಿಕರು ನೀವೆಲ್ಲರೂ ಆಗಿದ್ದೀರಿ. ಆಕ್ಲೆಂಡ್‌ನಿಂದ ವೆಲ್ಲಿಂಗ್ಟನ್‌ವರೆಗೆ, ಕ್ರೈಸ್ಟ್‌ಚರ್ಚ್‌ನಿಂದ ಕ್ವೀನ್ಸ್‌ಟೌನ್‌ವರೆಗೆ ನ್ಯೂಜಿಲೆಂಡ್‌ನ ಪ್ರತಿ ಮೂಲೆಯಲ್ಲೂ ಹರಡಿರುವ ಭಾರತೀಯ ಸಮುದಾಯವೇ ಈ ಸುವರ್ಣ ಶತಮಾನದ ನಾವಿಕರು” ಎಂದು ಹೆಮ್ಮೆಯಿಂದ ಶ್ಲಾಘಿಸಿದ್ದಾರೆ.
#WATCH | New Zealand: At the community event in Auckland, PM Narendra Modi says, “Excellency, you are a super hit within the Indian community, a true sensation, and you certainly proved that. The dance performance alongside Chris Hipkins on India’s Independence Day to the song… pic.twitter.com/paiICQNpZ9
— ANI (@ANI) July 11, 2026
ನ್ಯೂಜಿಲೆಂಡ್ ದೇಶವು ಭಾರತೀಯ ಪ್ರತಿಭೆಗಳನ್ನು ಗೌರವಿಸುವ ಮತ್ತು ಮುಕ್ತ ಅವಕಾಶ ನೀಡುವ ಅದ್ಭುತ ತಾಣವಾಗಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ನ್ಯೂಜಿಲೆಂಡ್‌ನ ರಸ್ತೆ ಮತ್ತು ಸ್ಥಳಗಳಿಗೆ ಭಾರತೀಯ ನಗರಗಳ ಹೆಸರಿಟ್ಟು ಗೌರವಿಸಲಾಗಿದೆ. ಇಲ್ಲಿ ಸಿನಿಮಾಗಳಲ್ಲಿ ಬರುವ ರಸಮಯ ತಾಣ ‘ಖಂಡಾಲಾ’ ಇದೆ. ಬಾಂಬೆ ಹಿಲ್ಸ್, ಕೋರಮಂಡಲ್, ಕಲ್ಕತ್ತಾ ಸ್ಟ್ರೀಟ್, ಡೆಲ್ಲಿ ಕ್ರೆಸೆಂಟ್, ಅಮೃತಸರ ಸ್ಟ್ರೀಟ್‌ನಂತಹ ನೂರಾರು ಭಾರತೀಯ ಹೆಸರುಗಳು ಇಲ್ಲಿ ಜೀವಂತವಾಗಿವೆ ಎಂದು ಅವರು ನೆನಪಿಸಿದ್ದಾರೆ.
“Kia Ora Modi” diaspora event begins. PM Modi arrives to addres diaspora event event at Spark Arena, Auckland, New Zealand. pic.twitter.com/Nl3UJ30s36
— Sidhant Sibal (@sidhant) July 11, 2026
ಇದನ್ನೂ ಓದಿ: 40 ವರ್ಷಗಳಲ್ಲಿ ನ್ಯೂಜಿಲೆಂಡ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ನರೆಂದ್ರ ಮೋದಿ!
ಈ ಸಮಾವೇಶದಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮತ್ತು ಅವರ ಸರ್ಕಾರದ ಸಚಿವರಷ್ಟೇ ಅಲ್ಲದೆ, ಅಲ್ಲಿನ ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ನಾಯಕರೂ ಭಾಗವಹಿಸಿದ್ದರು. ಇದನ್ನು ಮುಕ್ತವಾಗಿ ಶ್ಲಾಘಿಸಿದ ಪ್ರಧಾನಿ ಮೋದಿ, “ಇದು ಭಾರತ ಮತ್ತು ನ್ಯೂಜಿಲೆಂಡ್ ಬಾಂಧವ್ಯಕ್ಕೆ ಅಲ್ಲಿನ ರಾಜಕಾರಣದಲ್ಲಿ ಇರುವ ಒಮ್ಮತದ ಹಾಗೂ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ತೋರಿಸುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:30 pm, Sat, 11 July 26
