Headlines

‘ಧುರಂಧರ್’ ನಟಿ ಆಯೇಷಾ ಖಾನ್ ನಿಶ್ಚಿತಾರ್ಥ? ರಹಸ್ಯ ವ್ಯಕ್ತಿಯ ಜೊತೆಗಿನ ಫೋಟೋ ವೈರಲ್ | Dhurandhar Actress Ayesha Khan Sparks Engagement Rumours With Mystery Man Photo

‘ಧುರಂಧರ್’ ಸಿನಿಮಾದ ‘ಶರಾರತ್’ ಹಾಡಿನ ಮೂಲಕ ಭಾರೀ ಸದ್ದು ಮಾಡಿದ್ದ ನಟಿ ಆಯೇಷಾ ಖಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರದಲ್ಲಿ ತಮ್ಮ ಗ್ಲಾಮರಸ್ ಡ್ಯಾನಸ್​ನಿಂದ ಪ್ರೇಕ್ಷಕರ ಮನ ಗೆದ್ದಿದ್ದ ಈ ನಟಿ, ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ.

ಆಯೇಷಾ ಖಾನ್ ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅವರ ಕೈಯಲ್ಲಿರುವ ವಜ್ರದ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಆಯೇಷಾ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎಂದು ಹುಬ್ಬೇರಿಸಿದ್ದಾರೆ. ಆದರೆ ಈ ಕಥೆಯಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ.

ಆಯೇಷಾ ತಮ್ಮ ಜೊತೆಗಿರುವ ವ್ಯಕ್ತಿಯ ಮುಖವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಜೊತೆಗೆ ಕೈಯಲ್ಲಿ ಡೈಮಂಡ್ ರಿಂಗ್ ಕಾಣಿಸುತ್ತಿದ್ದರೂ, ನಿಶ್ಚಿತಾರ್ಥ ಎಂದು ಹೇಳಿಲ್ಲ.ಇದು ಯಾವುದೋ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್‌ನ ಫೋಟೋಶೂಟ್ ಆಗಿರಬಹುದು ಎಂದು kಕೂಡ ಹೇಳಲಾಗುತ್ತಿದೆ. ಸದ್ಯ ಈ ಫೋಟೋ ಎಲ್ಲ ಕಡೆಗಳಲ್ಲಿ ಸುದ್ದಿ ಆಗುತ್ತಿರುವುದಂತೂ ನಿಜ.

‘ಧುರಂಧರ್’ ಚಿತ್ರದ ‘ಶರಾರತ್’ ಹಾಡಿನಲ್ಲಿ ಕೃಸ್ಟಲ್ ಡಿಸೋಜಾ ಜೊತೆ ಆಯೇಷಾ ಹೆಜ್ಜೆ ಹಾಕಿದ್ದರು. ಕರಾಚಿ ಮದುವೆಯ ಹಿನ್ನೆಲೆಯಲ್ಲಿ ಮೂಡಿಬಂದ ಈ ಹಾಡಿನ ಶೂಟಿಂಗ್ ವೇಳೆ ತಮಗೆ ದೈಹಿಕ ಹಾಗೂ ಮಾನಸಿಕವಾಗಿ ಕಷ್ಟವಾಗಿತ್ತು ಎಂದು ಆಯೇಷಾ ಈ ಹಿಂದೆ ತಿಳಿಸಿದ್ದರು. ಶೂಟಿಂಗ್ ಸಮಯದಲ್ಲಿ ಪೀರಿಯಡ್ಸ್ ನಲ್ಲಿದ್ದ ಕಾರಣ ಆಯಾಸಗೊಂಡು ಕಣ್ಣೀರಿಟ್ಟಿದ್ದಾಗಿ ಅವರು ತಿಳಿಸಿದ್ದರು.

ಇದನ್ನೂ ಓದಿ: ‘ಧುರಂಧರ್’ಗೆ ಕೌಂಟರ್ ಕೊಡಲು ಬಂದ ‘ಮೇರಾ ಲಿಯಾರಿ’ಗೆ ಹೀನಾಯ ಸೋಲು; ಕೇವಲ 22 ಟಿಕೆಟ್ ಮಾರಾಟ

ಪ್ರಸ್ತುತ ಈ ಫೋಟೋಶೂಟ್ ವಿಚಾರವಾಗಿ ನಟಿ ಆಯೇಷಾ ಖಾನ್ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವೈರಲ್ ಆಗಿರುವ ವಜ್ರದ ಉಂಗುರ ಹಾಗೂ ಮಿಸ್ಟ್ರಿ ಮ್ಯಾನ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ. ಅಭಿಮಾನಿಗಳು ಅವರ ಅಧಿಕೃತ ಅನೌನ್ಸ್‌ಮೆಂಟ್ ಒಂದಕ್ಕಾಗಿ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *