ಕೊಪ್ಪಳ, ಜುಲೈ 23: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಎರಡು ಸೋಲುಗಳಿಗೆ ಕೊಪ್ಪಳ, ಕನಕಗಿರಿ ಮತ್ತು ಯಲಬುರ್ಗಾ ಭಾಗದ ಸ್ಥಳೀಯ ಕಾಂಗ್ರೆಸ್ ನಾಯಕರೇ ಕಾರಣ ಎಂದು ಅನ್ಸಾರಿ ಆರೋಪಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಂಬಿ ತಾವು ಕಾಂಗ್ರೆಸ್ ಸೇರಿರುವುದಾಗಿ ಸ್ಪಷ್ಟಪಡಿಸಿದ ಅನ್ಸಾರಿ, ಎರಡು ಬಾರಿ ಟಿಕೆಟ್ ನೀಡಿದರೂ, ಸ್ಥಳೀಯ ನಾಯಕರು ತಮ್ಮನ್ನು ಸೋಲಿಸಲು ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಗೆ ಅವರನ್ನು ಸೋಲಿಸುವುದು ಕೇವಲ ಎರಡು ಸೆಕೆಂಡ್‌ಗಳ ಕೆಲಸ ಎಂದು ಹೇಳಿರುವ ಇಕ್ಬಾಲ್ ಅನ್ಸಾರಿ, ಶುಕ್ರವಾರದ ವೇಳೆ ಮಸೀದಿಗೆ ಒಂದು ಪತ್ರ ಬರೆದು ಮನವಿ ಮಾಡಿದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಬಹುದು. ಆದರೆ ತಾನು ದೈವ ಭಕ್ತನಾಗಿರುವುದರಿಂದ ಮೋಸ ಮಾಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ಜೆಡಿಎಸ್ ಅಥವಾ ಬಿಜೆಪಿ ಸೇರುವ ವದಂತಿಗಳು ಹರಡುತ್ತಿದ್ದು, ಇದು ಗಾಳಿಸುದ್ದಿ ಎಂದು ಅವರು ತಳ್ಳಿಹಾಕಿದ್ದಾರೆ. ತಾವು ಈಗಲೂ ಕಾಂಗ್ರೆಸ್‌ನಲ್ಲಿಯೇ ಇದ್ದು, ಸತ್ಯಾಸತ್ಯತೆಯನ್ನು ಜನರು ತಿಳಿದುಕೊಳ್ಳಬೇಕು ಎಂದು ಅನ್ಸಾರಿ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
