ನಿವೃತ್ತಿ ಘೋಷಿಸಿದ ಬಳಿಕ ಕಾಮೆಂಟಟರಿಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಡಿವಿಲಿಯರ್ಸ್, ತಮ್ಮ ಅಭಿಪ್ರಾಯದಲ್ಲಿ ವಿಶ್ವದ ಟಾಪ್ 3 ಬ್ಯಾಟ್ಸ್‌ಮನ್‌ಗಳು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಜೀವನದಲ್ಲಿ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಬಣ್ಣಿಸಿರುವ ಎಬಿ ಡಿವಿಲಿಯರ್ಸ್, ಕೊಹ್ಲಿಯ ಶಾಂತತೆ, ವಿಶೇಷವಾಗಿ ಒತ್ತಡದ ರನ್ ಚೇಸ್‌ಗಳಲ್ಲಿ, ಗುರಿಯನ್ನು ತಲುಪುವಲ್ಲಿ ಅವರ ಕೌಶಲ್ಯ ಮತ್ತು ಇನ್ನಿಂಗ್ಸ್ ಅನ್ನು ನಿಯಂತ್ರಿಸುವ ಅವರ ಸಾಮರ್ಥ್ಯವನ್ನು ಅಸಾಧಾರಣ ಎಂದು ಶ್ಲಾಘಿಸಿದ್ದಾರೆ (PC-PTI).
