Headlines

ನಮ್ಮ ಒಂದೇ ಒಂದು ಸೇತುವೆ ಮುಟ್ಟಿದರೂ ಸುಮ್ಮನಿರಲ್ಲ, ಟ್ರಂಪ್ ಬೆದರಿಕೆಗೆ ಇರಾನ್ ಭಾರಿ ತಿರುಗೇಟು, ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ – Kannada News | US Iran Escalation: Trump’s Infrastructure Threats and Iran’s Retaliation in Hormuz Strait

ಟೆಹ್ರಾನ್, ಜುಲೈ 23: ಇರಾನ್(Iran) ಹಾಗೂ ಅಮೆರಿಕ ನಡುವಿನ ಸಂಘರ್ಷ ಈಗ ಮೂಲಸೌಕರ್ಯ ಮತ್ತು ಇಂಧನ ನೆಲೆಗಳನ್ನು ಧ್ವಂಸಗೊಳಿಸುವ ಹಂತಕ್ಕೆ ಬಂದು ತಲುಪಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್​ನ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ, ಪ್ರದೇಶದಾದ್ಯಂತ ಇರುವ ಅಮೆರಿಕನ್ ಹಿತಾಸಕ್ತಿಯ ಎಲ್ಲಾ ಸೇತುವೆಗಳು ಹಾಗೂ ಇಂಧನ ಮೂಲಸೌಕರ್ಯಗಳನ್ನು ನಾವು ಧ್ವಂಸಗೊಳಿಸುತ್ತೇವೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇರಾನಿನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಅಮೆರಿಕನ್ನರು ಇರಾನ್‌ನ ಯಾವುದೇ ವಿದ್ಯುತ್ ಸ್ಥಾವರ ಅಥವಾ ಸೇತುವೆಯನ್ನು ಗುರಿಯಾಗಿಸಿಕೊಂಡರೆ, ಇಡೀ ಪಶ್ಚಿಮ ಏಷ್ಯಾ ಪ್ರಾಂತ್ಯದಲ್ಲಿ ಅಮೆರಿಕ ಆಸಕ್ತಿ ಹೊಂದಿರುವ ಮೂಲಸೌಕರ್ಯಗಳ ಮೇಲೆ ಇರಾನ್ ತಕ್ಷಣವೇ ಪ್ರತ್ಯಾಕ್ರಮಣ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್ ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಅರಘ್ಚಿ ಐ ಫಾರ್ ಆ್ಯನ್ ಐ ಸಿದ್ಧಾಂತವನ್ನು ಪುನರುಚ್ಚರಿಸಿದ್ದು, ನಮ್ಮ ದೇಶದ ಮೂಲಸೌಕರ್ಯಗಳ ಮೇಲೆ ಯಾವುದೇ ದಾಳಿ ನಡೆದರೂ ಅದಕ್ಕೆ ತಕ್ಕ ಮತ್ತು ಪ್ರಬಲ ಪ್ರತ್ಯುತ್ತರ ನೀಡುವುದಂತೂ ಸತ್ಯ. ಹಾರ್ಮುಜ್ ಜಲಸಂಧಿಯ ಮೇಲಿನ ಸಾರ್ವಜನಿಕ ಸಾರ್ವಭೌಮತ್ವ ಮತ್ತು ನಿಯಂತ್ರಣವನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಓದಿ: ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಟ್ರಂಪ್​ಗೆ ಎಚ್ಚರಿಕೆ!

ಸತತ 12 ನೇ ರಾತ್ರಿಯೂ ಅಮೆರಿಕ ಕ್ಷಿಪಣಿ ದಾಳಿ: ಹೆಚ್ಚಿದ ಸಾವು-ನೋವು
ಒಂದೆಡೆ ಬೆದರಿಕೆಗಳ ವಿನಿಮಯ ನಡೆಯುತ್ತಿದ್ದರೆ, ಇನ್ನೊಂದೆಡೆ ಸಮರ ಭೂಮಿಯಲ್ಲಿ ಭಾರಿ ಹಾನಿ ಸಂಭವಿಸುತ್ತಿದೆ. ಇರಾನ್ ವಿರುದ್ಧ ಸತತ 12 ನೇ ರಾತ್ರಿಯೂ ಭಾರಿ ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆ  ದೃಢಪಡಿಸಿದೆ. ಪಶ್ಚಿಮ ಇರಾನ್‌ನ ಅಹ್ವಾಜ್, ರಾಮ್‌ಶೀರ್ ಮತ್ತು ಶಾಲಮ್ಚೆ ಗಡಿ ಭಾಗಗಳಲ್ಲಿ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.

ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳ ತಡೆ

ಸಂಘರ್ಷದ ನಡುವೆಯೇ ಇರಾನ್‌ನ ‘ರೆವಲ್ಯೂಷನರಿ ಗಾರ್ಡ್ಸ್’  ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಯತ್ನಿಸುತ್ತಿದ್ದ ಮೂರು ತೈಲ ಟ್ಯಾಂಕರ್‌ಗಳನ್ನು ತಡೆದಿರುವುದಾಗಿ ಹೇಳಿಕೊಂಡಿದೆ. ದಾಳಿಯ ಭೀತಿಯಿಂದ ಒಂದು ಹಡಗು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡರೆ, ಉಳಿದೆರಡು ಹಡಗುಗಳು ವಾಪಸ್ ತೆರಳಿವೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಆತಂಕಕ್ಕೆ ಕಾರಣವೇನು?
ಪ್ರಪಂಚದ ಶೇಕಡಾ 20 ಕ್ಕೂ ಹೆಚ್ಚು ಕಚ್ಚಾ ತೈಲ ಮತ್ತು ಅನಿಲ ಸಾಗಣೆಯಾಗುವುದು ಕೇವಲ ‘ಹಾರ್ಮುಜ್ ಜಲಸಂಧಿ’ಎಂಬ ಕಿರಿದಾದ ಜಲಮಾರ್ಗದ ಮೂಲಕವೇ. ಅಮೆರಿಕ ಮತ್ತು ಇರಾನ್ ನಡುವಿನ ಸರಣಿ ದಾಳಿಗಳಿಂದಾಗಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಸ್ತಬ್ಧಗೊಂಡರೆ, ಇಡೀ ವಿಶ್ವದಲ್ಲಿ ತೈಲ ಅಭಾವ ಸೃಷ್ಟಿಯಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುವ ಭೀತಿ ಎದುರಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *