Headlines

ಶಿಲ್ಪಾ ಶೆಟ್ಟಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಐಪಿಎಲ್ ಟೀಮ್ ಕೊಟ್ಟಿದ್ದ ರಾಜ್ ಕುಂದ್ರಾ – Kannada News | Raj Kundra 82 Cr IPL Gift to Shilpa Shetty: Revealed In Interview

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹಳೆಯ ನೆನಪೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪತ್ನಿ ಶಿಲ್ಪಾ ಶೆಟ್ಟಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ನೀಡಲು ಐಪಿಎಲ್ ತಂಡದ ಪಾಲನ್ನು ಖರೀದಿಸಿದ್ದಾಗಿ ಹೇಳಿದ್ದಾರೆ. ಅವರು ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರಾಗಿದ್ದರು.

82 ಕೋಟಿ ರೂಪಾಯಿಯ ವ್ಯಾಲೆಂಟೈನ್ಸ್ ಡೇ ಗಿಫ್ಟ್

ರಾಜ್ ಕುಂದ್ರಾ 2009ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪಾಲನ್ನು ಖರೀದಿಸಿದ್ದರು. ಇದಕ್ಕಾಗಿ ಅವರು ಬರೋಬ್ಬರಿ 81.9 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ‘ನಾನು ಇದನ್ನು ಶಿಲ್ಪಾಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ನೀಡಿದ್ದೆ’ ಎಂದಿದ್ದಾರೆ. ಅಂದು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ರಾಜ್ ಕುಂದ್ರಾ ಶೇಕಡಾ 11.7 ರಷ್ಟು ಪಾಲು ಹೊಂದಿದ್ದರು.

700 ಕೋಟಿಯ ತಂಡ ಈಗ 16,000 ಕೋಟಿ

‘ನಾನು ಆ ತಂಡವನ್ನು ಖರೀದಿಸಿದಾಗ ಅದರ ಒಟ್ಟು ಮೌಲ್ಯ 700 ಕೋಟಿ ರೂಪಾಯಿ ಆಗಿತ್ತು. ಆದರೆ ಈಗ ಅದರ ಮೌಲ್ಯ ಬರೋಬ್ಬರಿ 16,000 ಕೋಟಿ ರೂಪಾಯಿಗೆ ಏರಿದೆ. ಆ ಸಮಯದಲ್ಲಿ ಐಪಿಎಲ್‌ನಲ್ಲಿ ಅತಿ ದೊಡ್ಡ ಸಿಂಗಲ್ ಚೆಕ್ ಹೂಡಿಕೆ ಮಾಡಿದ್ದು ನಾನೇ. ಐಪಿಎಲ್ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ನಾನೊಬ್ಬನೇ ಮೊದಲು ನಂಬಿದ್ದೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಐಪಿಎಲ್ ತಂಡಗಳ ಗಳಿಕೆ ಎಷ್ಟು?

ಐಪಿಎಲ್ ತಂಡಗಳ ಬಿಸಿನೆಸ್ ಬಗ್ಗೆಯೂ ರಾಜ್ ಕುಂದ್ರಾ ಮಾತನಾಡಿದ್ದಾರೆ. ‘ಮೊದಲ 5-6 ವರ್ಷ ತಂಡಗಳಿಗೆ ಯಾವುದೇ ಲಾಭ ಇರಲಿಲ್ಲ. ಆದರೆ ಈಗ ಪ್ರತಿ ಐಪಿಎಲ್ ತಂಡ ವರ್ಷಕ್ಕೆ 200 ರಿಂದ 500 ಕೋಟಿ ರೂಪಾಯಿ ಲಾಭ ಗಳಿಸುತ್ತಿದೆ. ಇದರಲ್ಲಿ ಶೇಕಡಾ 70 ರಷ್ಟು ಹಣ ಟಿವಿ ಹಕ್ಕುಗಳಿಂದ ಬರುತ್ತದೆ. ಇನ್ನುಳಿದ ಹಣ ಸ್ಪಾನ್ಸರ್‌ಶಿಪ್ ಮತ್ತು ಟಿಕೆಟ್ ಮಾರಾಟದಿಂದ ಬರುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಬೆಟ್ಟಿಂಗ್ ವಿವಾದದ ಬಗ್ಗೆ ಸ್ಪಷ್ಟನೆ

2013 ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ರಾಜ್ ಕುಂದ್ರಾ ಹೆಸರು ಕೇಳಿಬಂದಿತ್ತು. ಈ ಕಾರಣಕ್ಕೆ ಅವರಿಗೆ ಲೈಫ್ ಬ್ಯಾನ್ ವಿಧಿಸಲಾಗಿತ್ತು. ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೂಡ ಎರಡು ವರ್ಷ ನಿಷೇಧಿಸಲಾಗಿತ್ತು.

ಈ ಬಗ್ಗೆ ಮಾತನಾಡಿದ ಅವರು, ‘ನಾವು ಸ್ನೇಹಿತರ ಮಧ್ಯೆ ಸುಮ್ಮನೆ 500 ರೂಪಾಯಿಗೆ ಶರತ್ತು ಕಟ್ಟುತ್ತಿದ್ದೆವು. ಅದನ್ನೇ ಬೆಟ್ಟಿಂಗ್ ಎಂದು ದೊಡ್ಡದು ಮಾಡಿದರು. ಇದಕ್ಕಾಗಿ ನಮ್ಮನ್ನು ಬ್ಯಾನ್ ಮಾಡಿದ್ದು ಸರಿಯಲ್ಲ. ಈ ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಐಪಿಎಲ್‌ನಲ್ಲಿ ಅಂಡರ್‌ಗ್ರೌಂಡ್ ಬೆಟ್ಟಿಂಗ್ ನಡೆಯುವುದು ನಿಜ. ಆದರೆ ತಂಡದ ಒಳಗಡೆ ಯಾವುದೇ ತಪ್ಪುಗಳು ನಡೆಯುವುದಿಲ್ಲ’ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *