ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸಿಎಸ್ಕೆ ವಿರುದ್ಧ 103 ರನ್ಗಳ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಇದಾಗಿದೆ. ಸಿಎಸ್ಕೆ ನೀಡಿದ 207 ರನ್ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಮುಂಬೈ ಅತ್ಯಂತ ಹೀನಾಯ ಪ್ರದರ್ಶನ ನೀಡಿತು. ಕೇವಲ 104 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಕ್ಯಾಪ್ಟನ್ ಪಾಂಡ್ಯ 1 ರನ್ಗೆ ಔಟ್ ಆದರು. ಪಂದ್ಯ ಮುಗಿದ ಬಳಿಕ ರವಿ ಶಾಸ್ತ್ರಿ ಜೊತೆ ಮಾತನಾಡಿದ ಪಾಂಡ್ಯ, ಮುಂಬೈ ತಂಡದ ಸೋಲಿಗೆ ಕಾರಣ ನೀಡಿದರು. ನಾಲ್ಕು ಪಂದ್ಯಗಳಲ್ಲಿ 2 ಶತಕ ಬಾರಿಸಿದ ಸಂಜು ಅವರನ್ನು ಹೊಗಳಿದರು.
‘ಪಿಚ್ ಬದಲಾಗಿದೆ ಎಂದು ನಾನು ಹೇಳುವುದಿಲ್ಲ. ನಾನು ಹಾಗೆ ಹೇಳಲು ಇಷ್ಟಪಡುವ ವ್ಯಕ್ತಿಯೂ ಅಲ್ಲ’ ಎಂದು ಪಾಂಡ್ಯ ಹೇಳಿದ್ದಾರೆ. ಕೆಲವರು ಸೋಲಿನ ಬಳಿಕ ‘ಪಿಚ್ ಸರಿ ಇರಲಿಲ್ಲ, ಪಿಚ್ ಬದಲಾಗಿತ್ತು’ ಎಂಬ ಕಾರಣವನ್ನು ನೀಡುತ್ತಾರೆ. ಈ ಕಾರಣದಿಂದ ಹಾರ್ದಿಕ್ ಈ ರೀತಿ ಹೇಳಿಕೆ ನೀಡಿದ್ದಾರೆ.
‘ಚೆನ್ನೈ ತಂಡದವರು ಚೆನ್ನಾಗಿ ಬ್ಯಾಟ್ ಮಾಡಿದರು. ಈ ಮೂಲಕ 207 ರನ್ ಗಳಿಸಿದರು. ಅವರು ರನ್ ಗಳಿಸಿದ್ದು ಇದೇ ಪಿಚ್ನಲ್ಲಿ, ಇದೇ ಮಣ್ಣಿನಲ್ಲಿ. ನಾವು ಆಡಿದ್ದು ಇದೇ ಮೈದಾನದಲ್ಲಿ. ನಾವು ಉತ್ತಮವಾಗಿ ಬ್ಯಾಟ್ ಮಾಡಬೇಕಿತ್ತು. ಸಂಜು ಅದ್ಭುತವಾಗಿ ಬ್ಯಾಟಿಂಗ್ ಆಡಿದರು. ಅವರು ಬ್ಯಾಟರ್ಗಳು ಬರೋದು ಹಾಗೂ ರನ್ ಪೇರಿಸುವ ಕೆಲಸ ಮಾಡಿದರು. ಈ ಮೂಲಕ ಒಳ್ಳೆಯ ಮೊತ್ತ ಕಲೆ ಹಾಕಿದರು’ ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
‘ಈ ಪಿಚ್ನಲ್ಲಿ ಸಾಮಾನ್ಯವಾಗಿ ಬರುವ ರನ್ಗಿಂತ ಹೆಚ್ಚಿನ ರನ್ ಬಂದಿತ್ತು. ಇದನ್ನು ಚೇಸ್ ಮಾಡಲು ನಮಗೆ ಉತ್ತಮ ಪವರ್‌ಪ್ಲೇ ಅಗತ್ಯವಿತ್ತು. ಆವೇಗದಲ್ಲಿ ನಾವು ಆಡಬೇಕಿತ್ತು. ಆದರೆ ಹಾಗಾಗಲಿಲ್ಲ’ ಎಂದು ಪಾಂಡ್ಯ ಹೇಳಿದರು. ಸದ್ಯ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬರೋಬ್ಬರಿ 103 ರನ್..! ಐಪಿಎಲ್ ಇತಿಹಾಸದಲ್ಲೇ ಅತಿ ಹೀನಾಯ ಸೋಲು ಕಂಡ ಮುಂಬೈ
ಸಂಜು ಸ್ಯಾಮ್ಸನ್ಸ್ ಕೇವಲ 54 ಬಾಲ್ಗಳಲ್ಲಿ 101 ರನ್ ಸಿಡಿಸಿದರು. ಇದರಲ್ಲಿ 6 ಸಿಕ್ಸ್, 10 ಫೋರ್ ಸೇರಿದೆ. ಈ ಮೊತ್ತ ತಂಡಕ್ಕೆ ಆಸರೆ ಆಯಿತು. ಉಳಿದ ಯಾವುದೇ ಸಿಎಸ್ಕೆ ಆಟಗಾರರು 25 ರನ್ ಗಡಿ ದಾಟಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:46 am, Fri, 24 April 26
