ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಕಿರಕ್ ಆಗಿದೆ. ಸಿಎಸ್ಕೆ ಬೌಲರ್ ಆಲ್ ರೌಂಡರ್ ಜೇಮೀ ಓವರ್ಟನ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ತಿಲಕ್ ವರ್ಮ ಮಧ್ಯೆ ಕಿರಿಕ್ ನಡೆದಿದೆ. ತಿಲಕ್ ವರ್ಮ ಅವರು ಎರಡು ರನ್ ಎಂದು ಕೂಗುತ್ತಾ ಒಂದೇ ರನ್ ತೆಗೆದರು. ಇದರಿಂದ ಸುಖಾಸುಮ್ಮನೆ ಸಿಟ್ಟಾದ ಓವರ್ಟನ್ ಅವರು, ಏಕೆ ಎರಡು ರನ್ ಓಡಿಲ್ಲ ಎಂದು ಕೇಳಿದರು. ಆಗ ತಿಲಕ್ ವರ್ಮ ಫೀಲ್ಡರ್ ಅಲ್ಲೇ ಇದ್ದಿದ್ದು ಕಾಣಿಸಿಲ್ಲವೇ ಎಂದು ಕೇಳಿದರು. ಫೀಲ್ಡರ್ ದೂರ ಇದ್ದ ಓಡಬಹುದಿತ್ತು ಎಂದರು ಓವರ್ಟನ್. ಆ ಬಳಿಕ ಸುಮ್ಮನೆ ಹೋಗುವಂತೆ ಒಬ್ಬರಿಗೊಬ್ಬರು ಹೇಳಿಕೊಂಡರು. ಆ ಸಂದರ್ಭದ ವಿಡಿಯೋ ಮೇಲಿದೆ. ತಿಲಕ್ ವರ್ಮ ಅವರ ಖಡಕ್ ತಿರುಗೇಟಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
