ಬೆಂಗಳೂರು, (ಆಗಸ್ಟ್ 14): ಸಿಎಂ ಡಿಕೆ ಶಿವಕುಮಾರ್ ಅವರು ಇಂದು (ಆಗಸ್ಟ್ 14) ವಿಧಾನಪರಿಷತ್ ಕಲಾಪದಲ್ಲಿ ನೂತನ ಸಚಿವರನ್ನು ಪರಿಚಯ ಮಾಡಿಕೊಟ್ಟರು. ಈ ವೇಳೆ ಮೊದಲ ಬಾರಿ ಸಚಿವರಾಗಿ ವಿಧಾನ ವಿಧಾನ ಪರಿಷತ್ನ ಸಭಾನಾಯಕರಾಗಿರುವ ಯತೀಂದ್ರ ಸಿದ್ದರಾಮಯ್ಯವರನ್ನು ವಿಶೇಷ ರೀತಿಯಲ್ಲಿ ಪರಿಚಯ ಮಾಡಿಕೊಟ್ಟರು. ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸುವಾಗ ಯತೀಂದ್ರ ಅವರ ಹೆಸರನ್ನು ಹೇಳಿ, “ನಮ್ಮ ಹೊಸ ಹೀರೋ. ನಿಮ್ಮ ಲೀಡರ್” ಎಂದು ಬೆನ್ನುತಟ್ಟಿ ಪರಿಚಯ ಮಾಡಿಕೊಟ್ಟಿರುವುದು ವಿಶೇಷವಾಗಿತ್ತು.
