ಪ್ರತಿಯೊಬ್ಬರ ಬಳಿ ಉಳಿತಾಯ ಬ್ಯಾಂಕ್ (Saving Account) , ಚಾಲ್ತಿ ಖಾತೆ ಹೀಗೆ ಒಂದಾದರೂ ಖಾತೆಯನ್ನು ಹೊಂದಿರುತ್ತಾರೆ. ಆದರೆ ಖಾತೆ ಹೊಂದಿದ ವ್ಯಕ್ತಿ ಮೃತ ಪಟ್ಟರೆ ಆ ಖಾತೆಯ ಮೊತ್ತವನ್ನು ನಾಮಿನಿ ಪಡೆಯಬಹುದು. ಆದರೆ ಈ ಖಾತೆಯಲ್ಲಿ ನಾಮಿನಿ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಆಧರಿಸಿ ಪ್ರಕ್ರಿಯೆ ಬದಲಾಗುತ್ತದೆ. ಮೃತಪಟ್ಟ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಗಳು, ಕುಟುಂಬ ಸದಸ್ಯರು ಅಥವಾ ನಾಮಿನಿಗಳು ತಮ್ಮ ಖಾತೆಯಲ್ಲಿರುವ ಹಣವನ್ನು ಕ್ಲೈಮ್ ಮಾಡುತ್ತಾರೆ. ಒಂದು ವೇಳೆ ಖಾತೆದಾರರ ಬ್ಯಾಂಕ್ ವಿವರಗಳ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ ಯುಡಿಜಿಎಎಂ ಪೋರ್ಟಲ್ ಮೂಲಕ ಪರಿಶೀಲಿಸಬಹುದು. ಆದರೆ ಇದಕ್ಕೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಜನ್ಮ ದಿನಾಂಕದ ಮಾಹಿತಿ ಹಾಗೂ ಇನ್ನಿತ್ತರ ದಾಖಲೆಗಳು ನಿಮ್ಮ ಬಳಿ ಇರಬೇಕು.
ಮೃತ ವ್ಯಕ್ತಿ ಬ್ಯಾಂಕ್ ವಿವರಗಳನ್ನು ತಿಳಿದುಕೊಳ್ಳುವುದು ಹೇಗೆ?
ಹಂತ 1: ಮೊದಲು ನೀವು UDGAM Portal ವೆಬ್ ಸೈಟ್‌ಗೆ ಭೇಟಿ ನೀಡಿ.
ಹಂತ 2: ಮೃತ ವ್ಯಕ್ತಿಯ ಹೆಸರು ಹಾಗೂ ಮೊಬೈಲ್ ಸಂಖ್ಯೆ ನೀಡಿ ಲಾಗಿನ್ ಖಾತೆ ತೆರೆಯಿರಿ.
ಹಂತ 4: ಮೃತ ವ್ಯಕ್ತಿಯ ಪೂರ್ಣ ಹೆಸರನ್ನು ಸರಿಯಾಗಿ ಟೈಪ್ ಮಾಡಿ. ಮೃತ ವ್ಯಕ್ತಿ ಹೊಂದಿದ್ದ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ.
ಹಂತ 5: ಮೃತ ವ್ಯಕ್ತಿಯ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಜನ್ಮ ದಿನಾಂಕ, ವೋಟರ್ ಐಡಿ, ಪಾಸ್‌ಪೋರ್ಟ್ ಈ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು.
ಹಂತ 6: ಈ ವಿವರಗಳನ್ನು ಸಲ್ಲಿಸಿದ ನಂತರ ಬ್ಯಾಂಕ್ ಖಾತೆಯ ವಿವರಗಳು ಹಾಗೂ ಕ್ಲೈಮ್ ಮಾಡದ ಹಣವು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಹಂತ 7: ಪೋರ್ಟಲ್ ನ ಸ್ಕ್ರೀನ್ ಮೇಲೆ ಕಾಣುವ ವಿವರ ಅಥವಾ UDRN ಕೋಡ್‌ನ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಳ್ಳಿ
ಹಂತ 8: ಬ್ಯಾಂಕ್ ಶಾಖೆಗೆ ಮರಣ ಪ್ರಮಾಣಪತ್ರ, ವಾರಸುದಾರರ ದಾಖಲೆ ಹಾಗೂ ಕೆವೈಸಿ ಪತ್ರ ಈ ದಾಖಲೆಗಳೊಂದಿಗೆ ಬ್ಯಾಂಕ್ ಹಣ ಕ್ಲೈಮ್ ಮಾಡಲು ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ಮೃತ ವ್ಯಕ್ತಿಯ ಹಣವನ್ನು ಯಾರು ಪಡೆಯಲು ಅರ್ಹರಾಗಿರುತ್ತಾರೆ?
ಉತ್ತರ: ಮೃತ ವ್ಯಕ್ತಿಯ ಹಣವನ್ನು ಪಡೆಯಲು ನಾಮಿನಿ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ಅರ್ಹರಾಗಿರುತ್ತಾರೆ.
ಪ್ರಶ್ನೆ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯುವುದು ಹೇಗೆ?
ಉತ್ತರ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯಲು UDGAM Portal ವೆಬ್ ಸೈಟ್ ಗೆ ಭೇಟಿ ನೀಡಿ.
ಪ್ರಶ್ನೆ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯಲು ಯಾವೆಲ್ಲಾ ದಾಖಲೆಗಳು ಬೇಕು?
ಉತ್ತರ: ಮೃತ ವ್ಯಕ್ತಿಯ ಬ್ಯಾಂಕ್ ವಿವರಗಳನ್ನು ತಿಳಿಯಲು ಅವರ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಜನ್ಮ ದಿನಾಂಕ, ವೋಟರ್ ಐಡಿ, ಪಾಸ್‌ಪೋರ್ಟ್ ಈ ದಾಖಲೆಗಳಲ್ಲಿ ಯಾವುದಾದರೂ ಒಂದಿದ್ದರೆ ಸಾಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
