ನರ್ಸ್​​ ನಿರ್ಲಕ್ಷ್ಯಕ್ಕೆ 6 ತಿಂಗಳ ಮಗುವಿನ ಬೆರಳೇ ತುಂಡು!: ಆಸ್ಪತ್ರೆ ವಿರುದ್ಧ ಕೇಸ್​​ ದಾಖಲು – Kannada News | Bangalore Nurse Negligence: 6 Month Old Baby’s Finger Cut at Indiranagar Hospital

ಬೆಂಗಳೂರು, ಫೆಬ್ರವರಿ 25: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಮಗುವಿನ ಬೆರಳನ್ನೇ ನರ್ಸ್​​ ಕತ್ತರಿಸಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ. ಜ್ವರ ಮತ್ತು ಕಫದ ಹಿನ್ನೆಲೆ ಚಿನ್ಮಯ್ ಮಿಷನ್ ಆಸ್ಪತ್ರೆಗೆ ಮಗುವನ್ನು ಪೋಷಕರು ಫೇಬ್ರವರಿ 19ರಂದು ದಾಖಲಿಸಿದ್ದರು. ಅಲ್ಲಿಂದ ಫೆ.24ರ ವರೆಗೆ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಡ್ರಿಪ್ಸ್​​ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆಯುವ ಸಂದರ್ಭ ನಿರ್ಲಕ್ಷದ ಕಾರಣದಿಂದ ನರ್ಸ್ ಮಗುವಿನ ಎಡಗೈ ಕಿರುಬೆರೆಳಿನ ಅರ್ಧ ಬಾಗವನ್ನೇ ಕತ್ತರಿಸಿದ್ದಾರೆ. ಗಂಭೀರ ಗಾಯದಿಂದ ಎಳೆಯ ಕಂದಮ್ಮ ನರಳಾಡುತ್ತಿದ್ದು, ಈ ಬಗ್ಗೆ ಪೊಲೀಸ್​​ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?

6 ತಿಂಗಳ ತಮ್ಮ ಗಂಡು ಮಗು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಹಿನ್ನೆಲೆ ಇಂದಿರಾನಗರದಲ್ಲಿರುವ ಚಿನ್ಮಯ ಮಿಷನ್ ಆಸ್ಪತ್ರೆಗೆ ಆತನನ್ನು ಕರೆತಂದು ವೈದ್ಯರನ್ನು ಸಂಪರ್ಕಿಸಿದ್ದೆವು. ಮಗುವಿಗೆ ತೀವ್ರ ಅನಾರೋಗ್ಯದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲು ಅವರು ಸೂಚಿಸಿದ್ದರು. 5-6 ದಿನಗಳ ಚಿಕಿತ್ಸೆ ಬಳಿಕ ಫೆಬ್ರವರಿ 24ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಡಿಸ್ಚಾರ್ಜ್​​ಗೆ ನಿರ್ಧರಿಸಲಾಗಿತ್ತು. ನಾವು ಬಿಲ್ಲಿಂಗ್​​ ಕೌಂಟರ್​​ಗೆ ಹಣ ಪಾವತಿ ಮಾಡಲು ಹೋಗಿದ್ದ ಸಂದರ್ಭ, ನರ್ಸ್​​ ನಿರ್ಲಕ್ಷ್ಯಕ್ಕೆ ಮಗುವಿನ ಎಡಗೈ ಕಿರು ಬೆರಳು ಕಟ್​​ ಆಗಿದೆ. ಹೀಗಾಗಿ ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಗುವಿನ ತಂದೆ ವಿಜಯ್​​ ಕುಮಾರ್​​ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  ಕೌಟುಂಬಿಕ ಕಲಹಕ್ಕೆ ಯುವಕ ಬಲಿ; ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಆತ್ಮಹತ್ಯೆಗೆ ಯತ್ನ!

ಸತ್ಯ ಮರೆಮಾಚಲು ಯತ್ನ?

ಘಟನೆ ಬಳಿಕ ತುರ್ತು ಚಿಕಿತ್ಸಾ ಘಟಕಕ್ಕೆ ಮಗುವನ್ನು ಕರೆದುಕೊಂಡು ಹೋಗಲಾಗಿದ್ದು, ಗಾಯಕ್ಕೆ ಡ್ರೆಸ್ಸಿಂಗ್​​ ಮಾಡಲಾಗಿದೆ. ಹೀಗಿದ್ದರೂ ಯಾವುದೇ ದೊಡ್ಡ ಗಾಯವಾಗಿಲ್ಲ. ಮಗು ಚಿಕ್ಕದಾಗಿರುವ ಕಾರಣ ಗಾಯ ಅದಾಗೇ ಗುಣವಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಮಗುವಿನ ಅರ್ಧ ಬೆರಳು ಕಟ್​​ ಆಗಿದೆ ಎಂದು ವಿಜಯ್​​ ಕುಮಾರ್​​ ದೂರಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:34 pm, Wed, 25 February 26

Source link

Leave a Reply

Your email address will not be published. Required fields are marked *