ಭಜನೆ, ಘಂಟೆ ಶಬ್ದದಿಂದ ಕಿರಿಕಿರಿ ಆರೋಪ: ದೇಗುಲದ ಬಳಿ ಮುಸ್ಲಿಂ ವ್ಯಕ್ತಿ ಹೈಡ್ರಾಮಾ – Kannada News | Chikkamagaluru: Muslim Man Disrupts Temple Bhajans Over Noise Complaint

ಚಿಕ್ಕಮಗಳೂರು, ಫೆಬ್ರವರಿ 25: ಭಜನೆ ಹಾಡು, ಜಾಗಟೆ, ಘಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆಯೆಂದು ಮುಸ್ಲಿಂ ವ್ಯಕ್ತಿಯೊಬ್ಬ ಚಿಕ್ಕಮಗಳೂರು ನಗರದ ಹಳೇ ಉಪ್ಪಳ್ಳಿಯಲ್ಲಿರುವ ಈಶ್ವರ ದೇಗುಲ ಬಳಿ ಹೈಡ್ರಾಮಾ ನಡೆಸಿದ್ದಾನೆ. ಭಜನೆ ಹಾಕುವುದನ್ನು ನಿಲ್ಲಿಸಬೇಕು ಎಂದು ಪೊಲೀಸರಿಗೆ ಕರೆ ಮಾಡಿದ್ದು, ದೇವಾಲಯದಿಂದ ಬರುವ ಶಬ್ದದಿಂದ ಕಿರಿಕಿರಿ ಆಗುತ್ತಿದೆ. ಹೀಗಾಗಿ ಸಂಪೂರ್ಣ ಧ್ವನಿವರ್ಧಕ ಬಂದ್ ಮಾಡಿಸುವಂತೆ ಫಾರೂಕ್​​ ಎಂಬಾತ ಪಟ್ಟು ಹಿಡಿದಿದ್ದಾನೆ. ದೇಗುಲದ ಅಕ್ಕಪಕ್ಕದ ನಿವಾಸಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದು ದೂರಿದ್ದು, ಈತ ದೇವಾಲಯದ ಪಕ್ಕದಲ್ಲೇ ವಾಸವಿದ್ದಾನೆ ಎಂಬುದು ಗೊತ್ತಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಹೇಳುವಂತೆ, ಕೇವಲ ಮಂಗಳಾರತಿ ಸಮಯದಲ್ಲಿ ಸುಮಾರು ಹತ್ತು ನಿಮಿಷಗಳ ಅವಧಿಗೆ ಮಾತ್ರ ಭಜನೆಗಳನ್ನು ಹಾಕಲಾಗುತ್ತೆ. ಮಂಗಳಾರತಿ, ಪೂಜೆಗೆ ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *