ನಿಮಗಿದು ಗೊತ್ತೇ? ಕೇವಲ ನಾಯಿ ಮಾತ್ರವಲ್ಲ ಈ 5 ಪ್ರಾಣಿಗಳು ಕೂಡ ನಾಯಿಯಂತೆ ಬೊಗಳುತ್ತಂತೆ! – Kannada News | Not Just Dogs: 5 Animals That Sound Surprisingly Similar

ಸಾಮಾನ್ಯವಾಗಿ ಬೊಗಳುವ ಶಬ್ದ ಕೇಳಿದಾಕ್ಷಣ ಯಾರೋ ಬಂದಿರಬಹುದು ಅಥವಾ ಯಾವುದೋ ಪ್ರಾಣಿಯನ್ನು ನೋಡಿ ನಾಯಿ(Dog) ಬೊಗಳುತ್ತಿರಬಹುದು ಎಂದುಕೊಳ್ಳುತ್ತೇವೆ. ಆದರೆ ಬೊಗಳಿದಾಕ್ಷಣ ಅವು ಕೇವಲ ನಾಯಿಯಲ್ಲ ಈ ಪ್ರಾಣಿಗಳೂ ಆಗಿರಬಹುದು ಎಂಬ ಕಲ್ಪನೆ ನಿಮಗಿದೆಯೇ? ಆದರೆ ಪ್ರಕೃತಿಯ ಒಡಲಲ್ಲಿ ನಾಯಿಗಳಲ್ಲದಿದ್ದರೂ, ನಾಯಿಯಷ್ಟೇ ನಿಖರವಾಗಿ ಬೊಗಳುವ ವಿಶಿಷ್ಟ ಪ್ರಾಣಿಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ರಕ್ಷಣೆ, ಸಂವಹನ ಮತ್ತು ಎಚ್ಚರಿಕೆ ನೀಡಲು ಈ ಪ್ರಾಣಿಗಳು ನಾಯಿಯ ಧ್ವನಿಯನ್ನು ಹೋಲುವ ಶಬ್ದಗಳನ್ನು ಮಾಡುತ್ತವೆ. ಆ ಪ್ರಾಣಿಗಳ ಪರಿಚಯ ಇಲ್ಲಿದೆ.

1. ನರಿ: ಚತುರತೆ, ಕರ್ಕಶ ಧ್ವನಿ
ನರಿಗಳು ನೋಡಲು ಸೌಮ್ಯವಾಗಿ ಕಂಡರೂ ಅವುಗಳ ಕೂಗು ಮಾತ್ರ ಅತ್ಯಂತ ಜೋರಾಗಿರುತ್ತದೆ. ಕಾಡಿನಲ್ಲಿ ಅಥವಾ ಹಳ್ಳಿಯ ಹೊರವಲಯದಲ್ಲಿ ಸಂಚರಿಸುವಾಗ ನರಿಯ ಧ್ವನಿ ಕೇಳಿದರೆ, ಹತ್ತಿರದಲ್ಲೇ ಎಲ್ಲೋ ಪುಟ್ಟ ನಾಯಿ ಮರಿ ಇದೆ ಎಂದು ನೀವು ಮೂರ್ಖರಾಗಬಹುದು, ನರಿಗಳು ತಮ್ಮ ಕುಟುಂಬದೊಂದಿಗೆ ಸಂವಹನ ನಡೆಸಲು ಅಥವಾ ತಮಗೆ ಬೆದರಿಕೆ ಹಾಕುವವರನ್ನು ಹೆದರಿಸಲು ಈ ಶಬ್ದವನ್ನು ಬಳಸುತ್ತವೆ.

2. ಸೀಲ್ಸ್​
ಸಮುದ್ರ ತೀರದ ಬಂಡೆಗಳ ಮೇಲೆ ಮಲಗುವ ಸೀಲುಗಳು ಮಾಡುವ ಗದ್ದಲ ಕಡಿಮೆಯದ್ದಲ್ಲ. ಇವುಗಳು ತಮ್ಮ ಪ್ರದೇಶವನ್ನು (Territory) ಗುರುತಿಸಲು ಅಥವಾ ಸಂಗಾತಿಯನ್ನು ಕರೆಯಲು ಆಳವಾದ ಧ್ವನಿಯಲ್ಲಿ ಕೂಗುತ್ತವೆ. ಈ ಶಬ್ದವು ಬಂಡೆಗಳಿಗೆ ಬಡಿದು ಪ್ರತಿಧ್ವನಿಸಿದಾಗ ನಾಯಿ ಬೊಗಳುವಂತೆಯೇ ಕೇಳಿಸುತ್ತದೆ.

3. ಸಮುದ್ರ ಸಿಂಹಗಳು
ಇವು ಅತ್ಯಂತ ಸಾಮಾಜಿಕ ಪ್ರಾಣಿಗಳು. ತಮ್ಮ ಹಿಂಡಿನೊಳಗೆ ಒಬ್ಬರಿಗೊಬ್ಬರು ಸಂವಹನ ನಡೆಸಲು ಇವು ಸತತವಾಗಿ ಬೊಗಳುತ್ತವೆ. ಇವುಗಳ ಗುಂಪು ಇರುವ ಕಡೆ ಹೋದರೆ ಅಕ್ಕಪಕ್ಕದಲ್ಲಿ ನೂರಾರು ನಾಯಿಗಳು ಬೊಗಳುತ್ತಿವೆಯೇನೋ ಎಂಬ ಭಾಸವಾಗುವುದು ಸಹಜ.

ಮತ್ತಷ್ಟು ಓದಿ: Video: ನೀರ್‌ ಹತ್ರ ಯಾಕೆ ಹೋಗ್ತೀಯಾ; ನೀರಿಗೆ ಬಿದ್ದ ಕಂದಮ್ಮನನ್ನು ರಕ್ಷಿಸಿದ ಸಿಂಹಿಣಿ

4. ಕಾಡು ನಾಯಿ
ಕೊಯೊಟ್‌ಗಳು ನಾಯಿ ಕುಟುಂಬಕ್ಕೆ (Canidae) ಸೇರಿದ ಪ್ರಾಣಿಗಳು, ಹಾಗಾಗಿ ಬೊಗಳುವುದು ಇವುಗಳ ರಕ್ತದಲ್ಲೇ ಬಂದಿದೆ.ತಮ್ಮ ಮರಿಗಳನ್ನು ರಕ್ಷಿಸಲು ಅಥವಾ ಗುಂಪಿಗೆ ಅಪಾಯದ ಸೂಚನೆ ನೀಡಲು ಈ ಧ್ವನಿಯನ್ನು ಬಳಸುತ್ತವೆ. ರಾತ್ರಿಯ ನಿಶ್ಯಬ್ದದಲ್ಲಿ ಇವುಗಳ ಕೂಗು ಕೇಳಿದರೆ ಎದೆ ನಡುಗುವುದು ಗ್ಯಾರಂಟಿ.

5. ಬಬೂನ್ (Baboons): ಅರಣ್ಯದ ಎಚ್ಚರಿಕೆ ಗಂಟೆ
ಈ ಜಾತಿಯ ಕೋತಿಗಳು ನೋಡಲು ಬಲಿಷ್ಠ ಮತ್ತು ಸ್ವಭಾವದಲ್ಲಿ ಸ್ವಲ್ಪ ಹಿಂಸಾತ್ಮಕ. ಕಾಡಿನಲ್ಲಿ ಚಿರತೆ ಅಥವಾ ಸಿಂಹದಂತಹ ಪರಭಕ್ಷಕಗಳು ಕಾಣಿಸಿಕೊಂಡಾಗ, ಬಬೂನ್‌ಗಳು ವಿಶಿಷ್ಟ ಶಬ್ದ ಹೊರಡಿಸುತ್ತವೆ. ಈ ಶಬ್ದವು ನಾಯಿಯ ಬೊಗಳುವಿಕೆಗೆ ಬಹಳ ಹತ್ತಿರವಾಗಿರುತ್ತದೆ. ಇದು ಕಾಡಿನ ಇತರ ಪ್ರಾಣಿಗಳಿಗೆ ನೀಡುವ ‘ರೆಡ್ ಅಲರ್ಟ್’ ಆಗಿ ಕೆಲಸ ಮಾಡುತ್ತದೆ.

ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಾಣಿಯೂ ತನ್ನದೇ ಆದ ಭಾಷೆಯನ್ನು ಹೊಂದಿದೆ. ಆದರೆ ನಾಯಿಯಲ್ಲದ ಈ ಪ್ರಾಣಿಗಳು ‘ಬೊಗಳುವ’ ಕಲೆಯನ್ನೂ ಕರಗತ ಮಾಡಿಕೊಂಡಿರುವುದು ವಿಸ್ಮಯವೇ ಸರಿ. ಮಾಹಿತಿ (Sciencedaily/az-animals)

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *