ಟೀಂ ಇಂಡಿಯಾ ಸೇರಲು ವೈಭವ್ ಸೂರ್ಯವಂಶಿ ರೆಡಿ; ಉಡೀಸ್ ಆಗಲಿದೆ ಸಚಿನ್ ದಾಖಲೆ – Kannada News | Vaibhav Sooryavanshi: IPL Sensation Eyes Team India, Poised to Break Sachin’s Record

ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ಐಪಿಎಲ್​​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದು, ಅದ್ಭುತ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಕೇವಲ 15ನೇ ವಯಸ್ಸಿಗೆ ಅವರು ಹಲವು ದಾಖಲೆಗಳನ್ನು ಬರೆಯುತ್ತಿದ್ದಾರೆ. ಅವರು ಆಡಿದ ಐದು ಪಂದ್ಯಗಳಿಂದ 200 ರನ್ ಪೇರಿಸಿದ್ದು, 263 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ. ಜಸ್​​ಪ್ರೀತ್ ಬುಮ್ರಾ ಹಾಗೂ ಜೋಶ್ ಹೇಜಲ್​ವುಡ್​ಗೆ ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದಾರೆ. ಈಗ ಅವರು ಟೀಂ ಇಂಡಿಯಾ ಪರ ಆಡಲು ರೆಡಿ ಆಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ 37 ವರ್ಷಗಳ ಹಿಂದೆ ಬರೆದ ದಾಖಲೆ ಅಳಿಸಿ ಹಾಕಲಿದ್ದಾರೆ.

ಇಂಡಿಯನ್​ ಎಕ್ಸ್​​ಪ್ರೆಸ್ ವರದಿ ಪ್ರಕಾರ ವೈಭವ್ ಸೂರ್ಯವಂಶಿ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಅವರು ಟೀಂ ಇಂಡಿಯಾ ಪರ ಆಡಲಿದ್ದಾರೆ. ಜೂನ್ 26 ಹಾಗೂ 28ರಂದು ಐರ್ಲೆಂಡ್​​ ಅಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ಇದಕ್ಕೆ ವೈಭವ್ ಹೆಸರನ್ನು ಶಾರ್ಟ್​​ಲಿಸ್ಟ್ ಮಾಡಲಾಗಿದೆಯಂತೆ. ಈ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಬಿಸಿಸಿಐಗೆ ಇದೆ.

ಜುಲೈ 23-26ರವರೆಗೆ ಜಿಂಬ್ವಾಬ್ವೆಯಲ್ಲಿ ನಡೆಯುವ ಟಿ20 ಸರಣಿಗೂ ವೈಭವ್ ಹೆಸರನ್ನು ಆಯ್ಕೆ ಮಾಡುವ ಇರಾದೆಯನ್ನು ಆಯ್ಕೆ ಸಮಿತಿ ಹೊಂದಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರಕ್ಕೆ ಬರುವ ಆಲೋಚನೆಯಲ್ಲಿ ತಂಡ ಇದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾಗೆ ಆಡಿದಾಗ ಅವರ ವಯಸ್ಸು 16 ವರ್ಷದ 2005 ದಿನ ಆಗಿತ್ತು. ಜೂನ್​ 26ರಂದು ಅಂತಾರಾಷ್ಟ್ರೀಯ ಪಂದ್ಯ ಆಡಿದರೆ ವೈಭವ್​ ಅವರು ಕೇವಲ 15 ವರ್ಷ 91 ದಿನಕ್ಕೆ ಟೀಂ ಇಂಡಿಯಾ ಪರ ಆಡಿದಂತೆ ಆಗಲಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲಿದ್ದಾರೆ. ಶಫಾಲಿ ವರ್ಮ ಅವರು 15 ವರ್ಷ 240ಕ್ಕೆ ದಿನಕ್ಕೆ ಟೀಂ ಇಂಡಿಯಾ ಪರ ಆಡಿದ್ದರು. ಈಗ ಈ ದಾಖಲೆಯನ್ನು ಕೂಡ ವೈಭವ್ ಮುರಿಯಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:41 am, Tue, 14 April 26

Source link

Leave a Reply

Your email address will not be published. Required fields are marked *