CBSE Class 10 Results 2026: ಇಂದೇ ಪ್ರಕಟವಾಗಲಿದೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ; ವೀಕ್ಷಿಸಲು ಈ ಲಿಂಕ್​ ಬಳಸಿ – Kannada News | CBSE Class 10 Results 2026: Expected Date, How to Check Online and DigiLocker Access

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 14 ಅಥವಾ 15ರ ಒಳಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ. ಈ ವರ್ಷದ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಫಲಿತಾಂಶದ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ಶೀಘ್ರದಲ್ಲೇ ಫಲಿತಾಂಶ ಪ್ರಕಟ:

ಸಿಬಿಎಸ್ಇ ಈ ಬಾರಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪ್ರಕಟವಾಗುತ್ತಿದ್ದ ಫಲಿತಾಂಶವನ್ನು ಈ ಬಾರಿ ಏಪ್ರಿಲ್ ಮಧ್ಯಭಾಗದಲ್ಲೇ ಬಿಡುಗಡೆ ಮಾಡಲು ಮಂಡಳಿ ನಿರ್ಧರಿಸಿದೆ. ಮೇ 15ರಿಂದ ಜೂನ್ 1ರವರೆಗೆ ಎರಡನೇ ಹಂತದ (Improvement) ಪರೀಕ್ಷೆಗಳು ನಡೆಯಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?

ವಿದ್ಯಾರ್ಥಿಗಳು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು:

  • ವೆಬ್‌ಸೈಟ್‌ಗೆ ಭೇಟಿ ನೀಡಿ: ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ results.cbse.nic.in ಅಥವಾ cbse.gov.in ಗೆ ಲಾಗ್ ಇನ್ ಆಗಿ.
  • ಲಿಂಕ್ ಕ್ಲಿಕ್ ಮಾಡಿ: ಮುಖಪುಟದಲ್ಲಿ ಕಾಣುವ ‘Secondary School Examination (Class X) Results 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ವಿವರಗಳನ್ನು ಭರ್ತಿ ಮಾಡಿ: ನಿಮ್ಮ ರೋಲ್ ನಂಬರ್ (Roll Number), ಸ್ಕೂಲ್ ನಂಬರ್ (School Number) ಮತ್ತು ಅಡ್ಮಿಟ್ ಕಾರ್ಡ್ ಐಡಿ (Admit Card ID) ಅನ್ನು ನಿಖರವಾಗಿ ನಮೂದಿಸಿ.
  • ಸಬ್ಮಿಟ್ ನೀಡಿ: ವಿವರಗಳನ್ನು ಸಲ್ಲಿಸಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ.
  • ಡೌನ್‌ಲೋಡ್: ಭವಿಷ್ಯದ ಬಳಕೆಗಾಗಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಡಿಜಿಲಾಕರ್ (DigiLocker) ಮೂಲಕ ಅಂಕಪಟ್ಟಿ:

ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿಗಳನ್ನು ಪಡೆಯಲು ಡಿಜಿಲಾಕರ್ ಸುಲಭವಾದ ಮಾರ್ಗವಾಗಿದೆ. ವಿದ್ಯಾರ್ಥಿಗಳು ತಮ್ಮ ‘APAAR ID’ ಅಥವಾ ಶಾಲೆಯಿಂದ ನೀಡಲಾದ ಆಕ್ಸೆಸ್ ಕೋಡ್ (Six-digit PIN) ಬಳಸಿ ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ತಮ್ಮ ಮೂಲ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಸುರಕ್ಷಿತವಾಗಿ ಪಡೆಯಬಹುದು.

ತೇರ್ಗಡೆ ಅಂಕಗಳು ಮತ್ತು ಸುಧಾರಣಾ ಪರೀಕ್ಷೆ:

ಪ್ರತಿಯೊಂದು ವಿಷಯದಲ್ಲಿ ತೇರ್ಗಡೆಯಾಗಲು ವಿದ್ಯಾರ್ಥಿಗಳು ಕನಿಷ್ಠ ಶೇ.33 ಅಂಕಗಳನ್ನು ಗಳಿಸಬೇಕು. ಫಲಿತಾಂಶ ಪ್ರಕಟವಾದ ನಂತರ, ಯಾವುದಾದರೂ ವಿಷಯದಲ್ಲಿ ಅಂಕ ಕಡಿಮೆ ಬಂದಿದ್ದರೆ ಅಥವಾ ತೃಪ್ತಿ ಇಲ್ಲದಿದ್ದರೆ, ವಿದ್ಯಾರ್ಥಿಗಳು ಮೇ 15 ರಿಂದ ನಡೆಯಲಿರುವ ಪರೀಕ್ಷೆಯಲ್ಲಿ ಗರಿಷ್ಠ 3 ವಿಷಯಗಳಿಗೆ ಹಾಜರಾಗಲು ಅವಕಾಶವಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:41 am, Tue, 14 April 26

Source link

Leave a Reply

Your email address will not be published. Required fields are marked *