ನಟಿ ರಾಧಿಕಾ ಪಂಡಿತ್ (Radhika Pandit) ಮತ್ತು ನಟ ಯಶ್ ಅವರುಗಳು ಸ್ಯಾಂಡಲ್ವುಡ್ನ ಸ್ಟಾರ್ ಜೋಡಿ. ಇಬ್ಬರೂ ನಟರಾಗಿದ್ದವರು. ಬಳಿಕ ಪ್ರೀತಿಸಿ ಮದುವೆ ಆದರು. ಈಗ ಯಶ್, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ರಾಧಿಕಾ ಪಂಡಿತ್, ಪತಿಯ ಯಶಸ್ಸಿಗಾಗಿ ತಮ್ಮ ವೃತ್ತಿಯನ್ನು ತ್ಯಾಗ ಮಾಡಿದ್ದಾರೆ. ಇದೀಗ ರಾಧಿಕಾ, ತಮ್ಮ ಹಾಗೂ ಯಶ್ ಅವರ ಅಪರೂಪದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಹಾಗೂ ಯಶ್ ಅವರ ವಿವಾಹ ನಿಶ್ಚಿತಾರ್ಥ ನಡೆದು ಇಂದಿಗೆ (ಆಗಸ್ಟ್ 12) ಹತ್ತು ವರ್ಷಗಳಾಗಿದ್ದು, ಇದೇ ಖುಷಿಯಲ್ಲಿ ತಮ್ಮ ಹಾಗೂ ಯಶ್ ಅವರ ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
