ಐಪಿಎಲ್ 2026 ರಲ್ಲಿ ಲೀಗ್ ಹಂತ ಮುಗಿಯುವ ಹತ್ತಿರದಲ್ಲಿದೆ. ಹೀಗಾಗಿ ಪ್ಲೇಆಫ್ ರೋಚಕತೆ ಹೆಚ್ಚಾಗಿದೆ. ಈವರೆಗೆ 3 ತಂಡಗಳು ಪ್ಲೇಆಫ್ನಿಂದ ಹೊರಬಿದ್ದಿದ್ದು, ಉಳಿದ 7 ತಂಡಗಳು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಹೋರಾಡುತ್ತಿವೆ. ಆ 7 ತಂಡಗಳ ಪೈಕಿ ಸಿಎಸ್ಕೆ ಕೂಡ ಒಂದು. ಲೀಗ್‌ನಲ್ಲಿ ಕಳಪೆ ಆರಂಭ ಪಡೆದುಕೊಂಡಿದ್ದ ಸಿಎಸ್ಕೆ ಇತ್ತೀಚೆಗೆ ಲಯ ಕಂಡುಕೊಂಡಿದೆ. ಆದರೆ ತಂಡದಲ್ಲಿನ ಆಟಗಾರರ ಇಂಜುರಿ ಸಮಸ್ಯೆ ಮಾತ್ರ ಹಾಗೆಯೇ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಬಲ ತೊಡೆಯ ಗಾಯದಿಂದಾಗಿ ಇಂಗ್ಲೆಂಡ್ ವೇಗದ ಬೌಲರ್ ಜೇಮೀ ಓವರ್ಟನ್ ಲೀಗ್ನಿಂದಲೇ ಹೊರಬಿದ್ದಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಅವರ ಬದಲಿ ಆಟಗಾರನನ್ನು ಘೋಷಿಸಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರನನ್ನು ಸಿಎಸ್ಕೆ ತಂಡಕ್ಕೆ ಸೇರಿಸಿಕೊಂಡಿದೆ.
ಬದಲಿಯಾಗಿ ಬಂದಿದ್ಯಾರು?
ಚೆನ್ನೈ ಸೂಪರ್ ಕಿಂಗ್ಸ್, ಜೇಮೀ ಓವರ್ಟನ್ ಬದಲಿಗೆ ದಕ್ಷಿಣ ಆಫ್ರಿಕಾದ ಯುವ ಆಲ್‌ರೌಂಡರ್ ಡಯಾನ್ ಫಾರೆಸ್ಟರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. 25 ವರ್ಷದ ಡಯಾನ್ ಫಾರೆಸ್ಟರ್ 75 ಲಕ್ಷ ರೂಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಇದು ಅವರ ಮೊದಲ ಐಪಿಎಲ್ ಸೀಸನ್ ಆಗಿದೆ. ಕೆಲವು ದಿನಗಳ ಹಿಂದೆ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ರಾವಲ್ಪಿಂಡಿ ಪರ ಆಡಿದ್ದ ಡಯಾನ್ ಫಾರೆಸ್ಟರ್, ಆರು ಪಂದ್ಯಗಳಲ್ಲಿ 44.00 ಸರಾಸರಿಯಲ್ಲಿ 144 ರನ್ ಮತ್ತು ಎರಡು ವಿಕೆಟ್‌ಗಳನ್ನು ಸಹ ಪಡೆದಿದ್ದರು.
2026 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಡಯಾನ್ ಫಾರೆಸ್ಟರ್ ಇಲ್ಲಿಯವರೆಗೆ, ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 83 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿಯೂ ಸಮರ್ಥರಾಗಿರುವ ಫಾರೆಸ್ಟರ್ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡಬಹುದು ಮತ್ತು ವೇಗದ ಬೌಲಿಂಗ್ ಆಯ್ಕೆಯನ್ನು ಒದಗಿಸಬಹುದು.
ಸಿಎಸ್ಕೆ ನವೀಕರಿಸಿದ ತಂಡ:
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್‌ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೂವಿಸ್, ಡಿಯೋನ್ ಫಾರೆಸ್ಟರ್, ಅಕೇಲ್ ಹುಸೇನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್, ಎಂಎಸ್ ಧೋನಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ಮಾತ್ ಹೆನ್ರಿ, ದುಬೆ, ರಾಹುಲ್ ಚಾಹರ್, ಸ್ಪೆನ್ಸರ್ ಜಾನ್ಸನ್, ಆಕಾಶ್ ಮಾಧ್ವಲ್, ಅಮನ್ ಖಾನ್, ಜಕಾರಿ ಫೌಲ್ಕ್ಸ್, ಪ್ರಶಾಂತ್ ವೀರ್, ಮೆಕ್‌ನೀಲ್ ಹ್ಯಾಡ್ಲಿ ನೊರೊನ್ಹಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
