ಇತ್ತೀಚೆಗಷ್ಟೆ ನಿಧನರಾದ ನಟ ದಿಲೀಪ್ ರಾಜ್ (Dileep Raj) ಅವರು ‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದರು. ಇದೀಗ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ, ದಿಲೀಪ್ ಅವರು ಸಿನಿಮಾನಲ್ಲಿ ನಟಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ‘ದಿಲೀಪ್ ಒಬ್ಬ ಅದ್ಭುತ ನಟರಾಗಿದ್ದರು, ಅವರಿಗೆ ಹಲವು ಬಾರಿ ಸೆಟ್ನಲ್ಲಿ ಈ ವಿಷಯ ಹೇಳಿದ್ದೆ, ಅವರು ನಾಚಿ ಸುಮ್ಮನಾಗಿದ್ದರು. ಒಳ್ಳೆಯ ನಟ ಆಗಿರುವ ಜೊತೆಗೆ ಅವರು ಬಹಳ ಒಳ್ಳೆಯ ವ್ಯಕ್ತಿಯೂ ಆಗಿದ್ದರು. ಕೊನೆಯದಾಗಿ ಹೇಳುತ್ತಿದ್ದೇನೆ, ‘ದಿಲೀಪ್ ಸರ್ ನೀವು ಅದ್ಭುತ ನಟ’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
