ಇಸ್ಲಮಾಬಾದ್, ಜುಲೈ 28: ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (PoK) ಪ್ರತಿಭಟನಾಕಾರರ ಮೇಲೆ ನಡೆಸಲಾದ ಗುಂಡಿನ ದಾಳಿ ಮತ್ತು ಹತ್ಯೆಗಳನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನದ (Pakistan) ರಕ್ಷಣಾ ಸಚಿವ ಖವಾಜಾ ಆಸಿಫ್, ತಮ್ಮದೇ ದೇಶದ ಪ್ರತಿಭಟನಾಕಾರರನ್ನು ಭಾರತದಂತೆಯೇ ಶತ್ರುಗಳು ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ. ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಹೊಸ ಗುಂಡಿನ ದಾಳಿಯ ನಂತರ, ಪಾಕಿಸ್ತಾನವು ನಾಗರಿಕರ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯ ಎಸಗುತ್ತಿದೆ ಎಂದು ಭಾರತ ಆರೋಪಿಸಿದ ಬೆನ್ನಲ್ಲೇ ಈ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ.
ಈ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯ ನಂತರ, ಪಾಕಿಸ್ತಾನವು ನಾಗರಿಕರ ಮೇಲೆ ದೌರ್ಜನ್ಯ ಮತ್ತು ಕ್ರೌರ್ಯ ಎಸಗುತ್ತಿದೆ ಎಂದು ಭಾರತ ಆರೋಪಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. “ನಾನು ಆಜಾದ್ ಕಾಶ್ಮೀರದ ಪ್ರತಿಭಟನಾಕಾರರನ್ನು ಭಾರತದ ಸಾಲಿಗೇ ಸೇರಿಸುತ್ತೇನೆ. ಅವರನ್ನು ಕೂಡ ಭಾರತದಂತೆಯೇ ಶತ್ರುಗಳು ಎಂದು ಪರಿಗಣಿಸುತ್ತೇನೆ” ಎಂದು ಆಸಿಫ್ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಪೊಲೀಸರಿಂದ ಪಾಕಿಸ್ತಾನ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಹೆಚ್ಚಿದ ಹಿಂಸಾಚಾರ:
ವರದಿಗಳ ಪ್ರಕಾರ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹಲವು ಭಾಗಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಸೋಮವಾರ ಸುಮಾರು 25 ಜನರು ಮೃತಪಟ್ಟಿದ್ದಾರೆ. ಪಾಕಿಸ್ತಾನಿ ಭದ್ರತಾ ಪಡೆಗಳ ತೀವ್ರ ತನಿಖೆ ಮತ್ತು ಹತೋಟಿಯ ನಡುವೆಯೂ ಜೂನ್ 5ರಿಂದ ಆರಂಭವಾದ ಪ್ರತಿಭಟನೆಗಳಲ್ಲಿ ಇದುವರೆಗೆ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
Pakistani Defence Minister Khawaja Asif:“I put the protesters of PoK in the same category as India and consider them as enemies.”
This is the real face of Pakistan. The same country that claims to be the champion of Kashmiris now openly calls the people of PoK its enemies.… pic.twitter.com/X386M4p4UV
— KashmirFact (@Kashmir_Fact) July 28, 2026
ಇಂದು ಮೀರ್‌ಪುರದಲ್ಲೂ ಹೊಸ ಹಿಂಸಾಚಾರ ವರದಿಯಾಗಿದೆ. ವರದಿಗಳ ಪ್ರಕಾರ, ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ 12 ನಾಗರಿಕರು ಮೃತಪಟ್ಟಿದ್ದು, ಸುಮಾರು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ; 12 ಯೋಧರು ಸೇರಿ 15 ಜನ ಸಾವು
ಭಾರತದ ಪ್ರತಿಕ್ರಿಯೆ:
ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಗುಂಡಿನ ದಾಳಿಯನ್ನು ಭಾರತ ಇಂದು ತೀವ್ರವಾಗಿ ಖಂಡಿಸಿದೆ. ನಿರಪರಾಧಿ ನಾಗರಿಕರ ಮೇಲಿನ ಅಡಳಿತದ ದೌರ್ಜನ್ಯ ಮತ್ತು ಕ್ರೌರ್ಯವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತೀವ್ರವಾಗಿ ಟೀಕಿಸಿದೆ.
ರಾಜಕೀಯ ನಾಯಕರು ಚುನಾವಣೆಯ ಮೇಲೆ ಗಮನ ಹರಿಸಿರುವಾಗ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಾಕೋಟ್‌ನಲ್ಲಿ ಜನರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದು, ಆ ಪ್ರದೇಶದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:36 pm, Tue, 28 July 26
