ಪ್ರಯಾಣಿಕರಿದ್ದಾಗಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ, ಇಂಡಿಗೋ ನಡುವೆ ಡಿಕ್ಕಿ – Kannada News | Air India and IndiGo flights wings collide at Mumbai Airport with passengers onboard

ಮುಂಬೈ, ಫೆಬ್ರವರಿ 3: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಯಾಣಿಕ ವಿಮಾನಗಳು ಡಿಕ್ಕಿ ಹೊಡೆದಿವೆ. ಈ ಘಟನೆಯ ಸಮಯದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರು ಕುಳಿತಿದ್ದರು. ಕೊಯಮತ್ತೂರಿಗೆ ಹೊರಡಲು ರೆಡಿಯಾಗಿ ರಿವರ್ಸ್​ ಹೋಗುತ್ತಿದ್ದ ಏರ್ ಇಂಡಿಯಾ (Air India) ವಿಮಾನ AI 2732 ಮತ್ತು ಹೈದರಾಬಾದ್‌ನಿಂದ ಬಂದ ನಂತರ ಟ್ಯಾಕ್ಸಿ ಮಾಡುತ್ತಿದ್ದ ಇಂಡಿಗೋ (Indigo)  ವಿಮಾನ 6E 791ಗಳ ನಡುವೆ ಡಿಕ್ಕಿ ಉಂಟಾಗಿದೆ.

ಸದ್ಯಕ್ಕೆ ಎರಡೂ ವಿಮಾನಗಳಿಗೆ ಹಾನಿಯಾದ ಪ್ರಮಾಣ, ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಮತ್ತು ಈ ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದರ ಕುರಿತು ವಿವರಗಳು ತಕ್ಷಣ ಲಭ್ಯವಾಗಿಲ್ಲ.

ಇದನ್ನೂ ಓದಿ: IndiGo Crisis: ಡಿಸೆಂಬರ್​ನಲ್ಲಿ ಉಂಟಾದ ವಿಮಾನಗಳ ಹಾರಾಟದ ತೊಂದರೆಗೆ ಇಂಡಿಗೋಗೆ 22 ಕೋಟಿ ರೂ. ದಂಡ!

ಎರಡು ವಿಮಾನಗಳ ನಡುವೆ ಈ ರೀತಿ ಡಿಕ್ಕಿ ಸಂಭವಿಸುವುದು ಬಹಳ ಅಪರೂಪವಾಗಿದ್ದರೂ ಪುಶ್‌ಬ್ಯಾಕ್ ಕಾರ್ಯಾಚರಣೆಗಳ ಸಮಯದಲ್ಲಿ ಅಥವಾ ವಿಮಾನಗಳು ಜನದಟ್ಟಣೆಯ ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ಚಲಿಸುವಾಗ ಟ್ಯಾಕ್ಸಿ ಮಾಡುವಾಗ ನೆಲದ ಡಿಕ್ಕಿಗಳು ಆಗಾಗ ಸಂಭವಿಸುತ್ತವೆ. ಅಂತಹ ಘಟನೆಗಳಲ್ಲಿ ಸಾಮಾನ್ಯವಾಗಿ ರೆಕ್ಕೆಯ ತುದಿಗೆ ಡಿಕ್ಕಿ ಉಂಟಾಗುತ್ತದೆ. ಕೆಲವೊಮ್ಮೆ ವಿಮಾನದ ಬಾಲಕ್ಕೂ ಡಿಕ್ಕಿ ಆಗುತ್ತದೆ.

ಇದನ್ನೂ ಓದಿ: ಹೈಜಾಕ್ ಬೆದರಿಕೆ: ಕುವೈತ್-ದೆಹಲಿ ಇಂಡಿಗೋ ವಿಮಾನ ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ

ಏರ್ ಇಂಡಿಯಾ ಮತ್ತು ಇಂಡಿಗೋ ಎರಡೂ ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಮುಂಬೈ ವಿಮಾನ ನಿಲ್ದಾಣವು ಭಾರತದ ಅತ್ಯಂತ ಜನನಿಬಿಡ ವಾಯುಯಾನ ಕೇಂದ್ರಗಳಲ್ಲಿ ಒಂದಾಗಿದ್ದು, ಅದರ ಎರಡು ರನ್‌ವೇಗಳಲ್ಲಿ ಪ್ರತಿದಿನ ನೂರಾರು ವಿಮಾನಗಳು ಹಾರಾಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *