ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ನವದೆಹಲಿ, ಮಾರ್ಚ್ 12: ಭಾರತದ ರೀಟೇಲ್ ಹಣದುಬ್ಬರ (Retail Inflation) ಫೆಬ್ರುವರಿಯಲ್ಲಿ ಶೇ. 3.21ರಷ್ಟಿರುವುದು ದಾಖಲಾಗಿದೆ. ಜನವರಿಯಲ್ಲಿ ಹಣದುಬ್ಬರ ಶೇ. 2.74ರಷ್ಟಿತ್ತು. ಫೆಬ್ರುವರಿಯಲ್ಲಿ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಆಗಿದೆ. ಶೇ. 3.2 ದರವು ಆರ್​ಬಿಐನ ಶೇ. 4ರ ಹಣದುಬ್ಬರ ಮಿತಿಯ ಗುರಿಯೊಳಗೆಯೇ ಇದೆ. ಗ್ರಾಮೀಣ ಭಾಗದಲ್ಲಿ ಫೆಬ್ರುವರಿಯಲ್ಲಿ ಹಣದುಬ್ಬರ ಶೇ. 3.37 ಇದ್ದರೆ, ನಗರ ಭಾಗದಲ್ಲಿ ಅದು ಶೇ. 3.02ರಷ್ಟಿದೆ.

ಗ್ರಾಹಕ ಆಹಾರ ಬೆಲೆ ಅನುಸೂಚಿ ಆಧಾರಿತವಾದ ಹಣದುಬ್ಬರವು ಜನವರಿಯಲ್ಲಿ ಶೇ. 2.13ರಷ್ಟಿತ್ತು. ಫೆಬ್ರುವರಿಯಲ್ಲಿ ಅದು ಶೇ. 3.47ರಷ್ಟಾಗಿದೆ. ಆಹಾರ ಹಣದುಬ್ಬರದಲ್ಲಿ ಗ್ರಾಮ ಮತ್ತು ನಗರ ಭಾಗಗಳಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲ.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಫೆಬ್ರುವರಿಯಲ್ಲಿ ಅಧಿಕ ಹಣದುಬ್ಬರ ಕಂಡಿರುವ ಪ್ರಮುಖ ಸರಕುಗಳೆಂದರೆ ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ವಸ್ತುಗಳು, ಹಾಗೂ ಕೆಲ ತರಕಾರಿಗಳು. ಬೆಳ್ಳಿ ಬೆಲೆ ಶೇ. 161ರಷ್ಟು ಹೆಚ್ಚಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳ ಬೆಲೆ ಶೇ. 48ರಷ್ಟು ಹೆಚ್ಚಿದೆ. ಕೊಬ್ಬರಿ ಬೆಲೆ ಶೇ. 46, ಟೊಮೆಟೋ ಶೇ. 45 ಮತ್ತು ಕೋಸು ಶೇ. 44ರಷ್ಟು ಬೆಲೆ ಹೆಚ್ಚಳ ಹೊಂದಿವೆ.

ಈ ಮೇಲಿನ ವಸ್ತುಗಳ ಬೆಲೆ ಏರಿಕೆಯು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದ್ದ ಬೆಲೆಗೆ ಹೋಲಿಸಿದ್ದಾಗಿದೆ. ಜನವರಿಯ ಬೆಲೆಗೆ ಹೋಲಿಸಿದರೆ ಟೊಮೆಟೋ, ಬಟಾಣಿ, ಕೋಸು ತರಕಾರಿಗಳ ಬೆಲೆ ಶೇ. 10ಕ್ಕಿಂತಲೂ ಹೆಚ್ಚು ತಗ್ಗಿದೆ. ಅತಿಹೆಚ್ಚು ಹಣದುಬ್ಬರ ಹೊಂದಿರುವ ಐದು ರಾಜ್ಯಗಳಲ್ಲಿ ತೆಲಂಗಾಣ, ರಾಜಸ್ಥಾನ, ಕೇರಳ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ಇವೆ.

ಇದನ್ನೂ ಓದಿ: ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಹಣದುಬ್ಬರ ಎಣಿಕೆ ಮಾಡುವ ಕೆಲ ಲೆಕ್ಕಾಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾದುದು ಬೇಸ್ ವರ್ಷವನ್ನು 2012ರ ಬದಲು 2024 ಅನ್ನು ಮಾಡಿಕೊಳ್ಳಲಾಗಿದೆ. ಹಾಗೆಯೇ, ಬೆಲೆ ಏರಿಕೆಗೆ ಪರಿಗಣಿಸಲಾಗುವ ಸರಕುಗಳ ಸಂಖ್ಯೆಯನ್ನು 299ರಿಂದ 358ಕ್ಕೆ ಏರಿಸಲಾಗಿದೆ. ಹೊಸ ಲೆಕ್ಕಾಚಾರದಲ್ಲಿ ಹಣದುಬ್ಬರವನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಫೆಬ್ರುವರಿಯ ದತ್ತಾಂಶ ಬಿಡುಗಡೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *