
ಸಿಬಿಎಫ್ಸಿ (CBFC) ಯಿಂದ ಇತ್ತೀಚೆಗೆ ಕೆಲವು ನಿರ್ಮಾಪಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ನಿರ್ಮಾಪಕರು ಇತ್ತೀಚೆಗಿನ ದಿನಗಳಲ್ಲಿ ಸಿಬಿಎಫ್ಸಿ ಬಗ್ಗೆ ಅಸಮಾಧಾನ ಸಹ ಹೊರಹಾಕಿದ್ದಾರೆ. ಕೆಲವರು ಕೇಸುಗಳನ್ನು ಸಹ ದಾಖಲಿಸಿದ್ದಿದೆ. ಇದೀಗ ಸಿಬಿಎಫ್ಸಿ ಹೊರ ನಿಯಮವೊಂದನ್ನು ಜಾರಿ ಮಾಡಿದ್ದು, ಈ ನಿಯಮ ನಿರ್ಮಾಪಕರಿಗೆ ಇನ್ನಷ್ಟು ತಲೆನೋವು ತರಲಿದೆ. ಆದರೆ ಇದೊಂದು ಉಪಯುಕ್ತ ನಿಯಮವಾಗಿದ್ದು, ನಿರ್ಮಾಪಕರುಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕಿದೆ.
ಸಿಬಿಎಫ್ಸಿಯ ನಿಯಮದ ಪ್ರಕಾರ, ಈ ಭಾನುವಾರದ (ಮಾರ್ಚ್ 15) ಪ್ರಮಾಣ ಪತ್ರಕ್ಕೆ ಸಲ್ಲಿಕೆ ಆಗುವ ಎಲ್ಲ ಸಿನಿಮಾಗಳು ಕಡ್ಡಾಯವಾಗಿ ಕ್ಯಾಪ್ಷನ್ಸ್ (ಕ್ಲೋಸ್ಡ್ ಕ್ಯಾಪ್ಷನ್ಸ್ ಅಥವಾ ಓಪನ್ ಕ್ಯಾಪ್ಷನ್ಸ್) ಅಥವಾ ಸಬ್ಟೈಟಲ್ಸ್ ಹಾಗೂ ಆಡಿಯೋ ಡಿಸ್ಕ್ರಿಪ್ಷನ್ ಅನ್ನು ಹೊಂದಿರಲೇ ಬೇಕಾಗಿದೆ. ಒಂದೊಮ್ಮೆ ಈ ಕ್ಯಾಪ್ಷನ್ಗಳು ಇಲ್ಲದೇ ಇದ್ದಲ್ಲಿ ಸಿನಿಮಾವನ್ನು ಪ್ರಮಾಣ ಪತ್ರಕ್ಕೆ ಪರಿಗಣಿಸಲಾಗುವುದಿಲ್ಲ ಎಂದಿದೆ.
ಸಿನಿಮಾಗಳಿಗೆ ಸಿಸಿ, ಓಸಿ (ಸಬ್ಟೈಟಲ್ಸ್) ಮತ್ತು ಆಡಿಯೋ ಡಿಸ್ಕ್ರಿಪ್ಷನ್ಗಳು ಹಾಕುವುದು ನಿರ್ಮಾಪಕರಿಗೆ ಹೆಚ್ಚಿನ ಬಾಬತ್ತಾಗಲಿದೆ. ಭಾರಿ ದೊಡ್ಡ ಮೊತ್ತ ಇದಕ್ಕೆ ಖರ್ಚಾಗದಿದ್ದರೂ ಸಹ ಇದು ಹೆಚ್ಚುವರಿ ಖರ್ಚಂತೂ ಖಂಡಿತ ಎನಿಸಿಕೊಳ್ಳಲಿದೆ. ಅಲ್ಲದೆ, ಆಡಿಯೋ ಡಿಸ್ಕ್ರಿಪ್ಷನ್ ಸಹ ಸೇರಿಸಬೇಕಾಗಿರುವದರಿಂದ ಡಬ್ಬಿಂಗ್ ಅವಧಿ ಹೆಚ್ಚಾಗಲಿದೆ. ಪ್ರತ್ಯೇಕ ಧ್ವನಿ ಕಲಾವಿದರ ನೆರವು ಪಡೆಯಬೇಕಾಗುತ್ತದೆ. ಇದೆಲ್ಲವೂ ಖರ್ಚಿನ ವಿಷಯವೇ ಆಗಿದೆ.
ಇದನ್ನೂ ಓದಿ:‘ಜನ ನಾಯಗನ್’ ವಿವಾದ: ಸಿಬಿಎಫ್ಸಿ ಮಾಡಿದ್ದೇನು? ವಿವರಿಸಿದ ನಿರ್ಮಾಪಕ
ಒಟಿಟಿ ಜಮಾನಾನಲ್ಲಿ ಈ ಕ್ಯಾಪ್ಷನ್ಗಳು ಬಹುತೇಕ ಎಲ್ಲ ಸಿನಿಮಾಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳುತ್ತವೆ. ಕೆಲವು ಸಿನಿಮಾಗಳಿಗೆ ಒಟಿಟಿಗಳೇ ಕ್ಯಾಪ್ಷನ್ ನೀಡುತ್ತವೆ. ಆದರೆ ಭಾರತೀಯ ಸಿನಿಮಾಗಳು ಆಡಿಯೋ ಡಿಸ್ಕ್ರಿಪ್ಷನ್ಗಳು ಸೇರಿಸುವುದು ಕಡಿಮೆ. ಆದರೆ ಇನ್ನು ಮುಂದೆ ಇದೂ ಸಹ ಕಡ್ಡಾಯ ಆಗಲಿದೆ. ಅಲ್ಲದೆ, ಸಬ್ಟೈಟಲ್ಗಳ ಗಾತ್ರದ ಬಗ್ಗೆಯೂ ಸಿಬಿಎಫ್ಸಿ ನಿಯಮ ಮಾಡಿದ್ದು, ಇದು ಕೆಲವು ನಿರ್ದೇಶಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ