ಬೆಂಗಳೂರು, ಜುಲೈ 22: ‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಾಕ್ ಏಜೆಂಟರು ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಖಂಡಿಸಿ ಪಾದಯಾತ್ರೆ ಮೂಲಕ ಕಮಿಷನರ್ ಕಚೇರಿಗೆ ಹೋಗುತ್ತೇವೆ. 15ಕ್ಕೂ ಹೆಚ್ಚು ಶಾಸಕರು ಮತ್ತು ಎಂಎಲ್ಸಿಗಳಿದ್ದರೂ ರಕ್ಷಣೆ ಇಲ್ಲವಾದರೆ ಸಾಮಾನ್ಯ ಜನರ ಗತಿಯೇನು? ಗೂಂಡಾ ಕಾಯ್ದೆಯಡಿ ಈ ಗೂಂಡಾಗಳ ಬಂಧನ ಆಗಬೇಕು. ಗೂಂಡಾ ಸಿಎಂ, ಗೂಂಡಾ ಸರ್ಕಾರ ಲಾಂಗ್, ಚಾಕು, ಮೊಟ್ಟೆ ತಂದಿದ್ದಾರೆ. ಬಾಂಬುಗಳೂ ತಂದಿರಬೇಕು. ಕಾಂಗ್ರೆಸ್ ಕಚೇರಿಯಲ್ಲಿ ಬಾಂಬುಗಳಿರಬಹುದು. ಕೆಪಿಸಿಸಿ ಕಚೇರಿ ಮೇಲೆ ರೈಡ್ ಮಾಡಿ ಪೊಲೀಸರು ತನಿಖೆ ಮಾಡಲಿ’ ಎಂದು ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
