Headlines

ಬಿಳಿ ಶರ್ಟ್, ಖಾಕಿ ಪ್ಯಾಂಟ್‌: ಡ್ರೆಸ್ ಕೋಡ್ ಪಾಲಿಸಿ ಮತ ಹಾಕಿ ವಿಜಯ್​ಗೆ ಬೆಂಬಲ ಸೂಚಿಸಿದ ಸೆಲೆಬ್ರಿಟಿಗಳು – Kannada News | Tamil celebrities who voted for TVK Thalapathy Vijay by wearing white shirt khaki pant dress code

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ (ಏಪ್ರಿಲ್ 23) ನಡೆದ ಮತದಾನವು ಅತ್ಯಂತ ಶಾಂತಿಯುತವಾಗಿ ಜರುಗಿತು. ಕಾಲಿವುಡ್ ತಾರೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಆದರೆ ಈ ಬಾರಿಯ ಚುನಾವಣೆಯಲ್ಲಿ (Tamil Nadu Election) ಒಂದು ವಿಶೇಷ ಸಂಗತಿ ಎಲ್ಲರ ಗಮನ ಸೆಳೆಯಿತು. ಹಲವಾರು ಯುವ ನಟರು ಮತ್ತು ಸೆಲೆಬ್ರಿಟಿಗಳು ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಧರಿಸಿ ಮತಗಟ್ಟೆಗೆ ಬಂದಿದ್ದು, ಇದು ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ನೀಡಿದ ಬೆಂಬಲ ಎಂದು ವಿಶ್ಲೇಷಿಸಲಾಗುತ್ತಿದೆ.

ನಟ ವಿಜಯ್ ಅವರ ರಾಜಕೀಯ ಪ್ರವೇಶದ ನಂತರದ ಮೊದಲ ಚುನಾವಣೆ ಇದಾಗಿದ್ದು, ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಒಂದು ನಿರ್ದಿಷ್ಟ ಡ್ರೆಸ್ ಕೋಡ್ ಅನುಸರಿಸುತ್ತಿದ್ದಾರೆ. ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ಅನ್ನು ಟಿವಿಕೆ ಪಕ್ಷದ ಕಾರ್ಯಕರ್ತರು ಬಳಸುತ್ತಿದ್ದಾರೆ. ಮತದಾನದ ದಿನದಂದು ಅನೇಕ ಸೆಲೆಬ್ರಿಟಿಗಳು ಇದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಅವರ ರಾಜಕೀಯ ಹಾದಿಗೆ ಬೆಂಬಲ ಸೂಚಿಸಿದಂತೆ ತೋರುತ್ತಿದೆ.

ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ದಳಪತಿ ವಿಜಯ್ ಅವರ ಪರವಾಗಿ ಬಹಿರಂಗ ಪ್ರಚಾರ ಮಾಡದೇ ಇರಬಹುದು. ಆದರೆ ಬಿಳಿ ಶರ್ಟ್ ಅಥವಾ ಖಾಕಿ ಪ್ಯಾಂಟ್ ಧರಿಸಿ ಮತಗಟ್ಟೆಗೆ ಬರುವ ಮೂಲಕ ಪರೋಕ್ಷವಾಗಿ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಸೂಚಿಸಿದರು. ಅದನ್ನು ನೋಡಿದ ಅಭಿಮಾನಿಗಳಿಗೆ ಎಲ್ಲವೂ ಅರ್ಥ ಆಗಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಚಿಯಾನ್ ವಿಕ್ರಮ್, ಸಿಂಬು, ಪ. ರಂಜಿತ್, ಸಿಬಿ ಸತ್ಯರಾಜ್, ಜೈ, ವಿಜಯ್ ಕುಮಾರ್, ಅರುಣ್ ವಿಜಯ್, ಐಶ್ವರ್ಯಾ ರಜನಿಕಾಂತ್ ಸೇರಿದಂತೆ ಹಲವರು ಇದೇ ಡ್ರೆಸ್​ ಕೋಡ್​ ಅನುಸರಿಸಿದ್ದಾರೆ. ಹಾಗಾಗಿ ಇವರೆಲ್ಲರೂ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬುದು ಅಭಿಮಾನಿಗಳು ಅಭಿಪ್ರಾಯ. ಈ ಕುರಿತು ಹಲವು ವಿಡಿಯೋಗಳು ವೈರಲ್ ಆಗಿವೆ.

ಇದನ್ನೂ ಓದಿ: ಪತ್ನಿ ಫೋಟೋ ನೋಡಿ ಮೌನ ತಾಳಿದ ದಳಪತಿ ವಿಜಯ್; ವಿಡಿಯೋ ವೈರಲ್

ಇದೇ ಮೊದಲ ಬಾರಿಗೆ ದಳಪತಿ ವಿಜಯ್ ಅವರು ರಾಜಕೀಯದ ಕಣದಲ್ಲಿ ಸ್ಪರ್ಧಿಸಿದ್ದಾರೆ. ತಮ್ಮದೇ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಅವರು ಚುನಾವಣೆಗೆ ನಿಂತಿದ್ದಾರೆ. ಮೇ 4ರಂದು ಫಲಿತಾಂಶ ಪ್ರಕಟ ಆಗಲಿದೆ. ಮೊದಲ ಪ್ರಯತ್ನದಲ್ಲೇ ವಿಜಯ್ ಅವರಿಗೆ ಗೆಲುವು ಸಿಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಿಳಿಯಲು ಅಭಿಮಾನಿಗಳು ಮತ್ತು ಬೆಂಬಲಿಗರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *