ಬೆಂಗಳೂರು ಮಳೆ ಅಬ್ಬರ: ಅವಾಂತರಗಳ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾದ ಜಿಬಿಎ – Kannada News | Bengaluru Monsoon Preparedness: GBA’s Proactive Steps for Rain Management and Flood Prevention

ಬೆಂಗಳೂರು, ಏಪ್ರಿಲ್​ 30: ನಗರದಲ್ಲಿ ನಿನ್ನೆ ಸಂಜೆ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆ (Rain) ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯ ಆರ್ಭಟಕ್ಕೆ ಹಲವು ಜನರು ಬಲಿಯಾಗಿದ್ದು, ಎಲ್ಲೆಡೆ  ಅವಾಂತರಗಳು ಸಂಭವಿಸಿವೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಮುಂಬರುವ ದಿನಗಳಲ್ಲಿ ಮಳೆಯ ಅನಾಹುತಗಳನ್ನು ತಡೆಗಟ್ಟಲು ಯುದ್ಧೋಪಾದಿಯಲ್ಲಿ ಸಿದ್ಧತೆಯನ್ನು ನಡೆಸಿದೆ.

ಮುನ್ನೆಚ್ಚರಿಕೆ ಕ್ರಮಗಳಿಗೆ ಜಿಬಿಎ ಸಜ್ಜು

  • ಪ್ರಾಥಮಿಕ ಮತ್ತು ದ್ವಿತೀಯ ಹಂತದ ಮಳೆ ನೀರುಗಾಲುವೆಗಳ ಡೀಸಿಲ್ಡಿಂಗ್ ಹಾಗೂ ಪುನಚೇತನ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವುದು.
  • ವಿಶ್ವ ಬ್ಯಾಂಕ್ ನೆರವಿನ 173 ಕಿ.ಮೀ ಹೊಸ ಮಳೆ ನೀರುಗಾಲುವೆ ತಡೆಗೋಡೆ ಕೆಲಸಗಳು ಮತ್ತು 83 ಕಿ.ಮೀ ಮೇಲ್ದರ್ಜೇಗೇರಿಸುವ ಕಾಮಗಾರಿಗಳು ಪ್ರಗತಿಯಲ್ಲಿದೆ.
  • ಎನ್.ಡಿ.ಎಂ.ಎಫ್ ಅನುದಾನದಲ್ಲಿ 31 ಅವಶ್ಯಕ ಸ್ಥಳಗಳಲ್ಲಿ ಕಲ್ವರ್ಟ್‌ಳ ನಿರ್ಮಾಣ.
  • ಕೆರೆಗಳಲ್ಲಿ ನೀರು ನಿಯಂತ್ರಿಸಲು 127 ಕಡೆ ಸ್ಫೂಯೀಸ್ ಗೇಟ್‌ಗಳ ಅಳವಡಿಕೆ.
  • ಹೆಚ್ಚುವರಿ ಪಕ್ಕದ ಚರಂಡಿಗಳು ಹಾಗೂ ಕ್ರಾಸ್-ಡ್ರೈನೇಜ್ ಕಾಮಗಾರಿಗಳನ್ನು ನಿರ್ಮಿಸುವುದು.
  • ಪ್ರಮುಖ ಪ್ರದೇಶಗಳಲ್ಲಿ ಗ್ರೇಟೆಡ್ ಇನ್‌ಲೆಟ್‌ಗಳು ಮತ್ತು ಸಿಲ್ಟ್ ಟ್ರ್ಯಾಪ್‌ಗಳನ್ನು ಅಳವಡಿಸುವುದು.
  • ಮುಂಗಾರು ಪೂರ್ವ ಡೀಸಿಲ್ಟಂಗ್ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು.
  • ಅತಿಸೂಕ್ಷ್ಮ ಪ್ರದೇಶಗಳಲ್ಲಿ ತಂಡಗಳ ನಿಯೋಜಿಸುವುದು.

ಮಳೆಯಿಂದ ಹಾನಿಯಾದ ವಿವರ 

ಇನ್ನು ಜಿಬಿಎ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸುರಿದ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಯ ಮತ್ತು ಹಾನಿಯ ಮಾಹಿತಿಯನ್ನು ಜಿಬಿಎ ನೀಡಿದೆ.

  • ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾಟನ್‌ಪೇಟೆ, ಬಿನ್ನಿಪೇಟೆ, ಸಂಪಂಗಿರಾಮನಗರ, ಶಿವಾಜಿನಗರ ಹಾಗೂ ಸುಭಾಷ್ ನಗರ ವಾರ್ಡ್‌ಗಳಲ್ಲಿ 92.00 ಮಿ.ಮೀ ಮಳೆ ದಾಖಲಾಗಿದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ 15.00 ಮಿ.ಮೀ ಮಳೆ, ಒಟ್ಟಾರೆ ಸರಾಸರಿ 55.00 ಮಿ.ಮೀ ಮಳೆ ಸುರಿದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಬೆನ್ನಲ್ಲೇ ಸರ್ಕಾರ ಅಲರ್ಟ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

  • ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 226 ಮರಗಳು ಧರೆಗುರುಳಿವೆ. 623 ಕೊಂಬೆಗಳು ಮುರಿದು ಬಿದ್ದಿವೆ.
  • ನಗರ ಪಾಲಿಕೆಗಳ ವತಿಯಿಂದ 30 ತಂಡಗಳು ಹಾಗೂ ನಾಲ್ಕು ಕ್ರೇನ್‌ಗಳನ್ನು ತೆರವು ಕಾರ್ಯಕ್ಕಾಗಿ ನಿಯೋಜಿಸಲಾಗಿದ್ದು, ಅಗ್ನಿಶಾಮಕ ಇಲಾಖೆಯಿಂದ 15 ತಂಡಗಳು, ಎಸ್‌.ಡಿ.ಆರ್‌.ಎಫ್​ನಿಂದ 4 ತಂಡಗಳು ಹಾಗೂ ಹೆಚ್ಚುವರಿಯಾಗಿ 10 ಖಾಸಗಿ ತಂಡಗಳನ್ನು ಬಾಡಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.
  • ಧರೆಗುರುಳಿದ ಮರಗಳು ಹಾಗೂ ರೆಂಬೆಗಳ ಪೈಕಿ ಮಧ್ಯಾಹ್ನ 12:30ರ ವೇಳೆಗೆ 150 ಮರಗಳು ಹಾಗೂ 384 ರೆಂಬೆಗಳನ್ನು ತೆರವುಗೊಳಿಸಲಾಗಿದ್ದು, ಉಳಿದ ತೆರವು ಕಾರ್ಯ ಸಕ್ರಿಯವಾಗಿ ಮುಂದುವರಿದಿದೆ.
  • ನಗರದಾದ್ಯಂತ 62ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವ ಕುರಿತು ಸಾರ್ವಜನಿಕರಿಂದ ಮಾಹಿತಿ ಬಂದಿದೆ.
  • 3 ಕಡೆ ಗೋಡೆ ಕುಸಿತ, 105 ಕಡೆ ಮನೆಗಳಿಗೆ ನೀರು ನುಗ್ಗಿರುವುದು ಹಾಗೂ 1 ಕಡೆ ಮೂಲಸೌಕರ್ಯ ಹಾನಿ ಆಗಿದೆ.
  • ಕೆ.ಆರ್ ವೃತ್ತ, ಮಡಿವಾಳ, ಸ್ಯಾಂಕಿ ರಸ್ತೆ, ಜಯದೇವ, ಯಮಲೂರು, ಶಂಕರನಾಗ್, ಟ್ಯಾನರಿ ರಸ್ತೆ ಹಾಗೂ ನಾಯಂಡಹಳ್ಳಿ ಕೆಳಸೇತುವೆ ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಗತ್ಯವಿರುವ ಸ್ಥಳಗಳಲ್ಲಿ ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯಕೈಗೊಳ್ಳಲಾಗಿದೆ.
  • ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತದಿಂದ 7 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಸಮೀಪ ಮಳೆಯ ವೇಳೆ ವಿದ್ಯುತ್ ತಂತಿ ತಗುಲಿ ಜೆ.ಡಿ. ಮರ ಕೊಳಗೇರಿ ನಿವಾಸಿ 35 ವರ್ಷದ ರಘು ಮೃತಪಟ್ಟಿದ್ದು, ಅವರ ಕುಟುಂಬಕ್ಕೂ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ: ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು

  • ಮಳೆಯ ಪರಿಣಾಮ 186 ಕಡೆ ವಿದ್ಯುತ್ ಕಂಬಗಳು ಹಾಗೂ 36 ಕಡೆ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ. ಬೆಸ್ಕಾಂ ಇಲಾಖೆಯಿಂದ ಈಗಾಗಲೇ 112 ವಿದ್ಯುತ್ ಕಂಬಗಳು ಹಾಗೂ 18 ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *