ಐಪಿಎಲ್ 2026 ರ 42ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲೀಗ್ನಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಮೊದಲ ಎರಡು ಓವರ್ಗಳಲ್ಲಿ ಸ್ಫೋಟಕ ಆರಂಭ ಸಿಕ್ಕಿತು. ಅದರಲ್ಲೂ ರಬಾಡ ಬೌಲ್ ಮಾಡಿದ 2ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಬೌಂಡರಿಗಳ ಮಳೆಗರೆದರು.
ಈ ಪಂದ್ಯದಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಬೆಥೆಲ್ ಇನ್ನಿಂಗ್ಸ್ ಆರಂಭಿಸಿದರು. ಗುಜರಾತ್ ಪರ ಸಿರಾಜ್ ಎಸೆದ ಮೊದಲ ಓವರ್ನಲ್ಲಿ 1 ಬೌಂಡರಿ ಸಹಿತ 6 ರನ್ಗಳು ಬಂದವು. ಎರಡನೇ ಓವರ್ನಲ್ಲಿ ಸ್ಟ್ರೇಕ್ಗೆ ಬಂದ ವಿರಾಟ್ ಕೊಹ್ಲಿ, ರಬಾಡ ಬೌಲ್ ಮಾಡಿದ ಎರಡನೇ ಓವರ್ನ ಮೊದಲ ಐದು ಎಸೆತಗಳಲ್ಲಿ ಸತತ ಐದು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಸತತ 5 ಎಸೆತಗಳಲ್ಲಿ ಐದು ಬೌಂಡರಿಗಳನ್ನು ಬಾರಿಸಿದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಕೊಹ್ಲಿಯೂ ಸೇರಿಕೊಂಡರು.
ಆದಾಗ್ಯೂ ಈ ಪಂದ್ಯದಲ್ಲಿ ಕೊಹ್ಲಿಗೆ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ರಬಾಡ ಬೌಲ್ ಮಾಡಿದ ಇನ್ನಿಂಗ್ಸ್ನ 4ನೇ ಓವರ್ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಕೊಹ್ಲಿ 13 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್ ಬಾರಿಸಿ ಔಟಾದರು.
