Headlines

ಬೆಟ್ಟ ಹತ್ತುವಾಗ ಉಸಿರಾಡಲು ಕಷ್ಟವಾದರೆ ಈ ಸರಳ ಕ್ರಮ ನಿಮಗೆ ಸಹಾಯ ಮಾಡಬಹುದು – Kannada News | Safe Hill Station Travel: How To Handle Low Oxygen Levels

ಬೆಟ್ಟ ಪ್ರದೇಶಗಳಿಗೆ ಪ್ರವಾಸ (Travel) ಹೋಗುವುದು ಬಹುತೇಕರಿಗೆ ಇಷ್ಟ. ಆದರೆ ಎತ್ತರದ ಪ್ರದೇಶಗಳಿಗೆ ಹೋದ ನಂತರ ಕೆಲವರಿಗೆ ಉಸಿರಾಟದ ತೊಂದರೆ, ಆಯಾಸ, ತಲೆಸುತ್ತು ಅಥವಾ ದೌರ್ಬಲ್ಯ ಕಾಣಿಸಬಹುದು. ಎತ್ತರ ಹೆಚ್ಚಾದಂತೆ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದರಿಂದ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಕೆಲವರು ಇದಕ್ಕೆ ಹೆದರಿ ಏನು ಮಾಡಬೇಕು ಎಂದು ತಿಳಿಯದೆಯೇ ಪ್ಯಾನಿಕ್ ಆಗುತ್ತಾರೆ. ಹಾಗಾಗಿ ಉಸಿರಾಟದ ತೊಂದರೆ (Breathing Problems) ಉಂಟಾದರೆ ಏನು ಮಾಡಬೇಕು, ಈ ಸಮಯದಲ್ಲಿ ಏನನ್ನು ಮಾಡಬಾರದು ಎಂಬುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಉಸಿರಾಟದ ತೊಂದರೆ ಉಂಟಾದರೆ ಏನು ಮಾಡಬೇಕು?

ಬೆಟ್ಟ ಪ್ರದೇಶದಲ್ಲಿ ಉಸಿರಾಟದ ತೊಂದರೆ ಕಂಡುಬಂದರೆ ಮೊದಲು ಆತಂಕಪಡಬೇಡಿ. ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ. ವೇಗವಾಗಿ ನಡೆಯುವುದು, ಓಡುವುದು ಅಥವಾ ಹೆಚ್ಚು ದೈಹಿಕ ಶ್ರಮ ಮಾಡುವುದನ್ನು ತಪ್ಪಿಸಿ. ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಲು ಪ್ರಯತ್ನಿಸಿ. ಸಾಕಷ್ಟು ನೀರು ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿ. ಸಾಧ್ಯವಾದರೆ ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆಯಿರಿ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಉಸಿರಾಟದ ತೊಂದರೆಯೊಂದಿಗೆ ಎದೆನೋವು, ತೀವ್ರ ಆಯಾಸ, ತುಟಿ ಅಥವಾ ಉಗುರುಗಳು ನೀಲಿ ಬಣ್ಣಕ್ಕೆ ತಿರುಗುವುದು, ತೀವ್ರ ತಲೆನೋವು, ಗೊಂದಲ, ನಿರಂತರ ತಲೆಸುತ್ತು ಅಥವಾ ನಡೆಯಲು ಕಷ್ಟವಾಗುವುದು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಇವು ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.

ಇದನ್ನೂ ಓದಿ: ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ಪ್ರವಾಸಕ್ಕೆ ಹೋಗುವಾಗ ಏನನ್ನು ಮಾಡಬಾರದು

ಬೆಟ್ಟ ಪ್ರದೇಶಗಳಿಗೆ ಯಾವುದೇ ಸಿದ್ಧತೆ ಇಲ್ಲದೆ ಹೋಗುವುದು, ಒಂದೇ ದಿನದಲ್ಲಿ ಹೆಚ್ಚಿನ ಎತ್ತರಕ್ಕೆ ಏರುವುದು, ಸಾಕಷ್ಟು ನೀರು ಕುಡಿಯದೇ ಇರುವುದು ಹಾಗೂ ಊಟ ಬಿಟ್ಟು ಹೋಗುವುದು ಸಮಸ್ಯೆಯನ್ನು ಹೆಚ್ಚಿಸಬಹುದು. ಮದ್ಯಪಾನ ಮತ್ತು ಧೂಮಪಾನ ಕೂಡ ದೇಹದಲ್ಲಿನ ಆಮ್ಲಜನಕದ ಲಭ್ಯತೆಯನ್ನು ಕಡಿಮೆ ಮಾಡುತ್ತವೆ.

ಸುರಕ್ಷಿತ ಪ್ರವಾಸಕ್ಕಾಗಿ ಸಲಹೆಗಳು

ಮಕ್ಕಳು, ವಯೋವೃದ್ಧರು ಹಾಗೂ ಹೃದಯ ಅಥವಾ ಶ್ವಾಸಕೋಶದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ದೇಹದ ಸೂಚನೆಗಳನ್ನು ಗಮನಿಸಿ, ಅಗತ್ಯವಿದ್ದರೆ ವಿಶ್ರಾಂತಿ ಪಡೆದು ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ ಪ್ರಯಾಣಕ್ಕೆ ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *