ಭಾರತದ ಕನಸು; ದೆಹಲಿ ‘ರಾಮಾಯಣ’ ಈವೆಂಟ್​​ನಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಯಶ್ – Kannada News | Ramayana Is Indias Dream Says Rocking Star Yash in Pratham Sankalp Event

‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಂದು ರಿಲೀಸ್ ಆಗಲಿದೆ. ಜುಲೈ 24ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಅದಕ್ಕೂ ಒಂದು ವಾರ ಮೊದಲು ಅಂದರೆ ಇಂದು (ಜುಲೈ 18) ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮ ನಡೆದಿದೆ. ‘ಪ್ರಥಮ ಸಂಕಲ್ಪ’ ಅನ್ನೋದು ಈ ಕಾರ್ಯಕ್ರಮದ ಹೆಸರಾಗಿತ್ತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ‘ರಾಮಾಯಣ’ ಸಿನಿಮಾ ಕಲಾವಿದರು ಕೂಡ ಬಂದಿದ್ದರು. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಕೂಡ ಆಗಮಿಸಿದ್ದರು. ಅವರು ತಮ್ಮ ಪಾತ್ರದ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ವಿವರಿಸಿದರು.

ಯಶ್​​ಗೆ ನಿರ್ಮಾಪಕ ನಿತೇಶ್​ ತಿವಾರಿ ಧನ್ಯವಾದ ಹೇಳಿದರು. ‘ರಾಮಾಯಣವನ್ನು ಇಲ್ಲಿಯವರೆಗೆ ತರೋಕೆ ಯಶ್ ಅವರು ಸಹ ನಿರ್ಮಾಪಕನಾಗಿ, ಗೆಳೆಯನಾಗಿ ಸಹಾಯ ಮಾಡಿದ್ದಾರೆ’ ಎಂದರು ನಿತೇಶ್.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?

‘ಎಲ್ಲರಿಗೂ ನಮಸ್ಕಾರ’ ಎಂದು ಯಶ್ ಕನ್ನಡದಲ್ಲಿ ಮಾತು ಆರಂಭಿಸಿದರು. ಆ ಬಳಿಕ ಎಲ್ಲಾ ಭಾಷೆಯಲ್ಲಿ ನಮಸ್ಕಾರ ಹೇಳಿದರು. ‘ಇದು ನಿಜಕ್ಕೂ ಒಂದೊಳ್ಳೆಯ ಪ್ರಾಜೆಕ್ಟ್. ನಮಿತ್ ಮಲ್ಹೋತ್ರಾ ಅವರಿಗೆ ಇದರ ಕ್ರೆಡಿಟ್ ಹೋಗಬೇಕು.ಅವರು ನನಗೆ ಅವಕಾಶ ಕೊಟ್ಟರು. ಹಿಂದಿ ಕಲಿಯಲು ಕೂಡ ಅವಕಾಶ ಸಿಕ್ಕಿತು’ ಎಂದರು ಯಶ್.


‘ಇದು ಭಾರತದ ಕನಸು. ನಮ್ಮ ಕಥೆಯನ್ನು ವಿದೇಶದ ಪ್ರೇಕ್ಷಕರ ಎದುರು ಇಡಬೇಕು ಎಂಬುದು ಎಲ್ಲರ ಕನಸು. ರಣಬೀರ್ ಕಪೂರ್ ಅವರು ನೀವು ನಿಜಕ್ಕೂ ಗ್ರೇಟ್, ಅವರು ಈ ಪಾತ್ರಕ್ಕೆ ಎಷ್ಟು ಶರಣಾಗಿದ್ದರು ಎಂಬುದು ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ಸಾಯಿ ಕೂಡ ಫ್ಯಾಬುಲಸ್ ನಟಿ’ ಎಂದರು ಯಶ್.

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ನಮಿತ್ ಮಲ್ಹೋತ್ರ ಅವರು ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ (ಎರಡು ಪಾರ್ಟ್​ ಸೇರಿ) ಬಂಡವಾಳ ಹೂಡಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಸಿನಿಮಾ ಆಗಿದೆ.

ಮತ್ತಷ್ಟು ಕನ್ನಡ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *