ಇಸ್ರೇಲ್ ಪ್ರಧಾನಿ ಜೊತೆ ನರೇಂದ್ರ ಮೋದಿ
ಜೆರುಸಲೆಂ, ಫೆಬ್ರುವರಿ 26: ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್ ಭೇಟಿ ಹಲವು ಫಲಗಳನ್ನು ನೀಡುತ್ತಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಶಿಕ್ಷಣ, ಕೃಷಿ ಹಾಗೂ ಇನ್ನೂ ಹಲವು ಸೆಕ್ಟರ್ಗಳಲ್ಲಿ ಭಾರತ ಹಾಗೂ ಇಸ್ರೇಲ್ ದೇಶಗಳ ನಡುವೆ ಬಹು ಒಪ್ಪಂದಗಳು ಹಾಗೂ ಎಂಒಯುಗಳಾಗಿವೆ. ಈಗಾಗಲೇ ಪ್ರಬಲವಾಗಿರುವ ಎರಡೂ ದೇಶಗಳ ಸಂಬಂಧ (India Israel relationship) ಇದೀಗ ಮತ್ತಷ್ಟು ಗಟ್ಟಿಗೊಂಡಿದೆ.
ಇಸ್ರೇಲ್ ಕೆಲ ತಂತ್ರಜ್ಞಾನಗಳಲ್ಲಿ ಕ್ಷಮತೆ ಹೊಂದಿದೆ. ಡಿಫೆನ್ಸ್ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಇನ್ನೋವೇಶನ್ಗಳನ್ನು ಮಾಡಿದೆ. ಕೃಷಿ ಮಾತ್ರವಲ್ಲ, ಹಲವು ಕ್ಷೇತ್ರಗಳಲ್ಲಿ ಇಸ್ರೇಲೀ ಸಂಸ್ಥೆಗಳು ನಾವೀನ್ಯತೆ ಹೊಂದಿವೆ. ಇಸ್ರೇಲ್ ಜೊತೆಗಿನ ಈ ಸಂಬಂಧದಿಂದ ಭಾರತಕ್ಕೆ ವಿವಿಧ ಸ್ತರಗಳಲ್ಲಿ ಲಾಭವಾಗುವ ನಿರೀಕ್ಷೆ ಇದೆ. ಎರಡೂ ದೇಶಗಳ ನಡುವೆ ಡಿಫೆನ್ಸ್ ಸಹಕಾರ ಹೆಚ್ಚಬಹುದು.
ಇದನ್ನೂ ಓದಿ: ಆಂತರಿಕ ಜಗಳಗಳು ಅಲ್ಲೂ ಇದ್ವು, ಆದ್ರೆ ಇಸ್ರೇಲ್ನ ವಿಪಕ್ಷ ನಾಯಕರು ಪ್ರಧಾನಿ ಮೋದಿ ಭಾಷಣವನ್ನು ಭಹಿಷ್ಕರಿಸಲಿಲ್ಲ
ಭಾರತೀಯರ ಕೌಶಲ್ಯಗಳೂ ಕೂಡ ಇಸ್ರೇಲ್ಗೆ ವರದಾನವಾಗಿವೆ. ಇಸ್ರೇಲ್ನ ಕಟ್ಟಡ ನಿರ್ಮಾಣ ಮತ್ತು ಕೇರ್ಗಿವಿಂಗ್ ಸೆಕ್ಟರ್ಗಳಲ್ಲಿ ಭಾರತೀಯರ ಕೊಡುಗೆ ಗಮನಾರ್ಹವಾಗಿದೆ. ಇಸ್ರೇಲ್ ಭೇಟಿ ವೇಳೆ ನರೇಂದ್ರ ಮೋದಿ ಅವರು ಈ ವಿಚಾರ ಪ್ರಸ್ತಾಪಿಸಿ 2023ರ ಮ್ಯಾನ್ಪವರ್ ಮೊಬಿಲಿಟಿ ಅಗ್ರೀಮೆಂಟ್ಗೆ ಕ್ರೆಡಿಟ್ ಕೊಟ್ಟಿದ್ದಾರೆ.
ಎರಡೂ ದೇಶಗಳಿಗೂ ಲಾಭ ತರುವಂತಹ ಟ್ರೇಡ್ ಡೀಲ್ ಸದ್ಯದಲ್ಲೇ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹು ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ ಹಲವು ವಿಚಾರಗಳ ವಿನಿಮಯ ಮಾಡಿದ್ದಾರೆ. ಬಹಳ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದದ ವಿಚಾರವನ್ನೂ ಚರ್ಚಿಸಿದ್ದಾರೆ. ಈ ಭೇಟಿ ಬಳಿಕ ಇಬ್ಬರೂ ಕೂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ, ‘ಪರಸ್ಪರ ಲಾಭವಾಗುವಂತಹ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲು ಕಾರ್ಯವಹಿಸುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ: ಮೋದಿ ಜಾಕೆಟ್ ತೊಟ್ಟು ಪ್ರಧಾನಿ ಮೋದಿಗೆ ಸರ್ಪ್ರೈಸ್ ಕೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು
ಇವರ ಹೇಳಿಕೆ ಬಹಳ ಮಹತ್ವದ್ದೆನಿಸಿದೆ. ಭಾರತ ಮತ್ತು ಇಸ್ರೇಲ್ ನಡುವೆ ಎಫ್ಟಿಎಗಾಗಿ ನಡೆದಿರುವ ಮಾತುಕತೆ ಮತ್ತು ಸಂಧಾನಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 6:02 pm, Thu, 26 February 26
