ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ; ಪೊಲೀಸರು-ರೈತರ ನಡುವೆ ಘರ್ಷಣೆ – Kannada News | Farmers protest Turns Violent clash with Police in Bhopal

ಭೋಪಾಲ್, ಜುಲೈ 29: ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಶೇ. 100ರಷ್ಟು ಹೆಸರು ಬೇಳೆ ಖರೀದಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನರ್ಮದಾಪುರಂನಲ್ಲಿ ಪ್ರತಿಭಟನೆ (Protest) ನಡೆಸುತ್ತಿದ್ದ ರೈತರು ಮತ್ತು ಪೊಲೀಸರ ನಡುವೆ ಭಾರಿ ಘರ್ಷಣೆ ಸಂಭವಿಸಿದೆ. ಪ್ರತಿಭಟನಾನಿರತ ರೈತರು ಬಸ್ ಮೇಲೇರಿ, ಪೊಲೀಸರು ಹಾಕಿದ್ದ ಬ್ಯಾರಿಕೇಡ್​​ಗಳನ್ನು ಮುರಿದು ಹಾಕಿದರು. ವಿವಿಧ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ರೈತರು ಮಂಗಳವಾರ ರಾಜ್ಯ ರಾಜಧಾನಿ ಭೋಪಾಲ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದು, ರಾತ್ರಿಯಿಡೀ ಧರಣಿ ಮುಂದುವರಿಸಿದ್ದರು. ಇದರಿಂದಾಗಿ ಅತ್ಯಂತ ದಟ್ಟಣೆಯಿಂದ ಕೂಡಿದ ನರ್ಮದಾಪುರಂ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ ರೈತರು, ಸೋಮವಾರ ತಡಸಂಜೆ ಸೆಹೋರ್‌ನ ಬುಧ್ನಿಗೆ ತಲುಪಿ, ಮಂಗಳವಾರ ಭೋಪಾಲ್‌ಗೆ ಆಗಮಿಸಿದ್ದರು. ರಾಜ್ಯ ಸರ್ಕಾರವು ಈಗಾಗಲೇ ರೈತರೊಂದಿಗೆ ಮೊದಲ ಹಂತದ ಮಾತುಕತೆ ನಡೆಸಿದೆಯಾದರೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *