ಮಂಚದ ಕೆಳಗೆ ಈ ಕೆಲವು ವಸ್ತುಗಳನ್ನು ಇಡಲೇಬಾರದು; ಯಾಕೆ ಗೊತ್ತಾ? – Kannada News | These items should not be stored under the bed

ಹಾಸಿಗೆಯ (bed) ಕೆಳಗಿರುವ ಖಾಲಿ ಜಾಗವನ್ನು  ಯಾಕೆ ಸುಮ್ಮನೆ ಬಿಡೋದು ಎಂದು ಅನೇಕರು ಆ ಜಾಗದಲ್ಲಿ ಒಂದಷ್ಟು ವಸ್ತುಗಳನ್ನು  ಸಂಗ್ರಹಿಸಿಡಲು ಬಳಸುತ್ತಾರೆ. ಹೆಚ್ಚುವರಿ ಬೆಡ್‌ಶೀಟ್‌, ದಿಂಬು, ಬಟ್ಟೆಗಳು, ಪುಸ್ತಕಗಳು, ಆಟಿಕೆಗಳು ಮತ್ತು ರಟ್ಟಿನ ಪೆಟ್ಟಿಗೆಗಳಂತಹ ವಸ್ತುಗಳನ್ನು ಹೆಚ್ಚಾಗಿ ಮಂಚದ ಕೆಳಗೆಯೇ ಇಡಲಾಗುತ್ತದೆ. ಆದರೆ ಹೀಗೆ ವಸ್ತುಗಳನ್ನು ಸಂಗ್ರಹಿಸಿದಾಗ ಮಂಚದ ಕೆಳಗೆ ಧೂಳು, ತೇವಾಂಶ ಮತ್ತು ಜೇಡರ ಬಲೆಗಳು ಸಂಗ್ರಹವಾಗಬಹುದು. ಇದು ಕೀಟಗಳನ್ನು ಆಕರ್ಷಿಸುವುದಲ್ಲದೆ, ಈ ಧೂಳು, ತೇವಾಂಶ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಆದ್ದರಿಂದ ಈ ಕೆಲವೊಂದು ವಸ್ತುಗಳನ್ನು ತಪ್ಪಿಯೂ ಬೆಡ್‌ ಕೆಳಗೆ ಸ್ಟೋರ್‌ ಮಾಡಲು ಹೋಗಬೇಡಿ.

ಮಂಚದ ಕೆಳಗೆ ಯಾವೆಲ್ಲಾ ವಸ್ತುಗಳನ್ನು ಸಂಗ್ರಹಿಸಿಡಬಾರದು?

ಹಾಸಿಗೆಯ ಕೆಳಗೆ ತೇವಾಂಶವಿದ್ದರೆ, ಅದರ ಕಾರಣದಿಂದಾಗಿ ಕೆಲವು ವಸ್ತುಗಳು ಕೊಳೆಯಬಹುದು, ಇದರಿಂದ ಕೆಟ್ಟ ವಾಸನೆ, ಬ್ಯಾಕ್ಟೀರಿಯಾ ಬೆಳೆಯಬಹುದು. ಈ ಅಂಶಗಳು ಮನೆಯ ನೈರ್ಮಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಅಲರ್ಜಿಗಳು ಮತ್ತು ಉಸಿರಾಟದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹಾಸಿಗೆಯ ಕೆಳಗಿರುವ ಜಾಗವನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ನೀವು ಅಲ್ಲಿ ಏನು ಸಂಗ್ರಹಿಸುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರುವುದು ಮುಖ್ಯ.

ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು: ಅನೇಕ ಜನರು ಬೆಡ್‌ಶೀಟ್‌, ಹಳೆಯ ಬಟ್ಟೆಗಳನ್ನೆಲ್ಲಾ ಕಾರ್ಡ್‌ಬೋರ್ಡ್‌ಗಳಲ್ಲಿ ಸಂಗ್ರಹಿಸಿ, ಅದನ್ನು ಮಂಚದ ಕೆಳಗೆ ಇಟ್ಟುಬಿಡುತ್ತಾರೆ. ಈ ಕಾರ್ಡ್‌ಬೋರ್ಡ್ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುವ ಕಾರಣ, ಇದು ಪೆಟ್ಟಿಗೆಗಳು ಮೃದುವಾಗಲು, ಅಚ್ಚು ಬೆಳೆಯಲು ಮತ್ತು ವಾಸನೆ ಉಂಟಾಗಲು ಕಾರಣವಾಗಬಹುದು. ಅಲ್ಲದೆ ಜಿರಳೆಗಳಂತಹ ಸಣ್ಣ ಕೀಟಗಳು ಸಹ ಕಾರ್ಡ್‌ಬೋರ್ಡ್‌ ಪೆಟ್ಟಿಗೆಯೊಳಗೆ ಅಡಗಿಕೊಳ್ಳಬಹುದು. ಆದ್ದರಿಂದ, ಸ್ಟೋರೆಜ್‌ಗಾಗಿ ಪ್ಲಾಸ್ಟಿಕ್ ಪೆಟ್ಟಿಗೆಗಳನ್ನು ಬಳಸುವುದು ಉತ್ತಮ.

ಬಟ್ಟೆಗಳು ಮತ್ತು ದಿಂಬುಗಳು:  ಕಂಬಳಿ, ದಿಂಬುಗಳನ್ನು ಹಾಗೆಯೇ ಹಾಸಿಗೆಯ ಕೆಳಗೆ ಇಟ್ಟಯ ಬಿಡುವುದು ಸೂಕ್ತವಲ್ಲ. ಇದು ಧೂಳು, ತೇವಾಂಶ ಸಂಗ್ರಹವಾಗಲು ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಗಾಳಿಯಾಡದ ಚೀಲಗಳಲ್ಲಿ ಹಾಕಿ ಸಂಗ್ರಹಿಸಿಡುವುದು ಸೂಕ್ತ.

ಪಾದರಕ್ಷೆಗಳು ಮತ್ತು ಕ್ರೀಡಾ ಸಾಮಗ್ರಿಗಳು:   ಚಪ್ಪಲಿಗಳು, ಬೂಟುಗಳು ಮತ್ತು ಕ್ರೀಡಾ ಸಾಮಗ್ರಿಗಳು ಕೊಳಕು, ಧೂಳು, ತೇವಾಂಶ ಮತ್ತು ಬ್ಯಾಕ್ಟೀರಿಯಾಗಳನ್ನು ಸಂಗ್ರಹಿಸಬಹುದು. ಅವುಗಳನ್ನು ಹಾಸಿಗೆಯ ಕೆಳಗೆ ಸಂಗ್ರಹಿಸುವುದರಿಂದ ಕೆಟ್ಟ ವಾಸನೆ ಬರುವುದಲ್ಲದೆ, ಕೋಣೆಯ ಸ್ವಚ್ಛತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶೂಗಳು ಮತ್ತು ಚಪ್ಪಲಿಗಳನ್ನು ಪ್ರತ್ಯೇಕ ಶೂ ರ್ಯಾಕ್‌ನಲ್ಲಿ ಸಂಗ್ರಹಿಸುವುದು ಉತ್ತಮ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು: ಆಧಾರ್ ಕಾರ್ಡ್‌ಗಳು, ಪಾಸ್‌ಪೋರ್ಟ್‌ಗಳು ಸೇರಿದಂತೆ ಪ್ರಮುಖ ಪತ್ರಗಳು, ಲ್ಯಾಪ್‌ಟಾಪ್‌ಗಳು ಮತ್ತು ಕ್ಯಾಮೆರಾಗಳಂತಹ ಎಲೆಕ್ಟ್ರಾನಿಕ್‌  ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡುವುದು ಸೂಕ್ತವಲ್ಲ. ತೇವಾಂಶ ಮತ್ತು ಧೂಳಿಗೆ ಒಡ್ಡಿಕೊಳ್ಳುವುದರಿಂದ ಅವು ಹಾನಿಗೊಳಗಾಗಬಹುದು.

ಆಹಾರ ಮತ್ತು ಪಾನೀಯಗಳು: ತಿಂಡಿ ಪ್ಯಾಕೆಟ್‌ಗಳು ಮತ್ತು ಸಾಕುಪ್ರಾಣಿಗಳ ಆಹಾರವನ್ನು ಎಂದಿಗೂ ಹಾಸಿಗೆಯ ಕೆಳಗೆ ಸಂಗ್ರಹಿಸಬಾರದು. ಅವುಗಳ ವಾಸನೆಯು ಇರುವೆಗಳು, ಇಲಿಗಳು ಮತ್ತು ಜಿರಳೆಗಳಂತಹ ಕೀಟಗಳನ್ನು ಆಕರ್ಷಿಸುತ್ತದೆ. ಆಹಾರವನ್ನು ಯಾವಾಗಲೂ ಅಡುಗೆಮನೆ ಅಥವಾ ಪ್ಯಾಂಟ್ರಿಯಲ್ಲಿ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.

ಇದರ ಹೊರತಾಗಿ  ಶಾಸ್ತ್ರಗಳ ಪ್ರಕಾರ ಮುರಿದ ಪ್ರತಿಮೆಗಳು, ಒಡೆದ ಗಾಜು, ಕೊಳಕು ಬಟ್ಟೆಗಳು, ಪೊರಕೆ, ಎಲೆಕ್ಟ್ರಾನಿಕ್‌ ಉಪಕರಣ, ಆಭರಣಗಳು, ಹಣ, ಭೂ ಪತ್ರಗಳು, ಶೈಕ್ಷಣಿಕ ದಾಖಲೆಗಳು ಇತ್ಯಾದಿಗಳನ್ನು ಹಾಸಿಗೆಯ ಕೆಳಗೆ ಇಡುವುದರಿಂದ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *