ಹಮೀರ್ಪುರ, ಫೆಬ್ರವರಿ 25: ಮದುವೆ ಎಂಬುದು ಮಕ್ಕಳಾಟವಲ್ಲ, ಇತ್ತೀಚಿನ ದಿನಗಳಲ್ಲಿ ಯಾರನ್ನೋ ಇಷ್ಟ ಪಟ್ಟು ಇನ್ಯಾರನ್ನೋ ಮದುವೆ(Marriage)ಯಾಗಿ, ಬಳಿಕ ಗಂಡನನ್ನು ಕೊಲೆ ಮಾಡಿಸುವ ಪ್ರಕರಣಗಳು ಸಾಕಷ್ಟು ನಮ್ಮ ಕಣ್ಣಮುಂಣದಿವೆ. ಇಲ್ಲೊಬ್ಬ ಮಹಿಳೆ ಮದುವೆಯ ಮರುದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿ ಪತಿ ಬಿಟ್ಟು ಪ್ರೇಮಿಯೊಂದಿಗೆ ಬದುಕುವುದಾಗಿ ಹೇಳಿದ್ದಾಳೆ.
ಮದುವೆಯಾದ ಮರುದಿನವೇ ಮಹಿಳೆ ಗಂಡನ ಬಿಟ್ಟು ಪ್ರೇಮಿಯ ಜತೆ ಬದುಕುವುದಾಗಿ ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ. ಮದುವೆಯಾದ ಮರುದಿನ ಬೆಳಿಗ್ಗೆ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಬಂದು ತನ್ನ ಗಂಡನ ಬದಲು ತನ್ನ ಪ್ರೇಮಿಯೊಂದಿಗೆ ವಾಸಿಸಲು ಬಯಸುವುದಾಗಿ ಹೇಳಿದ್ದು, ಕೆಲವೇ ಗಂಟೆಗಳಲ್ಲಿ ವಿವಾಹ ಕೊನೆಗೊಂಡಿತ್ತು.
ಮಂಗಳವಾರ ತಡರಾತ್ರಿ ವಿವಾಹವಾದ ಮಹಿಳೆಯನ್ನು ಪತಿಯ ಮನೆಗೆ ಕರೆದೊಯ್ಯಲಾಯಿತು, ಆದರೆ ಮದುವೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿ ಬೆಳಗಿನ ಜಾವ ಪೊಲೀಸ್ ಠಾಣೆಗೆ ತೆರಳಿದ್ದರು ಎನ್ನಲಾಗಿದೆ.
ಅಲ್ಲಿ, ಕುಟುಂಬದ ಒತ್ತಡದಿಂದ ತನ್ನ ಮೇಲೆ ಬಲವಂತವಾಗಿ ಮದುವೆ ಮಾಡಲಾಗಿದೆ ಮತ್ತು ಬದಲಿಗೆ ತನ್ನ ಪ್ರೇಮಿಯೊಂದಿಗೆ ವಾಸಿಸಲು ಬಯಸಿರುವುದಾಗಿ ಆಕೆ ಅಧಿಕಾರಿಗಳಿಗೆ ಹೇಳಿದ್ದಾಳೆ.
ಪೊಲೀಸರು ಎರಡೂ ಕುಟುಂಬಗಳನ್ನು ಠಾಣೆಗೆ ಕರೆಸಿ ಹಲವಾರು ಗಂಟೆಗಳ ಕಾಲ ಕೌನ್ಸೆಲಿಂಗ್ ನಡೆಸಿದರು. ರಾಜಿ ಮಾಡಿಕೊಳ್ಳುವ ಪ್ರಯತ್ನಗಳ ಬಿಟ್ಟು, ಮಹಿಳೆ ತನ್ನ ನಿರ್ಧಾರದ ಬಗ್ಗೆ ದೃಢವಾಗಿ ನಿಂತಿದ್ದಳು. ಯಾವುದೇ ಹಿಂದಿನ ಸಂಬಂಧದ ಬಗ್ಗೆ ತಿಳಿದಿರಲಿಲ್ಲ ಮತ್ತು ಅವಳ ಇಚ್ಛೆ ಮೊದಲೇ ತಿಳಿದಿದ್ದರೆ ಈ ಮದುವೆಯೇ ಆಗುತ್ತಿರಲಿಲ್ಲ ಎಂದು ವರ ಪೊಲೀಸರಿಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಹಸೆಮಣೆ ಏರಬೇಕಿದ್ದ ದಿನವೇ ಇಬ್ಬರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ
ಒಟ್ಟಿಗೆ ಬಾಳುವ ಯಾವುದೇ ಸಾಧ್ಯತೆ ಇಲ್ಲದ ಕಾರಣ, ಎರಡೂ ಕಡೆಯವರು ಅದೇ ದಿನ ಪರಸ್ಪರ ಒಪ್ಪಿಗೆಯ ಮೂಲಕ ಬೇರೆಯಾಗಲು ಒಪ್ಪಿಕೊಂಡರು. ಮಹಿಳೆ ತನ್ನ ಕುಟುಂಬದೊಂದಿಗೆ ಹಿಂತಿರುಗಿದಳು, ಆದರೆ ವರನ ಕುಟುಂಬವು ಔಪಚಾರಿಕವಾಗಿ ಮದುವೆ ರದ್ದು ಮಾಡಲು ಕ್ರಮಗಳನ್ನು ಪ್ರಾರಂಭಿಸಿತು.
ಎರಡೂ ಕಡೆಯವರು ಬೇರೆಯಾಗಲು ಒಪ್ಪಿಕೊಂಡಿದ್ದಾರೆ. ಮಹಿಳೆ ತನ್ನ ಕುಟುಂಬದೊಂದಿಗೆ ಹಿಂತಿರುಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
