ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ’ಮುದ್ದುಸೊಸೆ’ ಧಾರಾವಾಹಿಗೆ ದೊಡ್ಡ ವೀಕ್ಷಕರ ಬಳಗ ಇದೆ. ಈ ಧಾರಾವಾಹಿಯು ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯು ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ತ್ರಿವಿಕ್ರಂ ಹಾಗೂ ಪ್ರತಿಮಾ ಠಾಕೂರ್ ಅವರು ಇದರಲ್ಲಿ ನಟಿಸುತ್ತಿದ್ದಾರೆ. ಆರಂಭದಿಂದಲೂ ತನ್ನ ವೇಗವಾದ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಈ ಧಾರಾವಾಹಿ ಮನೆ ಮಾತಾಗಿದೆ.
ಕಥಾನಾಯಕಿ ವಿದ್ಯಾಳ ಬಾಳಲ್ಲಿ ಬಿರುಗಾಳಿ ಬೀಸುವಂತೆ ಘಟನೆ ನಡೆದಿದೆ. ಆಕೆ ಅಗ್ನಿಪರೀಕ್ಷೆಗೆ ಸಿದ್ಧಳಾಗಿದ್ದಾಳೆ. ಕೇವಲ ಸಂಸಾರದ ಕಲಹವಲ್ಲದೆ, ಅಸ್ತಿತ್ವ ಮತ್ತು ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ. ಒಂದೇ ತಿಂಗಳಲ್ಲಿ ಈ ಧಾರಾವಾಹಿ ಎಂಟಕ್ಕೂ ಅಧಿಕ ತಿರುವುಗಳನ್ನು ಪಡೆದುಕೊಂಡಿತ್ತು. ಈ ಮೂಲಕ ವೇಗವಾಗಿ ಧಾರಾವಾಹಿಯ ಕಥೆಸಾಗುತ್ತಿದೆ ಎಂಬುದರ ಸೂಚನೆ ಇದಾಗಿದೆ. ಈಗ ಮತ್ತೊಂದ ಟ್ವಿಸ್ಟ್ ಜೊತೆಗೆ ಆಗಮಿಸಲಾಗುತ್ತಿದೆ.
ಭದ್ರ ಮತ್ತು ವಿನಂತಿ ಒಂದೇ ಹಾಸಿಗೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದು ವಿರೋಧಿಗಳ ಪ್ಲ್ಯಾನ್. ಇವರ ಸಂಸಾರ ಹಾಳು ಮಾಡಲು ನಡೆದಿರುವ ಕುತಂತ್ರ. ಈ ಹಠಾತ್ ಬೆಳವಣಿಗೆಯಿಂದ ಕುಪಿತನಾದ ಭದ್ರನ ತಂದೆ ಶಿವರಾಮೇಗೌಡ ಮಗ ಹಾಗೂ ವಿನಂತಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾನೆ.
ಈ ವೇಳೆ ವಿದ್ಯಾಳ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಮಾವ ಇಟ್ಟಿದ್ದಾನೆ. ವಿಚ್ಛೇದನ ಕೊಡೋದು ಹಾಗೂ ಶೇ.50 ಆಸ್ತಿ ಪಡೆದು ಮನೆಯಿಂದ ಹೊರ ಹೋಗುವುದು ಅಥವಾ ಭದ್ರನ ಮೊದಲ ಪತ್ನಿಯಾಗಿ ಮನೆಯಲ್ಲೇ ಉಳಿದುಕೊಳ್ಳಬೇಕು. ಈಗ ವಿದ್ಯಾಳು, ಭದ್ರನ ಎರಡನೇ ಮದುವೆಗೆ ಸಮ್ಮತಿಸಿ, ಮನೆಯಲ್ಲೇ ಉಳಿಯೋದಾಗಿ ಹೇಳಿದ್ದಾನೆ.
ಇದನ್ನೂ ಓದಿ: ಕಲರ್ಸ್ ಕನ್ನಡ ‘ಯಜಮಾನ’ ಧಾರಾವಾಹಿಗೆ ಯಮುನಾ ಶ್ರೀನಿಧಿ ಎಂಟ್ರಿ
ಇಡೀ ಪ್ರಪಂಚವೇ ಭದ್ರನ ಮೇಲೆ ಬೆರಳು ತೋರಿಸುತ್ತಿದ್ದರೂ, ತನ್ನ ಪತಿಯ ಮೇಲೆ ವಿದ್ಯಾಳಿಗೆ ಅಚಲವಾದ ನಂಬಿಕೆಯಿದೆ. ತನ್ನ ಗಂಡನ ವಿರುದ್ಧ ದೊಡ್ಡ ಪಿತೂರಿ ನಡೆದಿದೆ ಎಂಬ ಸತ್ಯವನ್ನು ಅರಿತಿರುವ ವಿದ್ಯಾ, ಆಸ್ತಿ ಅಥವಾ ರಾಜಿ ಯಾವುದಕ್ಕೂ ಬಗ್ಗದೆ ತನ್ನ ಮೌಲ್ಯಗಳಿಗಾಗಿ ನಿಂತಿದ್ದಾಳೆ. ಇದು ಸುಳ್ಳು ಎಂಬುದನ್ನು ಆಕೆ ಸಾಬೀತು ಮಾಡುವಳಿದ್ದಾಳೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
