72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು (ಜುಲೈ 18) ಘೋಷಣೆ ಆಗಿದೆ. ಇದರಲ್ಲಿ ಯಾಮಿ ಗೌತಮ್ ಅಭಿನಯದ ‘ಆರ್ಟಿಕಲ್ 370’ ಸಿನಿಮಾ ಭರ್ಜರಿ ಯಶಸ್ಸು ದಾಖಲಿಸಿದೆ. ಇಂದು ಪ್ರಕಟವಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಈ ಚಿತ್ರ ಬರೋಬ್ಬರಿ ಮೂರು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇದು ಯಾಮಿ ಗೌತಮ್ ಹಾಗೂ ನಿರ್ಮಾಪಕ ಆದಿತ್ಯ ಧಾರ್ ಅವವರಿಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.
ಚಿತ್ರದ ಈ ಅದ್ಭುತ ಸಾಧನೆಗೆ ಆಪ್ತರು ಹಾಗೂ ಸಿನಿಮಾ ತಂತ್ರಜ್ಞರು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಆದಿತ್ಯ ರಾಜ್ ಕೌಲ್ ಎಂಬುವವರು ಟ್ವೀಟ್ ಮಾಡಿ, ‘ನನ್ನ ಸ್ನೇಹಿತರಾದ ಯಾಮಿ ಗೌತಮ್ ಮತ್ತು ಆದಿತ್ಯ ಧರ್ ಅವರಿಗೆ ಅಭಿನಂದನೆಗಳು. ನಮ್ಮ ‘ಆರ್ಟಿಕಲ್ 370’ ಚಿತ್ರಕ್ಕೆ ಇಂದು ಮೂರು ಪ್ರಮುಖ ರಾಷ್ಟ್ರೀಯ ಪ್ರಶಸ್ತಿಗಳು ಘೋಷಣೆಯಾಗಿರುವುದು ಖುಷಿ ಮೂಡಿಸಿದೆ. ಇದು ಕೇವಲ ಆರಂಭವಷ್ಟೇ’ ಎಂದು ಬರೆದುಕೊಂಡಿದ್ದಾರೆ.
ಯಾವೆಲ್ಲಾ ಪ್ರಶಸ್ತಿಗಳು ಸಿಕ್ಕಿವೆ?
Many Congratulations to my friends @yamigautam & @AdityaDharFilms for 3 major National Awards announced today for our film Article 370. As a consultant for the film, feel thrilled.
Best Actress – Yami Gautam
Best Feature Film – Article 370
Best Music Director – @shashwatology… pic.twitter.com/a4zvKDDNae— Aditya Raj Kaul (@AdityaRajKaul) July 18, 2026
ಅತ್ಯುತ್ತಮ ನಟಿ: ಯಾಮಿ ಗೌತಮ್ (ಆರ್ಟಿಕಲ್ 370)
ಅತ್ಯುತ್ತಮ ಪ್ರಶಸ್ತಿ ಚಿತ್ರ : ಆರ್ಟಿಕಲ್ 370
ಅತ್ಯುತ್ತಮ ಸಂಗೀತ ನಿರ್ದೇಶಕ: ಶಾಶ್ವತ್ ಸಚದೇವ್ (ಆರ್ಟಿಕಲ್ 370)
‘ಆರ್ಟಿಕಲ್ 370’ ಸಿನಿಮಾ ಬಗ್ಗೆ:
‘ಆರ್ಟಿಕಲ್ 370’ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತ ಸರ್ಕಾರದ ಐತಿಹಾಸಿಕ ತೀರ್ಮಾನದ ಹಿನ್ನೆಲೆಯನ್ನು ಹೊಂದಿರುವ ರಾಜಕೀಯ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಯಾಮಿ ಗೌತಮ್ ಇದರಲ್ಲಿ ಇಂಟೆಲಿಜೆನ್ಸ್ ಅಧಿಕಾರಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದು, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆ ಗಳಿಸಿತ್ತು. ಕಾಶ್ಮೀರದ ಸೂಕ್ಷ್ಮ ಪರಿಸ್ಥಿತಿ, ರಾಜಕೀಯ ತಂತ್ರಗಾರಿಕೆ ಮತ್ತು ಭಯೋತ್ಪಾದನೆ ನಿಗ್ರಹದ ಸುತ್ತ ಸಾಗುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಭಾರಿ ಸದ್ದು ಮಾಡಿತ್ತು.
ಇದನ್ನೂ ಓದಿ:
ಯಶಸ್ಸಿನ ಅಲೆ
ಆದಿತ್ಯ ಧಾರ್ ಅವರು ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ಈ ಸಿನಿಮಾಗೆ ಸಾಕಷ್ಟು ಅವಾರ್ಡ್ ಸಿಗೋ ಸೂಚನೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:58 pm, Sat, 18 July 26
