ಮೇ 2026ರ ಗ್ರಹಗತಿಗಳ ಆಧಾರದ ಮೇಲೆ ಕುಂಭ ರಾಶಿಯವರಿಗೆ ಈ ತಿಂಗಳ ಭವಿಷ್ಯ ಹಲವು ತಿರುವುಗಳಿಗೆ ಕಾರಣವಾಗಲಿದೆ. ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ ನಕ್ಷತ್ರದವರಿಗೆ ಗ್ರಹಗಳ ಪ್ರಭಾವ ಇರಲಿದೆ. ಸಾಡೆಸಾಥ್ ನ ಕೊನೆಯ ಭಾಗವಾದ ಕಾರಣ ತೊಂದರೆ ಹೆಚ್ಚು ಕಾಣಿಸಲಿದೆ.
ಶುಭ ದಶೆ :
ಗುರು ಬಲ :
ಕುಂಭ ರಾಶಿಯವರಿಗೆ ಗುರುವು ಪಂಚಮ ಸ್ಥಾನದಲ್ಲಿದ್ದಾನೆ. ಇದು ಅತ್ಯಂತ ಶುಭಕರ. ಬುದ್ಧಿಶಕ್ತಿ ಚುರುಕಾಗುತ್ತದೆ, ಗೌರವ ವೃದ್ಧಿಯಾಗುತ್ತದೆ. ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಸುಖದಾಯಕ ವಾರ್ತೆಗಳು ಸಿಗಲಿವೆ.
ಶುಕ್ರ ಸ್ವಸ್ಥಾನ :
ಶುಕ್ರನು ತನ್ನ ಸ್ವಕ್ಷೇತ್ರವಾದ ವೃಷಭದಲ್ಲಿದ್ದಾನೆ. ಮನೆ, ವಾಹನ ಖರೀದಿ ಅಥವಾ ಮನೆಯ ನವೀಕರಣಕ್ಕೆ ಇದು ಸಕಾಲ. ಕಲೆ, ಹವ್ಯಾಸ ಮತ್ತು ಐಷಾರಾಮಿ ಜೀವನದ ಮೇಲೆ ಆಸಕ್ತಿ ಹೆಚ್ಚುತ್ತದೆ.
ರವಿ ಉಚ್ಚ :
ಧೈರ್ಯ ಮತ್ತು ಪರಾಕ್ರಮ ಹೆಚ್ಚುತ್ತದೆ. ಕಿರಿಯ ಸಹೋದರರಿಂದ ಬೆಂಬಲ ಸಿಗಲಿದೆ.
ಅಶುಭ ದಶೆ
ಶನಿ-ಕುಜ-ಬುಧ ಸಂಯೋಗ :
ಇದು ನಿಮ್ಮ ರಾಶಿಯ ಧನ ಸ್ಥಾನ. ಇಲ್ಲಿ ಶನಿ ಮತ್ತು ಕುಜ ಸೇರಿರುವುದರಿಂದ ಅಂಗಾರಕ ಯೋಗ’ ಉಂಟಾಗುತ್ತದೆ. ಮಾತಿನಲ್ಲಿ ಕಟುತ್ವ ಬರಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಸಂಭವಿಸಬಹುದು. ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಖರ್ಚುಗಳು ಎದುರಾಗುತ್ತವೆ.
ಕೃಷಿ ಮತ್ತು ಪರಿಶ್ರಮ :
ಮೀನದಲ್ಲಿರುವ ಶನಿ ನಿಮ್ಮನ್ನು ಕಠಿಣ ದುಡಿಮೆಗೆ ಹಚ್ಚುತ್ತಾನೆ. ಫಲಿತಾಂಶ ತಡವಾದರೂ ನಿಶ್ಚಿತವಾಗಿ ಸಿಗಲಿದೆ. ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವಿದೆ. ಆದರೆ, ಕೆಲಸಗಾರರ ಕೊರತೆ ಅಥವಾ ಯಂತ್ರೋಪಕರಣಗಳ ದುರಸ್ತಿಯಿಂದ ಸ್ವಲ್ಪ ಅಡೆತಡೆ ಉಂಟಾಗಬಹುದು.
ಪ್ರೇಮ ಮತ್ತು ವಿವಾಹ :
ಗುರುವಿನ ದೃಷ್ಟಿ ಇರುವುದರಿಂದ ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ಮನೆಯಲ್ಲಿ ಮಂಗಲ ಕಾರ್ಯದ ಮಾತುಕತೆ ನಡೆಯಲಿದೆ.
ಸ್ವ-ಉದ್ಯೋಗ, ವ್ಯಾಪಾರ ಮತ್ತು ಅಧಿಕಾರ :
ಹೊಸ ಐಡಿಯಾಗಳನ್ನು ಜಾರಿಗೆ ತರಲು ಇದು ಸಕಾಲ. ಲಾಭದ ಪ್ರಮಾಣ ಸಾಧಾರಣವಾಗಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಹೆಚ್ಚಿನ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.
ಹವ್ಯಾಸ ಮತ್ತು ಕಲೆ
ಶುಕ್ರನು ನಾಲ್ಕನೇ ಮನೆಯಲ್ಲಿರುವುದರಿಂದ ಸಂಗೀತ, ಸಾಹಿತ್ಯ, ನೃತ್ಯ ಅಥವಾ ಯಾವುದೇ ಸೃಜನಶೀಲ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮಾಡ್ತೀರಿ. ನಿಮ್ಮ ಪ್ರತಿಭೆಗೆ ವೇದಿಕೆ ದೊರೆಯುವ ಸಾಧ್ಯತೆ ಇದೆ.
ಹೂಡಿಕೆ :
ದೀರ್ಘಕಾಲದ ಹೂಡಿಕೆಗೆ ಶುಕ್ರನ ಬೆಂಬಲವಿದೆ. ಆದರೆ, ಶೇರು ಮಾರುಕಟ್ಟೆ ಅಥವಾ ಅನಿಶ್ಚಿತ ಹೂಡಿಕೆಗಳಲ್ಲಿ ಬುಧ-ಕುಜ ಸಂಯೋಗ ಇರುವುದರಿಂದ ತುರ್ತು ನಿರ್ಧಾರ ಬೇಡ. ಹಣ ಸಿಕ್ಕಿಬೀಳುವ ಸಂಭವವಿರುತ್ತದೆ.
– ಲೋಹಿತ ಹೆಬ್ಬಾರ್