‘ರಾಮಾಯಣ’ ಸಿನಿಮಾದ ಇಂಗ್ಲಿಷ್ ಟ್ರೇಲರ್ ನೋಡಿ ವಿದೇಶಿ ಪ್ರೇಕ್ಷಕರು ಹೇಳಿದ್ದೇನು? – Kannada News | Yash starrer Ramayana movie English trailer Brahma AI Technology fans reaction

ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ (Ramayana) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಗಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಟ್ರೇಲರ್ ಬಗ್ಗೆ ಚರ್ಚೆ ಆಗುತ್ತಿದೆ. ಈ ಇಂಗ್ಲಿಷ್ ಡಬ್ಬಿಂಗ್ ಟ್ರೇಲರ್ (Ramayana English Trailer) ನೋಡಿದ ಪ್ರೇಕ್ಷಕರು, ಇದು ಮೂಲ ಹಿಂದಿ ಆವೃತ್ತಿಗಿಂತಲೂ ಉತ್ತಮವಾಗಿ ಮೂಡಿಬಂದಿದೆ ಎಂದು ಪ್ರಶಂಸಿಸುತ್ತಿದ್ದಾರೆ.

ಪ್ರಸಿದ್ಧ ವಿಎಫ್‌ಎಕ್ಸ್‌ ಸಂಸ್ಥೆ DNEG ಅಭಿವೃದ್ಧಿಪಡಿಸಿರುವ ‘ಬ್ರಹ್ಮ ಎಐ’ ತಂತ್ರಜ್ಞಾನವನ್ನು ಬಳಸಿ ‘ರಾಮಾಯಣ’ ಟ್ರೇಲರ್‌ನ ಲಿಪ್-ಸಿಂಕ್ ಮಾಡಲಾಗಿದೆ. ಕಲಾವಿದರು ಇಂಗ್ಲಿಷ್ ಸಂಭಾಷಣೆಗಳನ್ನು ಹೇಳುವಾಗ ಅವರ ಮುಖ ಹಾಗೂ ತುಟಿಗಳ ಚಲನೆ ಸಂಭಾಷಣೆಗೆ ತಕ್ಕಂತೆ ತಂತಾನೇ ಕರಾರುವಾಕ್ಕಾಗಿ ಹೊಂದಿಕೊಳ್ಳುವುದು ಈ ತಂತ್ರಜ್ಞಾನದ ವೈಶಿಷ್ಟ್ಯ. ನಟರೇ ಸ್ವತಃ ಇಂಗ್ಲಿಷ್‌ನಲ್ಲಿ ಡಬ್ ಮಾಡಿದಂತೆ ಭಾಸವಾಗುತ್ತಿದೆ.

ವಿದೇಶಿ ಪ್ರೇಕ್ಷಕರ ಪ್ರತಿಕ್ರಿಯೆ:

ಪಾಶ್ಚಿಮಾತ್ಯ ಮೈಥಾಲಜಿ ವೀಕ್ಷಿಸುತ್ತಿದ್ದ ಅನೇಕ ವಿದೇಶಿ ಪ್ರೇಕ್ಷಕರು ಈಗ ಇಂಗ್ಲಿಷ್ ಭಾಷೆಯಲ್ಲಿ ಭಾರತೀಯ ಪೌರಾಣಿಕ ಕಥೆಯ ವೈಭವವನ್ನು ನೋಡಿ ಬೆರಗಾಗಿದ್ದಾರೆ. ಅದರಲ್ಲೂ ಇಂದ್ರನ ವಾಹನವಾದ ‘ಐರಾವತ’ (ಹಾರುವ ಬಿಳಿ ಆನೆ) ಮೇಲೆ ರಾವಣ ದಾಳಿ ಮಾಡುವ ದೃಶ್ಯಗಳು ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸಿವೆ. ಈ ಕುರಿತು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ರಿಲೀಸ್ ದಿನಾಂಕದ ಕುತೂಹಲಕ್ಕೆ ತೆರೆ? ಚಿತ್ರತಂಡದ ಪ್ಲ್ಯಾನ್ ಬಹಿರಂಗ

ಆದರೂ ಕೂಡ ಕಲೆವು ಮೂಲ ಇಂಗ್ಲಿಷ್ ಭಾಷಿಕರಿಂದ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಭಾರತೀಯ ಶೈಲಿಯ ಇಂಗ್ಲಿಷ್ ಉಚ್ಚಾರಣೆಯು ಜಾಗತಿಕ ಪ್ರೇಕ್ಷಕರಿಗೆ ಕನೆಕ್ಟ್ ಆಗಲು ಕಷ್ಟವಾಗಬಹುದು. ಆದ್ದರಿಂದ ಅಮೆರಿಕನ್ ಅಥವಾ ಬ್ರಿಟಿಷ್ ಧ್ವನಿ ಕಲಾವಿದರಿಂದ ಡಬ್ ಮಾಡಿಸಿದರೆ ಭಾವನೆಗಳು ಇನ್ನು ಉತ್ತಮವಾಗಿ ತಲುಪುತ್ತವೆ ಎಂದು ಕೆಲವರು ಸಲಹೆ ನೀಡಿದ್ದಾರೆ.

ರಾಮಾಯಣ ಚಿತ್ರದ ಪಾತ್ರವರ್ಗ:

‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಕನ್ನಡಿಗರ ಹೆಮ್ಮೆಯ ನಟ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯಿಸಿದ್ದಾರೆ. ಜೊತೆಗೆ ರವಿ ದುಬೆ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಲಾರಾ ದತ್ತಾ, ಕುನಾಲ್ ಕಪೂರ್ ಮುಂತಾದ ಕಲಾವುದರು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *