WTC Final: ಟೀಂ ಇಂಡಿಯಾ ಡಬ್ಲ್ಯೂಟಿಸಿ ಫೈನಲ್‌ಗೇರಲು ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು? – Kannada News | India’s WTC Final Dream: Qualification Chances for 2026 27 Revealed

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲೆರಡು ಆವೃತ್ತಿಗಳಲ್ಲಿ ಫೈನಲ್​ಗೇರಿದ್ದ ಭಾರತ ತಂಡ ಆ ಎರಡೂ ಆವೃತ್ತಿಗಳ ಫೈನಲ್‌ನಲ್ಲಿ ಎಡವಿತ್ತು. ಇನ್ನು ಮೂರನೇ ಆವೃತ್ತಿಯಲ್ಲಿ ಟೀಂ ಇಂಡಿಯಾಕ್ಕೆ ಫೈನಲ್​ಗೇರಲು ಸಾಧ್ಯವಾಗಿರಲಿಲ್ಲ. ಇದೀಗ ನಾಲ್ಕನೇ ಆವೃತ್ತಿಯಲ್ಲಾದರೂ ಫೈನಲ್​ಗೇರಿ ಚಾಂಪಿಯನ್‌ ಆಗಬೇಕೆಂಬ ಟೀಂ ಇಂಡಿಯಾದ ಕನಸು ನನಸಾಗುವ ಸಾಧ್ಯತೆಗಳು ಕ್ಷಿಣಿಸುತ್ತಿವೆ. ಆದಾಗ್ಯೂ ಗಿಲ್ ಪಡೆಗೆ ಈಗಲೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಫೈನಲ್​ಗೇರುವ ಅವಕಾಶವಿದೆ. ಹಾಗಿದ್ದರೆ ಭಾರತ ತಂಡ ಡಬ್ಲ್ಯೂಟಿಸಿ ನಾಲ್ಕನೇ ಆವೃತ್ತಿಯ ಫೈನಲ್​ಗೇರಲು ಏನು ಮಾಡಬೇಕು? ಉಳಿದಿರುವ ಪಂದ್ಯಗಳಲ್ಲಿ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಪೂರ್ಣ ಲೆಕ್ಕಾಚಾರ ಇಲ್ಲಿದೆ.

ಈ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು ಇನ್ನೂ ಒಂಬತ್ತು ಪಂದ್ಯಗಳನ್ನು ಆಡಬೇಕಾಗಿದೆ. ಶ್ರೀಲಂಕಾ ನಂತರ, ತಂಡವು ನ್ಯೂಜಿಲೆಂಡ್ ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿಯನ್ನು ಆಡಲಿದೆ. ಮುಖ್ಯವಾದ ವಿಷಯವೆಂದರೆ ಈ ಎಲ್ಲಾ ಮೂರು ಸರಣಿಗಳ ಪ್ರತಿಯೊಂದು ಪಂದ್ಯವೂ ಟೀಂ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಪ್ರಸ್ತುತ, ಟೀಂ ಇಂಡಿಯಾ 48.15% ಗೆಲುವಿನ ಶೇಕಡಾವಾರುವಿನೊಂದಿಗೆ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡವು ಈಗ ಪ್ರತಿ ಪಂದ್ಯವನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 74.07 ಕ್ಕೆ ಏರುತ್ತದೆ.

ಭಾರತ ಫೈನಲ್​ಗೇರಬೇಕೆಂದರೆ ಏನು ಮಾಡಬೇಕು?

ಭಾರತ ತಂಡವು ಉಳಿದಿರುವ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಆದಾಗ್ಯೂ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.

ಭಾರತ 7 ಕ್ಕಿಂತ ಕಡಿಮೆ ಪಂದ್ಯಗಳನ್ನು ಗೆದ್ದರೂ ಸಹ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಆದಾಗ್ಯೂ, ಭಾರತ 8 ಅಥವಾ 9 ಪಂದ್ಯಗಳನ್ನು ಗೆದ್ದರೆ, ತಂಡವು ಫೈನಲ್‌ಗೆ ಸುರಕ್ಷಿತವಾಗಿ ಮತ್ತು ಆರಾಮವಾಗಿ ತಲುಪುತ್ತದೆ. ಆದಾಗ್ಯೂ ಟೀಂ ಇಂಡಿಯಾದ ಮುಂದಿನ ಹಾದಿ ಅಷ್ಟು ಸುಲಭವಲ್ಲ. ಏಕೆಂದರೆ ತಂಡದ ಮುಂದಿನ 4 ಪಂದ್ಯಗಳು ವಿದೇಶಿ ನೆಲದಲ್ಲಿ ನಡೆಯುತ್ತವೆ ಮತ್ತು ಕೊನೆಯ 5 ಪಂದ್ಯಗಳು ನಂಬರ್ 1 ಶ್ರೇಯಾಂಕಿತ ತಂಡವಾದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತವೆ.

ಇದೆಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಟೀಂ ಇಂಡಿಯಾ 7 ಪಂದ್ಯಗಳನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 62.96 ಕ್ಕೆ ಏರಲಿದೆ. ಇತ್ತ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ನ ಶೇಕಡಾವಾರು ಕೂಡ ಕಡಿಮೆಯಾಗಬೇಕಾಗುತ್ತದೆ.

ಭಾರತ 8 ಪಂದ್ಯಗಳನ್ನು ಗೆದ್ದರೆ, ಅದರ ಗೆಲುವಿನ ಶೇಕಡಾವಾರು 68.52 ಕ್ಕೆ ಏರಲಿದೆ. ಒಂದು ವೇಳೆ ಒಂಬತ್ತಕ್ಕೆ 9 ಪಂದ್ಯಗಳನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 70 ಕ್ಕೆ ಏರಲಿದೆ. ಇದು ಸಾಧ್ಯವಾದರೆ ಟೀಂ ಇಂಡಿಯಾ ಸುಲಭವಾಗಿ ಫೈನಲ್‌ಗೇರುತ್ತದೆ.

Source link

Leave a Reply

Your email address will not be published. Required fields are marked *