ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರಿಗಾಗಿ (Kichcha Sudeep) ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಐಷಾರಾಮಿ ಕ್ಯಾರವನ್ ಒಂದು ಸಿದ್ಧವಾಗಿ ಬಂದಿದೆ. ಸದ್ಯ ಸ್ಯಾಂಡಲ್‌ವುಡ್ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬೆಲೆಯ ಕ್ಯಾರವನ್ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ಕ್ಯಾರವನ್‌ನ ಒಟ್ಟು ಬೆಲೆ ಬರೋಬ್ಬರಿ ಸುಮಾರು 6.5 ಕೋಟಿ ರೂಪಾಯಿ. ಖ್ಯಾತ ಡಿಸೈನರ್ ದಿಲೀಪ್ ಛಾಬ್ರಿಯಾ ಅವರು ಕ್ರಿಯೇಟ್ ಮಾಡಿರುವ ‘DC2’ ಸಂಸ್ಥೆಯ ಜಿಮ್ ಮಾಡ್ಯುಲರ್ ಕ್ಯಾರವನ್ ಇದಾಗಿದ್ದು, ಸುದೀಪ್ ಅವರ ಇಷ್ಟಕ್ಕೆ ತಕ್ಕಂತೆ ಇದನ್ನು ಕಸ್ಟಮೈಸ್ ಮಾಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಕ್ಯಾರವಾನ್ ರೆಡಿ ಆಗಿದೆ.
ಈ ಐಷಾರಾಮಿ ಕ್ಯಾರವನ್‌ನ ಮತ್ತೊಂದು ವಿಶೇಷವೆಂದರೆ, ಇದರ ಮೇಲೆ ಕಿಚ್ಚ ಸುದೀಪ್ ಅವರ ಹೆಸರನ್ನು ಸೂಚಿಸುವ ‘K’ (ಕಿಚ್ಚ) ಎಂಬ ಸಿಂಬಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಟ ಸುದೀಪ್ ಅವರು ತಮ್ಮ ಕಾರಿನ ಮೇಲೂ ಇದೇ ರೀತಿಯ ಸಿಂಬಲ್ ಹೊಂದಿದ್ದು, ಈಗ ಅದೇ ಲೋಗೋವನ್ನು ತಮ್ಮ ಹೊಸ ಕ್ಯಾರವನ್ ಮೇಲೂ ಹಾಕಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಕ್ಯಾರವನ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಇನ್ನು ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಶೂಟಿಂಗ್ ಜೂನ್ 26ರಿಂದ ಭರ್ಜರಿಯಾಗಿ ಕಿಕ್ ಸ್ಟಾರ್ಟ್ ಆಗಿದೆ. ಸುಮಾರು ಒಂದು ವರ್ಷದ ದೀರ್ಘ ಬಿಡುವಿನ ಬಳಿಕ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭಗೊಂಡಿದೆ. ಕನಕಪುರದ ಬಳಿ ಬೃಹತ್ ಆದ ಸೆಟ್ ಒಂದನ್ನು ನಿರ್ಮಿಸಲಾಗಿದ್ದು, ಅಲ್ಲಿ ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಿಚ್ಚ ಸುದೀಪ್?
‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್ ಅಡ್ಡಾಗೆ ಸುದೀಪ್ ಅವರ ಈ ಕಾಸ್ಟ್ಲಿ ಕ್ಯಾರವನ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಶೂಟಿಂಗ್ ಸೆಟ್‌ನಲ್ಲಿ ನಿಂತಿರುವ ಈ ಐಷಾರಾಮಿ ವಾಹನದ ಲುಕ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗಾಂಧಿನಗರದ ಅಂಗಳದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಸುದೀಪ್ ಅವರಿಗೆ ಮೊದಲಿನಿಂದಲೂ ವಾಹನಗಳ ಬಗ್ಗೆ ಕ್ರೇಜ್ ಇದೆ. ಈಗ ಅವರ ಗ್ಯಾರೇಜ್ ಸೇರಿರೋ ಕ್ಯಾರವಾನ್ ಅವರ ಎಲ್ಲ ವಾಹನಗಳನ್ನು ಮೀರಿಸುವಂತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 11:59 am, Sat, 27 June 26
